ಬೆಂಗಳೂರು: ಬೆರಳಿನ ಗಾಯದಿಂದಾಗಿ ರುತುರಾಜ್ ಗಾಯಕ್ವಾಡ್ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಿಂದ (IND vs SA) ಹೊರಗುಳಿದಿದ್ದಾರೆ. ಅವರು ವಾಪಸ್ ಭಾರತಕ್ಕೆ ಮರಳಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಅಭಿಮನ್ಯು ಈಶ್ವರನ್ ಆಯ್ಕೆಯಾಗಿದ್ದಾರೆ. ಅವರ ತಂಡದ ಬದಲಿ ಆಟಗಾರನಾಗಿ ಘೋಷಿಸಿದೆ ಬಿಸಿಸಿಐ. ಋತುರಾಜ್ ಅವರಂತೆಯೇ ಅಭಿಮನ್ಯು ಕೂಡ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅದ್ಭುತ ದಾಖಲೆ ಹೊಂದಿರುವ ಆರಂಭಿಕ ಬ್ಯಾಟರ್ . ಬಂಗಾಳ ಪರ ಆಡುವ ಬಲಗೈ ಬ್ಯಾಟ್ಸ್ಮನ್ ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ಎ ತಂಡದ ಭಾಗವಾಗಿದ್ದರು. ಈಗ ಅಂತರರಾಷ್ಟ್ರೀಯ ಕ್ರಿಕೆಟ್ದಗೆ ಪಾದಾರ್ಪಣೆ ಮಾಡುವ ಸುವರ್ಣಾವಕಾಶವನ್ನು ಹೊಂದಿದ್ದಾರೆ.
Grateful for the journey and the moments that make it special! #SMAT23 #NeverGiveUp@BCCIdomestic pic.twitter.com/pz5BhIkPPA
— Abhimanyu Easwaran (@eabhimanyu1) December 17, 2023
ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ ಗ್ಕೆಬೆರ್ಹಾದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ರುತುರಾಜ್ ಅವರ ಬಲ ಉಂಗುರ ಬೆರಳಿಗೆ ಗಾಯವಾಗಿದೆ. ನಂತರ ರುತುರಾಜ್ ಸ್ಕ್ಯಾನ್ಗೆ ಒಳಗಾಗಿದ್ದರು. ಬಿಸಿಸಿಐ ವೈದ್ಯಕೀಯ ತಂಡವು ಪ್ರವಾಸದ ಉಳಿದ ಭಾಗದಿಂದ ಅವರನ್ನು ಹೊರಗುಳಿಯವಂತೆ ಹೇಳಿತ್ತು. ಋತುರಾಜ್ ಬದಲಿಗೆ ಅಭಿಮನ್ಯು ಈಶ್ವರನ್ ಬ್ಯಾಕಪ್ ಓಪನರ್ ಆಗಿ ಆಡಲಿದ್ದಾರೆ. ಋತುರಾಜ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿರುವ ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿಗೆ ಬಂದಿದ್ದಾರೆ.
ಅಭಿಮನ್ಯು ಈಶ್ವರನ್ ದಾಖಲೆ
ಅಭಿಮನ್ಯು ಈಶ್ವರನ್ ದೇಶೀಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕ ಆಟಗಾರ ಕಳೆದ ದಶಕದಿಂದ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನಕ್ಕಾಗಿ ನಿರಂತರವಾಗಿ ಸ್ಪರ್ಧಿಸುತ್ತಿದ್ದಾರೆ. ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ, ಈಶ್ವರನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 22 ಶತಕಗಳು ಮತ್ತು 26 ಅರ್ಧಶತಕ ಬಾರಿಸಿದ್ದಾರೆ. ಅವರು 52 ಕ್ಕೂ ಹೆಚ್ಚು ರನ್ ಸರಾಸರಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ : Pakistan Cricket : ಭಾರತದ ಕ್ರಿಕೆಟ್ ಮಾದರಿಯನ್ನು ನಕಲು ಮಾಡಲು ಮುಂದಾದ ಪಾಕಿಸ್ತಾನ
ಅನುಭವಿ ಆರಂಭಿಕ ಆಟಗಾರ ಹಲವಾರು ಭಾರತ ಎ ತಂಡದ ಪ್ರವಾಸಗಳಲ್ಲಿದ್ದರು. ಆದರೆ ಪ್ರಮುಖ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಪಂದ್ಯದಲ್ಲಿ ಅವರು ಎರಡನೇ ದಿನ ಅಜೇಯ 61 ರನ್ ಗಳಿಸಿದ್ದರು. ಆದಾಗ್ಯೂ, ಅವರು ಇನ್ನಿಂಗ್ಸ್ ಮಧ್ಯದಲ್ಲಿ ನಿವೃತ್ತಿ ಪಡೆದುಕೊಂಡರು.
ಭಾರತ ತಂಡ ಪ್ರಕಟ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಭಿಮನ್ಯು ಈಶ್ವರನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್). ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್).
ರೋಹಿತ್ ಅಭಿಮಾನಿಗಳಿಗೆ ಖುಷಿ, ಐಪಿಎಲ್ಗೆ ಪಾಂಡ್ಯ ಅನ್ಫಿಟ್
ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಮುಂಬಯಿ ಇಂಡಿಯನ್ಸ್ ತಂಡದ ನಾಯಕನನ್ನಾಗಿ ಮಾಡಿರುವುದು ಆ ತಂಡದ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಇದೀಗ ಅವರೆಲ್ಲರಿಗೂ ಖುಷಿಯ ವಿಚಾರವೊಂದಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಮೈದಾನಕ್ಕೆ ಸದ್ಯಕ್ಕೆ ಮರಳುವುದಿಲ್ಲ ಎಂದು ಹೇಳಲಾಗಿದೆ. ಅವರು ಅದಕ್ಕಾಗಿ ಸಾಕಷ್ಟು ಸಮಯ ಕಾಯಬೇಕಾಗಬಹುದು. ಈ ಹಿಂದೆ ಊಹಿಸಿದಂತೆ, ಹಾರ್ದಿಕ್ ಮುಂದಿನ ವರ್ಷ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಮರಳಬೇಕಿತ್ತು. ಅದು ಕೂಡ ಸಾಧ್ಯವಾಗದಿರಬಹುದು. ಪಿಟಿಐ ವರದಿಯ ಪ್ರಕಾರ, ಅವರು ಐಪಿಎಲ್ 2024 ರ ಸಂಪೂರ್ಣ ಅವಧಿಗೆ ಹೊರಗುಳಿಯಬಹುದು.
ಹಾರ್ದಿಕ್ ಅವರ ಫಿಟ್ನೆಸ್ ಸ್ಥಿತಿಯ ಬಗ್ಗೆ ಸದ್ಯ ಯಾವುದೇ ಅಪ್ಡೇಟ್ ಇಲ್ಲ. ಹೀಗಾಗಿ ಐಪಿಎಲ್ ಆರಂಭಕ್ಕೆ ಮೊದಲು ಅವರು ಲಭ್ಯವಿರುತ್ತಾರೆಯೇ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎದುರಾಗಿದೆ” ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ವಿಶ್ವಕಪ್ ವೇಳೆ ಹಾರ್ದಿಕ್ ಪಾದದ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಅವರ ಫಿಟ್ನೆಸ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.