ಬೆಂಗಳೂರು: ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ಕ.ಎಲ್ ರಾಹುಲ್ ನೆದರ್ಲ್ಯಾಂಡ್ಸ್ ವಿರುದ್ಧದದ ವಿಶ್ವ ಕಪ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಅರು ಈ ಪಂದ್ಯದಲ್ಲಿ ಶತಕ ಬಾರಿಸಿದ ಎರಡನೇ ಆಟಗಾರ. ಅವರಿಗಿಂತ ಮೊದಲು ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಶತಕ ಬಾರಿಸಿದ್ದಾರೆ. ಆದರೆ, ರಾಹುಲ್ ಪಾಲಿಗೆ ಈ ಶತಕ ವಿಶೇಷ ಸಾಧನೆಯಾಗಿದೆ.
📸📸 HUNDRED off just 62 deliveries 👏👏
— BCCI (@BCCI) November 12, 2023
A marvellous knock that from KL Rahul 🔝#TeamIndia | #CWC23 | #MenInBlue | #INDvNED pic.twitter.com/D6dwgfYE1n
ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು.
ಇದನ್ನೂ ಓದಿ: Rohit Sharma: ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್ ಶರ್ಮ
ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸುವ ಹಾದಿಯಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳನ್ನು ಬಾರಿಸಿದರು, ಇದು ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ (410/4) ಮುನ್ನಡೆಸಿತು. ಇದು ರಾಹುಲ್ ಅವರ ಆರನೇ ಏಕದಿನ ಶತಕವಾಗಿದೆ. ಭಾರತದ 5ನೇ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಜೊತೆಗೂಡಿ 208 ರನ್ಗಳ ಜೊತೆಯಾಟವಾಡಿದ್ದು, ಇದು ಏಕದಿನ ವಿಶ್ವಕಪ್ನಲ್ಲಿ ನಾಲ್ಕನೇ ವಿಕೆಟ್ಗೆ ಅತಿ ಹೆಚ್ಚು ರನ್ಗಳ ಜೊತೆಯಾಟದ ದಾಖಲೆಯಾಗಿದೆ.
ವಿಶ್ವಕಪ್ ನಲ್ಲಿ ಭಾರತದ ಆಟಗಾರರ ವೇಗದ ಶತಕ (ಎಸೆತಗಳ ಪ್ರಕಾರ )
- 62 – ಕೆಎಲ್ ರಾಹುಲ್ ವಿರುದ್ಧ ನೆದರ್ಲ್ಯಾಂಡ್ಸ್ , ನ. 12, 2023
- 63 – ರೋಹಿತ್ ಶರ್ಮಾ ವಿರುದ್ಧ ಆಫ್ಘನ್ 2023
- 81 – ವೀರೇಂದ್ರ ಸೆಹ್ವಾಗ್ ವಿರುದ್ಧ ಬಿಇಆರ್, 2007
- 83 – ವಿರಾಟ್ ಕೊಹ್ಲಿ ವಿರುದ್ಧ ಬ್ಯಾನ್, 2011
ಬೃಹತ್ ಮೊತ್ತ ಪೇರಿಸಿದ ಭಾರತ
ಶ್ರೇಯಸ್ ಅಯ್ಯರ್ (ಅಜೇಯ 128) ಮತ್ತು ಕೆ. ಎಲ್ ರಾಹುಲ್ (102) ಅವರ ಶತಕಗಳು ಹಾಗೂ ಶುಭ್ಮನ್ ಗಿಲ್ (61), ರೋಹಿತ್ ಶರ್ಮಾ (61) ವಿರಾಟ್ ಕೊಹ್ಲಿ (51) ಹಾಗೂ ಅವರ ಅರ್ಧ ಶತಕಗಳ ನೆರವು ಪಡೆದ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧದದ ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡ 410 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಬ್ಯಾಟರ್ಗಳ ಸ್ವರ್ಗ ಎನಿಸಿರುವ ಬೆಂಗಳೂರಿನ ಮೈದಾನದಲ್ಲಿ ಭಾರತೀಯ ಬ್ಯಾಟರ್ಗಳು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ರನ್ಗಳ ಮಳೆಯನ್ನೇ ಸುರಿಸಿದರು. ಹೀಗಾಗಿ ಡಚ್ಚರ ಗೆಲುವಿಗೆ 4111 ರನ್ಗಳ ಗುರಿ ಎದುರಾಗಿದೆ. ಈ ಮೂಲಕ ಭಾರತ ತಂಡ ವಿಶ್ವ ಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ 400 ರನ್ಗಳಿಗಿಂತ ಅಧಿಕ ಮೊತ್ತವನ್ನು ಬಾರಿಸಿತು. 2007ರ ವಿಶ್ವ ಕಪ್ನಲ್ಲಿ ಬರ್ಮುಡಾ ವಿರುದ್ಧ 5 ವಿಕೆಟ್ 413 ರನ್ ಬಾರಿಸಿತ್ತು.
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್ಗಳನ್ನು ಗಳಿಸುತ್ತಾ ಬಂದು ಡಚ್ಚರ ಪಡೆಗೆ ದೊಡ್ಡ ಮೊತ್ತದ ಗುರಿಯನ್ನು ಒಡ್ಡಿತು.