ಬ್ರಿಸ್ಬೇನ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಅವರ ಜೀವನಾಧಾರಿತ ಚಿತ್ರದ ಚಿತ್ರೀಕರಣ ಏಕಾಏಕಿ ಸ್ಥಗತಿಗೊಂಡಿದೆ. ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಲ್ಲಿ ನಟ ಮತ್ತು ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೇನ್ ವಾರ್ನೆ ಪತ್ನಿಯೊಂದಿಗೆ ಬೆಡ್ ರೂಮ್ನಲ್ಲಿ ರೊಮ್ಯಾನ್ಸ್ ಮಾಡುವ ದೃಶ್ಯವನ್ನು ಚಿತ್ರೀಕರಣ ಮಾಡುವ ವೇಳೆ ಎಡವಟ್ಟಾಗಿ ನಟ ಮತ್ತು ನಟಿ ಮಂಚದಿಂದ ಬಿದ್ದಿದ್ದಾರೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದಲ್ಲಿ ಶೇನ್ ವಾರ್ನ್ ಪಾತ್ರವನ್ನು ನಿರ್ವಹಿಸುತ್ತಿರುವ ಆಸ್ಟ್ರೇಲಿಯಾದ ನಟ ಅಲೆಕ್ಸ್ ವಿಲಿಯಮ್ಸ್, ವಾರ್ನ್ ಅವರ ಪತ್ನಿ ಸಿಮೋನ್ ಕ್ಯಾಲಹಾನ್ ಪಾತ್ರವನ್ನು ನಿರ್ವಹಿಸುತ್ತಿರುವ ಮಾರ್ನಿ ಕೆನಡಿ ಗಾಯಗೊಂಡವರು. ಅವರಿಬ್ಬರೂ ಬೆಡ್ರೂಮ್ನಲ್ಲಿ ನಡೆಸಿದ ಪ್ರೇಮದ ಸಂದರ್ಭವನ್ನು ಮಂಚದ ಮೇಲೆ ಚಿತ್ರೀಕರಿಸುತ್ತಿದ್ದಾಗ ಅರಿಬ್ಬರೂ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಶೂಟಿಂಗ್ ಸ್ಥಗಿತಗೊಳಿಸಿದ ತಂಡ ನಟರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಸೇರಿಸಿದ್ದಾರೆ ಎನ್ನಲಾಗಿದೆ.
ಘಟನೆಯ ಹೇಗೆ ನಡೆಯಿತು ಎಂಬುದನ್ನು ನಟಿ ಮಾರ್ನಿ ಕೆನಡಿ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ. ಆಯ ತಪ್ಪಿದ ಕಾರಣ ಜತೆಯಾಗಿ ನೆಲಕ್ಕೆ ಬಿದ್ದೆವು. ಗಾಯಗಳು ಗಂಭಿರವಾಗಿವೆ ಎಂದು ಅವರು ಹೇಳಿಕೊಂಡಿದ್ದಾರೆ.
ಶೇನ್ ಮತ್ತು ಸಿಮೋನ್ ಯೌವನದ ಪ್ರೇಮ ಪ್ರಸಂಗದ ಚಿತ್ರೀಕರಣ ಅದಾಗಿತ್ತು. ಕಾರಿಡಾರ್ ಮೂಲಕ ನಡೆದುಒಂಡು ಹೋಗುತ್ತಾ ಮಂಚದ ಮೇಲೆ ತಳ್ಳುವ ಪ್ರಸಂಗ ಅದಾಗಿತ್ತು. ಅದೇ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದೆವು. ಅಂತೆಯೇ ನಾನು ಮತ್ತು ಅಲೆಕ್ಸ್ ಜತೆಯಾಗಿ ಮಂಚದ ಮೇಲಕ್ಕೆ ಬೀಳಲು ಯತ್ನಿಸಿದೆವು. ಆದರೆ, ಸಮತೋಲನ ಕಳೆದುಕೊಂಡು ನೆಲಕ್ಕೆ ಬಿದ್ದೆವು. ನಮಗಿಬ್ಬರಿಗೂ ಸಾಕಷ್ಟು ಆಘಾತವಾಗಿದೆ. ಅಲೆಕ್ಸ್ ತಲೆಗೆ ಬ್ಯಾಂಡೇಜ್ ಕಟ್ಟುವಂತಾಗಿದೆ. ನನ್ನ ಕೈಯ ಮಣಿಕಟ್ಟಿಗೆ ನೋವಾಗಿದೆ ಎಂದು ಮಾರ್ನಿ ಕೆನಡಿ ಆಸ್ಟ್ರೇಲಿಯಾದ ಡೈಲಿ ಟೆಲಿಗ್ರಾಫ್ಗೆ ವಿವರಿಸಿದ್ದಾರೆ.
ಅವರಿಬ್ಬರಿಗೆ ಗಂಭೀರ ಪ್ರಮಾಣದ ಪೆಟ್ಟು ಬಿದಿದ್ದರೂ ಚಿತ್ರಿಕರಣದ ತಂಡ ಅವರಿಬ್ಬರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರಿಂದ ಪ್ರಾಣಾಪಯಾದಿಂದ ಪಾರಾಗಿದ್ದಾರೆ. ನಮಗಿಬ್ಬರಿಗೆ ಹಾಕಿರುವ ಮೇಕಪ್ ಇನ್ನೂ ಹಾಗೆಯೇ ಇದೆ. “ಅಲೆಕ್ಸ್ ಮತ್ತು ನಾನು ಬ್ಲೀಚ್ ಮಾಡಿದ ಕೂದಲನ್ನು ಹಾಗೆಯೇ ಬಿಟ್ಟುಕೊಂಡಿದ್ದೇವೆ. ” ಎಂದು ಕೆನಡಿ ವಿವರಿಸಿದ್ದಾರೆ.
ಇದನ್ನೂ ಓದಿ : Rohit Sharma : ಟೀಕೆಗಳ ನಡುವೆಯೂ ಪತ್ನಿ ಜತೆ ಜಾಲಿ ಟ್ರಿಪ್ ಮಾಡುತ್ತಿರುವ ರೋಹಿತ್ ಶರ್ಮಾ!
ಲೆಜೆಂಡರಿ ಸ್ಪಿನ್ನರ್ ಅವರ ಜೀವನದ ಬಗ್ಗೆ ಕಿರು ಸರಣಿಗೆ ‘ವಾರ್ನೆ’ ಎಂದು ಹೆಸರಿಡಲಾಗಿದೆ. ಇಂಗ್ಲಿಷ್ ನಟಿ ಲಿಜ್ ಹರ್ಲಿ ಅವರೊಂದಿಗಿನ ವಾರ್ನ್ ಅವರ ಸಂಬಂಧವನ್ನು ಸರಣಿಯಲ್ಲಿ ಚಿತ್ರಿಸಲಾಗಿದೆ. ಮಾಡೆಲ್ ಶಾಂತಿ ಕಲಿ ಅವರು ನಟಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ವಾರ್ನ್ 2022ರಲ್ಲಿ ಥಾಯ್ಲೆಂಡ್ನಲ್ಲಿ ರಜಾದಿನಗಳಲ್ಲಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದ್ದರು.