Site icon Vistara News

IPL 2023 : ಐಪಿಎಲ್​ನಲ್ಲಿ ಡಿಜಿಟಲ್ ಪ್ರಸಾರದೆಡೆಗೆ ವಾಲಿದ ಜಾಹೀರಾತುದಾರರು, ಜಿಯೊಗೆ ಭರ್ಜರಿ ಲಾಭ

Advertisers leaning towards digital broadcasting in IPL, Jio will benefit immensely

#image_title

ನವದೆಹಲಿ: ಡಿಜಿಟಲ್​ ವೇದಿಕೆ ಮೂಲಕ ಕ್ರಿಕೆಟ್​ ಪಂದ್ಯಗಳನ್ನು ವೀಕ್ಷಿಸುಸವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ರಿಲಯನ್ಸ್ ಸಂಸ್ಥೆಯು ಐಪಿಎಲ್ ಪಂದ್ಯಗಳ ಡಿಜಿಟಲ್​ ಪ್ರಸಾರದ ಹಕ್ಕನ್ನು ದೊಡ್ಡ ಮೊತ್ತವನ್ನು ಸಲ್ಲಿಸಿ ತನ್ನದಾಗಿಸಿಕೊಂಡಿತ್ತು. ಈ ಹೂಡಿಕೆ ವಿಚಾರದಲ್ಲಿ ರಿಲಯನ್ಸ್ ಸಂಸ್ಥೆಗೆ ಸಂಪೂರ್ಣ ಯಶಸ್ಸು ಸಿಕ್ಕಿದ್ದು ಜಿಯೊ ಸಿನಿಮಾದ ಮೂಲಕ ಐಪಿಎಲ್​ ಪಂದ್ಯಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಏರುತ್ತಲೇ ಇದೆ. ಅಂತೆಯೇ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಜಿಯೊ ಸಿನಿಮಾ ಹಾಲಿ ಆವೃತ್ತಿಯಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಅದೇ ರೀತಿ ಜಿಯೊ ಸಿನಿಮಾ ಜಾಹೀರಾತುದಾರರನ್ನೂ ಆಕರ್ಷಿಸಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದ ವೇಳೆ ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ 2.4 ಕೋಟಿ ದಾಟಿದೆ. ಇದು ಪ್ರಸಕ್ತ ಐಪಿಎಲ್-2023ರ ಆವೃತ್ತಿಯ ಆನ್​​ಲೈನ್ ಲೈವ್ ಸ್ಟ್ರೀಮಿಂಗ್ ಫ್ಲಾಟ್​​ಫಾರ್ಮ್​ ಜಿಯೋಸಿನಿಮಾದಲ್ಲಿ ಇದುವರೆಗಿನ ಅತಿ ಹೆಚ್ಚು ವೀಕ್ಷಕರ ಸಂಖ್ಯೆ. ಈ ಹಿಂದೆ ಏಪ್ರಿಲ್ 12ರಂದು ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿತ್ತು. ಈ ಬಾರಿ ಆರ್​​​ಸಿಬಿ-ಸಿಎಸ್​​​ಕೆ ಪಂದ್ಯದ ಎರಡನೇ ಇನಿಂಗ್ಸ್​​ನ ಕೊನೆಯ ಓವರ್​​ನಲ್ಲಿ ಜಿಯೋಸಿನಿಮಾದ ವೀಕ್ಷಕರ ಸಂಖ್ಯೆ 24 ದಶಲಕ್ಷ ತಲುಪಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ರೋಚಕ ಪಂದ್ಯದಲ್ಲಿ ಎಂಎಸ್​ಧೋನಿ ಸಾರಥ್ಯದ ಚೆನ್ನೈ ಸೂಪರ್​​ಕಿಂಗ್ಸ್​​ ತಂಡ 8 ರನ್​ಗಳಿಂದ ಗೆದ್ದುಕೊಂಡಿತು. ಒಟ್ಟಾರೆ 444 ರನ್​ಗಳ ಪ್ರವಾಹ ಹರಿದ ಈ ಪಂದ್ಯದಲ್ಲಿ ದಾಖಲೆಯ 33 ಸಿಕ್ಸರ್​ಗಳೂ ಸಿಡಿದವು.

