ದೋಹಾ : ವಿಶ್ವದ ಕೋಟ್ಯಂತರ ಫುಟ್ಬಾಲ್ ಅಭಿಮಾನಿಗಳು ಆರಾಧಿಸುವ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಯ ವೃತ್ತಿ ಕ್ರೀಡೆಯ ಕನಸು ಈಡೇರಿದೆ. ಅವರ ನೇತೃತ್ವದ ಅರ್ಜೆಂಟೀನಾ ತಂಡ ಕತಾರ್ನಲ್ಲಿ ನಡೆದ ಫಿಫಾ ವಿಶ್ವ ಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಪ್ ಗೆದ್ದಿರುವ ಖುಷಿಯಲ್ಲಿ ಅರ್ಜೆಂಟೀನಾ ತಂಡದ ಸದಸ್ಯರೆಲ್ಲೂ ಕುಣಿದಾಡುವ ಸಂದರ್ಭದಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ತನ್ನ ತಾಯಿಯನ್ನು ಬಿಗಿದಪ್ಪಿ ಖುಷಿ ಪಡುತ್ತಿರುವ ಕ್ಷಣ ಅಲ್ಲಿ ನೆರೆದಿದ್ದವರ ಮನ ಸೆಳೆಯಿತು.
ಪಂದ್ಯ ಮುಗಿದು ಆಟಗಾರರೆಲ್ಲರೂ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ಮೆಸ್ಸಿ ನಿಧಾನವಾಗಿ ಆಟಗಾರರ ಮಧ್ಯೆ ನಡೆದುಕೊಂಡು ಹೋಗುತ್ತಿದ್ದರು. ತಕ್ಷಣ ಮೆಸ್ಸಿಯ ತಾಯಿ ಹಿಂದಿನಿಂದ ಹೋಗಿ ಮಗನನ್ನು ಕರೆಯುತ್ತಾರೆ. ತಿರುಗಿ ನೋಡಿದಾಗ ಅಮ್ಮ. ಬಿಗಿದಪ್ಪಿ ಮುದ್ದು ಮಾಡುತ್ತಾಳೆ ತಾಯಿ. ಅಮ್ಮನ ಹೆಗಲ ಮೇಲೆ ವಿಶ್ವ ಕಪ್ ಗೆದ್ದ ಮೆಸ್ಸಿಯ ಖುಷಿ ಇನ್ನಷ್ಟು ಇಮ್ಮಡಿಯಾಗುತ್ತದೆ.
ಪತ್ನಿ ಮತ್ತು ಮಕ್ಕಳೊಂದಿಗೂ ಖುಷಿ
ಪ್ರಶಸ್ತಿ ಗೆದ್ದ ಖುಷಿಯನ್ನು ಲಿಯೋನೆಲ್ ಮೆಸ್ಸಿ ತಮ್ಮ ಪತ್ನಿ ಆಂಟೊನೆಲ್ಲ ರೊಕೊಜೊ ಹಾಗೂ ಮೂವರು ಮಕ್ಕಳ ಜತೆಯೂ ಹಂಚಿಕೊಂಡಿದ್ದಾರೆ. ತಮಗೆ ದೊರೆತ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಹಿಡಿದುಕೊಂಡು ಅವರು ಸ್ಟೇಡಿಯಮ್ನಲ್ಲಿ ಮಕ್ಕಳು ಹಾಗೂ ಪತ್ನಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಪತ್ನಿ ಆಂಟೊನೆಲ್ಲೊ ಅವರು ಆ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ | FIFA World Cup | ಇನ್ನೂ ಆಡುವೆ ಎಂದ ಲಿಯೋನೆಲ್ ಮೆಸ್ಸಿ; ನಿರ್ಧಾರ ಬದಲಿಸಲು ಕಾರಣವೇನು?