ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ 67ನೇ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು 77 ರನ್ಗಳಿಂದ ಹೀನಾಯವಾಗಿ ಸೋಲಿಸಿತು. ಈ ಗೆಲುವಿನೊಂದಿಗೆ ನಾಲ್ಕು ಬಾರಿಯ ಚಾಂಪಿಯನ್ ಭಾರತ ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಅಂಕಪಟ್ಟಿಯಲ್ಲಿ ಎರಡನೇ ರ್ಯಾಂಕ್ ಪಡೆದಿರುವ ಚೆನ್ನೈ ತಂಡ ಪ್ರಥಮ ಸ್ಥಾನ ಪಡೆದಿರುವ ಗುಜರಾತ್ ಜೈಂಟ್ಸ್ ವಿರುದ್ಧ ಆಡಬೇಕಾಗಿದೆ.
ಹಾಲಿ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅತ್ಯುತ್ತಮ ಟ್ರ್ಯಾಕ್ನಲ್ಲಿ ಕೊಂಡೊಯ್ದಿರುವ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೇ ಟೂರ್ನಿ ಎಂದು ಹೇಳಲಾಗುತ್ತದೆ. ಇದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ. ಹೀಗಾಗಿ ಅವರ ಅಪ್ಪಟ ಅಭಿಮಾನಿಗಳು ನಾನಾ ರೀತಿಯಲ್ಲಿ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಅಂತೆಯೇ ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಅಭಿಮಾನಿಯೊಬ್ಬರು ವಿಶೇಷ ಗಿಫ್ಟ್ ನೀಡಿದ್ದಾರೆ. ಅದರು ಚೆನ್ನೈನ ಅಪ್ರತಿಮ ಚೆಪಾಕ್ ಕ್ರೀಡಾಂಗಣದ ಮಿನಿಯೇಚರ್ ಪ್ರತಿರೂಪರವಾಗಿದೆ. ಶಿವ ಕುಮಾರ್ ಮತ್ತು ರಾಜೇಶ್ ನಿತೀಶ್ ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟ್ ಅನ್ನು ಧೋನಿ ಇಷ್ಟಪಟ್ಟಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ಗೆ 77 ರನ್ಗಳ ಭರ್ಜರಿ ಜಯ
67ನೇ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ. ಅವರು ಮೊದಲ ವಿಕೆಟ್ಗೆ 141 ರನ್ಗಳ ಜತೆಯಾಟ ನೀಡಿದರು. ಗಾಯಕ್ವಾಡ್ 50 ಎಸೆತಗಳಲ್ಲಿ 79 ರನ್ ಗಳಿಸಿದರೆ, ಕಾನ್ವೆ 52 ಎಸೆತಗಳಲ್ಲಿ 87 ರನ್ ಗಳಿಸಿದರು. ಶಿವಂ ದುಬೆ (9 ಎಸೆತಗಳಲ್ಲಿ 22 ರನ್) ಮತ್ತು ರವೀಂದ್ರ ಜಡೇಜಾ (7 ಎಸೆತಗಳಲ್ಲಿ 20* ರನ್) ಅವರ ಅರ್ಧಶತಕದ ಜತೆಯಾಟದ ಮೂಲಕ 20 ಓವರ್ಗಳಲ್ಲಿ 223 ರನ್ ಕಲೆಹಾಕಿತು. ಡೆಲ್ಲಿ ಪರ ಚೇತನ್ ಸಕಾರಿಯಾ, ಖಲೀಲ್ ಅಹ್ಮದ್ ಹಾಗೂ ಅನ್ರಿಚ್ ನೋರ್ಜೆ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ : IPL 2023 : ಮುಂದಿನ ವರ್ಷ ನಮ್ದೇ ಹವಾ ಎಂಬ ಮಾತು ಉಳಿಸಿಕೊಂಡ ಮಹೇಂದ್ರ ಸಿಂಗ್ ಧೋನಿ!
ಡೆಲ್ಲಿ ಪರ ಚೇಸಿಂಗ್ನಲ್ಲಿ ಆಟಗಾರ ಪೃಥ್ವಿ ಶಾ ಅವರನ್ನು ಔಟ್ ಮಾಡುವ ಮೂಲಕ ತುಷಾರ್ ದೇಶಪಾಂಡೆ ಸಿಎಸ್ಕೆಗೆ ಆರಂಭಿಕ ಯಶಸ್ಸನ್ನು ತಂದುಕೊಟ್ಟರು. ದೀಪಕ್ ಚಾಹರ್ ಎರಡು ರನ್ ಗಳಿಸಿ ಫಿಲ್ ಸಾಲ್ಟ್ ಅವರನ್ನು ಮೂರು ರನ್ಗಳಿಗೆ ಔಟ್ ಮಾಡಿದರು. ಬಳಿ ರಿಲೀ ರೊಸ್ಸೌ ಶೂನ್ಯಕ್ಕೆ ಔಟ್ ಆದರು. ಏತನ್ಮಧ್ಯೆ, ನಾಯಕ ಡೇವಿಡ್ ವಾರ್ನರ್ 58 ಎಸೆತಗಳಲ್ಲಿ 86 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್ಗಳಲ್ಲಿ 146 ರನ್ಗಳಿಗೆ ಸೀಮಿತಗೊಂಡಿತು. ಸಿಎಸ್ಕೆ ಪರ ದೀಪಕ್ ಚಾಹರ್ 3 ವಿಕೆಟ್ ಕಿತ್ತರೆ, ಮಹೇಶ್ ತೀಕ್ಷಣಾ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಮಥೀಶಾ ಪತಿರಾನಾ ತಲಾ 2 ವಿಕೆಟ್ ಪಡೆದರು.