ಟಾಟಾ ಐಪಿಎಲ್-2023ರ ಆವೃತ್ತಿಯ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಬಿಸಿಸಿಐ ಪ್ರತ್ಯೇಕ ಕಂಪನಿಗಳಿಗೆ ನೀಡಿದೆ. ಈಗ ಡಿಜಿಟಲ್ ಪ್ರಸಾರ ವೇದಿಕೆ ಅದರ ನೇರ ಲಾಭವನ್ನು ಕಾಣುತ್ತಿದೆ. ಜಿಯೋಸಿನಿಮಾ ಈ ಬಾರಿ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರವನ್ನು ಮಾಡುತ್ತಿದೆ. ಡಿಜಿಟಲ್ ಫ್ಲಾಟ್​​ಫಾರ್ಮ್​ನಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಇದು ಹೆಚ್ಚಿನ ಸಹಾಯವನ್ನು ಮಾಡಿದೆ.

ಇದನ್ನೂ ಓದಿ : IPL 2023: ಗಂಗೂಲಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ​ಅನ್‌ಫಾಲೋ ಮಾಡಿದ ವಿರಾಟ್​ ಕೊಹ್ಲಿ!

2019ರ ಆವೃತ್ತಿಯ ಫೈನಲ್ ಪಂದ್ಯವನ್ನು ಡಿಸ್ನಿ-ಹಾಟ್​ಸ್ಟಾರ್​ನಲ್ಲಿ ಗರಿಷ್ಠ 1.86 ಕೋಟಿ ವೀಕ್ಷಕರು ನೋಡಿದ್ದರು. ಆದರೆ, ಜಿಯೋಸಿನಿಮಾದಲ್ಲಿ 2.4 ಕೋಟಿ ವೀಕ್ಷಕರ ಸಂಖ್ಯೆಯನ್ನು ಈಗಲೇ ದಾಟಿದೆ. ಪ್ರಸಕ್ತ ಐಪಿಎಲ್ ಟೂರ್ನಿ ಇನ್ನೂ ಲೀಗ್ ಹಂತದಲ್ಲಿದ್ದು, ಜಿಯೋಸಿನಿಮಾ ಈಗಾಗಲೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಐಪಿಎಲ್-2023 ಫೈನಲ್ ಹಂತದತ್ತ ಸಾಗುತ್ತಿರುವಂತೆ, ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆಯು ಹೊಸ ದಾಖಲೆ ಸೃಷ್ಟಿಸಲಿದೆ ತನ್ನ ಸ್ಟ್ರೀಮಿಂಗ್ ಅಪ್ಲಿಕೇಶನ್ ಮೂಲಕ ಪ್ರತಿದಿನ ಲಕ್ಷಾಂತರ ಹೊಸ ವೀಕ್ಷಕರು ಐಪಿಎಲ್ ಪಂದ್ಯವನ್ನು ನೋಡುತ್ತಿದ್ದಾರೆ.

ಪ್ರಾಯೋಜಕರು ಮತ್ತು ಜಾಹೀರಾತುದಾರರ ವಿಷಯದಲ್ಲಿಯೂ ಜಿಯೋಸಿನಿಮಾ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಅಗ್ರ ಜಾಗತಿಕ ಮತ್ತು ಭಾರತೀಯ ಬ್ರ್ಯಾಂಡ್​ಗಳು ಈಗಾಗಲೆ ಜಿಯೋಸಿನಿಮಾದತ್ತ ಆಕರ್ಷಿತವಾಗಿವೆ. ಟಿವಿಯನ್ನು ಬಿಟ್ಟು, ಜಿಯೋಸಿನಿಮಾ ಕೂಡ 23 ಪ್ರಮುಖ ಪ್ರಾಯೋಜಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Exit mobile version