Site icon Vistara News

Viral Video: ಲಾಂಗ್-ಆಫ್​ನಲ್ಲಿ ಅತ್ಯದ್ಭುತ ಕ್ಯಾಚ್​ ಹಿಡಿದ ಟ್ರೆಂಟ್​ ಬೌಲ್ಟ್

Trent Boult spectacular catch

ಹೈದರಾಬಾದ್​: ನ್ಯೂಜಿಲ್ಯಾಂಡ್​ ತಂಡದ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್​ ಅವರು ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಲಾಂಗ್-ಆಫ್​ನಲ್ಲಿ ಹಿಡಿದ ಕ್ಯಾಚ್ ಒಂದರ ವಿಡಿಯೊ ವೈರಲ್​ ಆಗಿದೆ. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದು “ವಾಟ್ ಎ ಕ್ಯಾಚ್​” ಎಂದು ಬರೆದುಕೊಂಡಿದೆ.​

ನೆದರ್ಲೆಂಡ್ಸ್​ ತಂಡದ ಸ್ಟಾರ್​ ಆಲ್​ ರೌಂಡರ್ ಬಾಸ್​ ಡಿ ಲೀಡೆ​ ಕ್ರೀಸ್​ಗೆ ಬಂದೊಡನೆಯೇ ಬಡಬಡನೆ ಮೂರು ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ರಚಿನ್‌ ರವೀಂದ್ರ ಅವರ ಓವರ್​ನಲ್ಲಿ ಸಿಕ್ಸರ್​ ಬಾರಿಸಲು ಮುಂದಾದರು. ಅದರಂತೆ ಚೆಂಡನ್ನು ಸಿಕ್ಸರ್​ ಕಡೆ ಬಾರಿಸಿದರು. ಆದರೆ ಲಾಂಗ್-ಆಫ್​ನಲ್ಲಿದ್ದ ಟ್ರೆಂಟ್​ ಬೌಲ್ಟ್ ಅವರು ಇದಕ್ಕೆ ಅನುವು ಮಾಡಿಕೊಡಲಿಲ್ಲ. ಅತ್ಯಂತ ಕಷ್ಟಕರವಾದ ಕ್ಯಾಚನ್ನು ಯಶಸ್ವಿಯಾಗಿ ಪಡೆದು ಲೀಡೆಗೆ ಪೆವಿಲಿಯನ್​ ಹಾದಿ ತೋರಿದರು.

ಲಾಂಗ್-ಆಫ್‌ನಲ್ಲಿದ್ದ ಬೌಲ್ಟ್​ ಚೆಂಡನ್ನು ಹಿಡಿಯಲು ಹಿಮ್ಮುಖವಾಗಿ ನೆಗೆದರು. ಈ ವೇಳೆ ಚೆಂಡನ್ನು ಹಿಡಿದರೂ ಬ್ಯಾಲನ್ಸ್​ ಆಗದೆ ಬೌಂಡರಿ ಗೆರೆಯ ಒಳ ಪ್ರವೇಶಿಸಿದರು. ಆದರೆ ಇದಕ್ಕೂ ಮುನ್ನ ಚೆಂಡನ್ನು ಮೇಲಕ್ಕೆ ಎಸೆದಿದ್ದ ಬೌಲ್ಟ್​ ಬೌಂಡರಿ ಗೆರೆಯೊಳಗೆ ಪ್ರವೇಶಿಸಿ ತಮ್ಮ ನಿಯಂತ್ರವನ್ನು ಪಡೆದುಕೊಂಡು ಮತ್ತೆ ಬೌಂಡರಿ ಲೈನ್​ನ ಒಳಗಡೆ ಹಾರಿ ಕ್ಯಾಚನ್ನು ಪಡೆದರು. ಇದೇ ವೇಳೆ ಕಾಮೆಂಟ್ರಿ ಮಾಡುತ್ತಿದ್ದವರು ವಾಟ್​ ಎ ಕ್ಯಾಚ್​, ನಿಜವಾಗಿಯೂ ಅತ್ಯದ್ಭುತ ಕ್ಯಾಚ್ ಎಂಂದು ಬಣ್ಣಿಸಿದರು. ಈ ವಿಡಿಯೊ ವೈರಲ್ ಆಗಿದೆ.

