Site icon Vistara News

MS Dhoni: ಧೋನಿಗೆ ವಿಷ್ಣುವಿನ ಮೂರ್ತಿ ಉಡುಗೊರೆ ನೀಡಿದ ಅಭಿಮಾನಿ

MS Dhoni

ಚೆನ್ನೈ: ಎಂ.ಎಸ್.ಧೋನಿ, ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧೋನಿ(MS Dhoni) ಕೂಡ ತಮ್ಮ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿ ತೋರುತ್ತಾರೆ. ಅಭಿಮಾನಿಗಳ ಒತ್ತಾಸೆಯಕ್ಕೆ ಮಣಿದು ತಮ್ಮ ಐಪಿಎಲ್​ ನಿವೃತ್ತಿಯನ್ನು ಕೂಡ ಮುಂದೂಡಿದ್ದರು. ಇದೀಗ 17ನೇ ಆವೃತ್ತಿಯ ಐಪಿಎಲ್​ಗಾಗಿ(IPL 2024) ಧೋನಿ ಚೆನ್ನೈಯಲ್ಲಿ ಬರದಿಂದ ಅಭ್ಯಾಸ ಆರಂಭಿಸಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬ ಧೋನಿಯನ್ನು ಭೇಟಿಯಾಗಿ ವಿಷ್ಣುವಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್​ ಸಿದ್ಧತೆಯಲ್ಲಿರುವ ಧೋನಿಯನ್ನು ಸೋಮವಾರ ಅಭಿಮಾನಿಯೊಬ್ಬರು ಭೇಟಿ ಮಾಡಿ ಸಾಲು ಹೊದಿಸಿ ಸನ್ಮಾನಿಸಿದ್ದಾರೆ. ಜತೆಗೆ ಶ್ರೀ ವಿಷ್ಣುವಿನ ಮೂರ್ತಿಯನ್ನು ನೀಡಿದ್ದಾರೆ. ಇದನ್ನು ಧೋನಿ ಸಂತಸದಿಂದಲೇ ಸ್ವೀಕರಿಸಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಧೋನಿಗೆ ಆಹ್ವಾನ ನೀಡಲಾಗಿತ್ತು. ಆದರೆ ಧೋನಿ ಕಾರಣಾಂತರಗಳಿಂದ ಪಾಲ್ಗೊಂಡಿರಲಿಲ್ಲ.

ಇದನ್ನೂ ಓದಿ MS Dhoni: ಐಪಿಎಲ್​ನಲ್ಲಿ ಅಬ್ಬರಿಸಲು ಧೋನಿ ರೆಡಿ; ಅಭ್ಯಾಸದ ವೇಳೆ ಸಿಕ್ಸರ್​ಗಳ ಸುರಿಮಳೆ

ವಿದಾಯ ಟೂರ್ನಿ


ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ(chennai super kings) ತಂಡ ಆರ್​ಸಿಬಿ ವಿರುದ್ಧ ಮಾರ್ಚ್ 22ರಂದು ನಡೆಯುವ ಉದ್ಘಾಟನ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಹುಕ್ಕಾ ಸೇದಿ ಸಿಕ್ಕಿ ಬಿದ್ದ ಧೋನಿ


ಹೊಸ ವರ್ಷಾಚರಣೆ ವೇಳೆ ಧೋನಿ ಹುಕ್ಕಾ ಸೇದುವ(MS Dhoni smoking hookah) ವಿಡಿಯೊ ವೈರಲ್​ ಆಗಿತ್ತು. ಇದನ್ನು ಕಂಡು ಅವರ ಅಭಿಮಾನಿಗಳು ದಂಗಾಗಿದ್ದರು. ಬೈಕ್​ ಮತ್ತು ಕಾರುಗಳ ಮೇಲೆ ಅಪಾರ ಕ್ರೇಜ್​ ಇರುವ ಧೋನಿಗೆ ಹುಕ್ಕಾ ಸೇದುವ ಚಟವಿದೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಹಿಂದೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್​ ಬೈಲಿ ಸಂದರ್ಶನವೊಂದರಲ್ಲಿ ಧೋನಿಗೆ ಅಪಾರ ಹುಕ್ಕಾ ಸೇದುವ ಚಟವಿದೆ ಎಂದು ಹೇಳಿದ್ದರು. ಯುವ ಕ್ರಿಕೆಟಿಗರೊಂದಿಗೆ ತಮ್ಮ ಕೊಠಡಿಯಲ್ಲಿ ಕೂತು ಮಾತನಾಡುವ ವೇಳೆ ಧೋನಿ ಹುಕ್ಕಾ ಸೇದುತ್ತಾರೆ ಎಂದು ಹೇಳಿದ್ದರು. ಆದರೆ ಬೈಲಿಯ ಈ ಮಾತನ್ನು ಯಾರು ಕೂಡ ನಂಬಿರಲಿಲ್ಲ. ಬೈಲಿ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಧೋನಿ ಅವರು ಹುಕ್ಕ ಸೇದುವಾಗಲೇ ಪ್ರತ್ಯಕ್ಷವಾಗಿ ಸಿಕ್ಕಿ ಬಿದ್ದ ಬಳಿಕ ಬೈಲಿ ಹೇಳಿದ ಮಾತನ್ನು ನಿಜ ಎಂದು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ.

Exit mobile version