Site icon Vistara News

IPL 2023: ಕೇಶವಿನ್ಯಾಸದಲ್ಲಿ ಅರಳಿದ ಆರ್​ಸಿಬಿ, ವಿರಾಟ್​ ಕೊಹ್ಲಿ ಚಿತ್ರ

IPL 2023

ಮುಂಬಯಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ಲೇ ಆಫ್​ ಗೇರುವ ಚಿಂತೆಯಲ್ಲಿದ್ದರೆ, ಅತ್ತ ಆರ್​ಸಿಬಿ ಮತ್ತು ವಿರಾಟ್​ ಕೊಹ್ಲಿಯ ಅಭಿಮಾನಿಯೊಬ್ಬ ವಿಶೇಷ ರೀತಿಯಲ್ಲಿ ಕೇಶವಿನ್ಯಾಸ ಮಾಡಿ ಸುದ್ದಿಯಾಗಿದ್ದಾನೆ. ತಲೆಯಲ್ಲಿ ಆರ್​ಸಿಬಿ ಮತ್ತು ವಿರಾಟ್​ ಕೊಹ್ಲಿಯ ಚಿತ್ರವನ್ನು ಬರೆಯುವ ಮೂಲಕ ವಿಶೇಷ ರೀತಿಯಲ್ಲಿ ಅಭಿಮಾನ ಮೆರೆದಿದ್ದಾನೆ. ಅಭಿಮಾನಿಯ ಈ ಅಭಿಮಾನ ಕಂಡು ವಿರಾಟ್​ ಕೊಹ್ಲಿಯೇ ಒಂದು ಕ್ಷಣ ದಂಗಾಗಿದ್ದಾರೆ.

ಆರ್​ಸಿಬಿ ತಂಡ ಗುರುವಾರ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಕಣಕ್ಕಿಳಿಯಲಿದೆ. ಆರ್​ಸಿಬಿಗೆ ಈ ಪಂದ್ಯ ಪ್ಲೇ ಆಫ್​ಗೇರುವ ನಿಟ್ಟಿನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸದ್ಯ ಆರ್​ಸಿಬಿ ಆಟಗಾರರು ಹೈದರಾಬಾದ್​ನಲ್ಲಿ ಈ ಪಂದ್ಯಕ್ಕಾಗಿ ಭರ್ಜರಿ ತಾಲೀಮು ನಡೆಸಿದೆ. ಇದೇ ವೇಳೆ ಆರ್​ಸಿಬಿ ಮತ್ತು ಕೊಹ್ಲಿ ಅಭಿಮಾನಿಯೊಬ್ಬ ತನ್ನ ಕೇಶವಿನ್ಯಾಸದಲ್ಲಿ ಆರ್​ಸಿಬಿ ಎಂದು ಬರೆದು ವಿರಾಟ್​ ಕೊಹ್ಲಿ ಚಿತ್ರವನ್ನು ಬಿಡಿಸಿ ಕೊಹ್ಲಿಯನ್ನು ಭೇಟಿ ಮಾಡಿದ್ದಾನೆ. ಆತನನ್ನು ಕಂಡ ವಿರಾಟ್​ ಕೊಹ್ಲಿ ಬೆನ್ನು ತಟ್ಟಿ ಒಂದು ಕ್ಷಣ ಅಚ್ಚರಿಗೊಂಡರು. ಈ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ IPL 2023: ವಧೇರಾಗೆ ವಿಚಿತ್ರ ಶಿಕ್ಷೆ ನೀಡಿದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ಆರ್​ಸಿಬಿಗೆ ಗೆಲ್ಲಲ್ಲೇ ಬೇಕಾದ ಒತ್ತಡ

ಆರ್​ಸಿಬಿ ತಂಡ 12 ಪಂದ್ಯಗಳನ್ನು ಆಡಿ 12 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಪ್ಲೇ ಆಫ್​ಗೇರಬೇಕಾದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಖುಷಿಯಲ್ಲಿದ್ದರೂ ತಂಡದ ಬ್ಯಾಟಿಂಗ್​ ಮಾತ್ರ ಕೇವಲ ಮೂರು ಮಂದಿಯ ಪ್ರದರ್ಶನದ ಮೇಲೆಯೇ ಅವಲಂಬಿತವಾಗಿದೆ. ಆರಂಭದಿಂದಲೂ ಈ ಸಮಸ್ಯೆ ತಂಡದಲ್ಲಿ ಬಗೆಹರಿದಿಲ್ಲ. ತಂಡ ಇಲ್ಲಿಯ ವರೆಗೆ ಬಂದದ್ದೇ ಒಂದು ಅಚ್ಚರಿ. ಒಂದೊಮ್ಮೆ ಫಾಪ್​ ಡು ಪ್ಲಸಿಸ್​, ಮ್ಯಾಕ್ಸ್​ವೆಲ್ ಮತ್ತು ಕೊಹ್ಲಿ ಅವರು ಬೇಗನೆ ಔಟಾದರೆ ತಂಡಕ್ಕೆ ಸೋಲು ಖಚಿತ. ಏಕೆಂದರೆ ಮಧ್ಯಮ ಕ್ರಮಾಂಕದಲ್ಲಿ ದಿನೇಶ್​ ಕಾರ್ತಿಕ್​, ಮಹಿಪಾಲ್​ ಲೋಮ್ರೋರ್​ ಹೀಗೆ ಬ್ಯಾಟ್​ ಬೀಸುವ ಎಲ್ಲರದ್ದು ಶೂನ್ಯ ಸಾಧನೆ. ಈ ಪಂದ್ಯದಲ್ಲಾದರು ಇವರೆಲ್ಲ ಜವಾಬ್ದಾರಿಯು ಬ್ಯಾಟಿಂಗ್​ ನಡೆಸುವ ಅಗತ್ಯವಿದೆ.​

Exit mobile version