5 ವಿಕೆಟ್ ಕಿತ್ತು ದಾಖಲೆ ಬರೆದ ಸ್ಯಾಂಟ್ನರ್

ಈ ಪಂದ್ಯದಲ್ಲಿ ಬ್ಯಾಟಿಂಗ್​ ಮಾತ್ರವಲ್ಲದೆ ಬೌಲಿಂಗ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡಿದ ಸ್ಯಾಂಟ್ನರ್ 59 ರನ್​ಗೆ ಪ್ರಮುಖ 5 ವಿಕೆಟ್​ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅಲ್ಲದೆ ವಿಶ್ವಕಪ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಮೊದಲ ನ್ಯೂಜಿಲ್ಯಾಂಡ್​ನ ಸ್ಪಿನ್ನರ್ ಎಂಬ ದಾಖಲೆ ಬರೆದರು. ಒಟ್ಟಾರೆಯಾಗಿ ಕಿವೀಸ್​ನ ಆರನೇ ಬೌಲರ್​.

ಗೆಲುವಿನ ಓಟ ಮುಂದುವರಿಸಿದ ಕಿವೀಸ್​

ಇಲ್ಲಿನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ನೆದರ್ಲೆಂಡ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್​ ಆಹ್ವಾನ ಪಡೆದ ನ್ಯೂಜಿಲ್ಯಾಂಡ್​ ಬಳಗ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗೆ 322 ರನ್ ಬಾರಿಸಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ನೆದರ್ಲೆಂಡ್ಸ್​​ 46.3 ಓವರ್​ಗಳಲ್ಲಿ 223 ರನ್​ ಬಾರಿಸಿ ಆಲ್​ಔಟ್ ಆಯಿತು.

ಇದನ್ನೂ ಓದಿ Gill And Sara: ಶೀಘ್ರ ಗುಣಮುಖರಾಗಿ; ಗಿಲ್​ಗೆ ಹಾರೈಸಿದ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್

ಮೊದಲು ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್ ತಂಡ ಉತ್ತಮ ಅರಂಭ ಪಡೆಯಿತು. 67 ರನ್​ಗಳಿಗೆ 1 ವಿಕೆಟ್ ಕಳೆದುಕೊಂಡಿತು. ಕಾನ್ವೆ 32 ರನ್ ಬಾರಿಸಿದರೆ ವಿಲ್ ಯಂಗ್ 70 ರನ್​ ಬಾರಿಸಿದರು. ರಚಿನ್ ರವೀಂದ್ರ 51 ರನ್​ ಕೊಡುಗೆ ಕೊಟ್ಟರೆ ಡ್ಯಾರಿಲ್ ಮಿಚೆಲ್​ 48 ರನ್​ ಬಾರಿಸಿದ್ದಾರೆ. ಬಳಿಕ ಟಾಮ್ ಲೇಥಮ್​ 53 ರನ್ ಬಾರಿಸಿದರು. ಕೊನೆಯಲ್ಲಿ ಸ್ಯಾಂಟ್ನರ್ 36 ರನ್​ ಬಾರಿಸಿದರೆ, ಮ್ಯಾಟ್ ಹೆನ್ರಿ 10 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

ದೊಡ್ಡ ಮೊತ್ತವನ್ನು ಪೇರಿಸಲು ಆರಂಭಿಸಿದ ನೆದರ್ಲೆಂಡ್ಸ್ ತಂಡ 21 ರನ್​ಗೆ ಮೊದಲು ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಮೂರನೇ ಕ್ರಮಾಂಕದಲ್ಲಿ 69 ರನ್ ಬಾರಿಸಿ ಮಿಂಚಿದರು. ಬಳಿಕ ಉಳಿದ ಬ್ಯಾಟರ್​ಗಳು ಅಲ್ಪಸ್ವಲ್ಪ ರನ್​ ಬಾರಿಸಿದ ಕಾರಣ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

Exit mobile version