ಕೋಲ್ಕೊತಾ: IND v/s HKG | ಎಎಫ್‌ಸಿ ಏಷ್ಯಾ ಕಪ್ ಕ್ವಾಲಿಫೈಯರ್ ಫುಟ್‌ಬಾಲ್ ಪಂದ್ಯದಲ್ಲಿ ಭಾರತ ಮತ್ತು ಹಾಂಕಾಂಗ್ ಮುಖಾಮುಖಿಯಾಗಿದ್ದು, ಭಾರತ ಗೆಲುವು ಸಾಧಿಸಿದೆ. ಭಾರತದ ಯುವ ತಂಡ 4-0 ಗೋಲ್‌ನ ಲೀಡ್ ಪಡೆದು ಐತಿಹಾಸಿಕ ಗೆಲುವು ಸಾಧಿಸಿತು. ಹಾಂಕಾಂಗ್‌ಗೆ ಸೋಲುಣಿಸಿದ ಬಳಿಕ ಭಾರತ ಈಗ ಕ್ವಾಲಿಫೈಯರ್ ಹಂತವನ್ನು ಸರಾಗವಾಗಿ ದಾಟಿ ಮುನ್ನಡೆ ಸಾಧಿಸಿದೆ.
ಅನಾರೋಗ್ಯವನ್ನೂ ಗೆದ್ದು ಬಂದ ಅನ್ವರ್!
ಭಾರತದ ಪರ ಮೊದಲು ಗೋಲ್ ಹೊಡೆದು ಗೆಲುವಿಗೆ ಮೊದಲು ಮೆಟ್ಟಿಲನ್ನು ಕಟ್ಟಿದ ಆಟಗಾರ ಅನ್ವರ್! ಇವರು 2017ರ under-17 ವಿಶ್ವಕಪ್‌ನಲ್ಲಿ ಮಿಂಚಿದ ಆಟಗಾರ. ಆದರೆ ಈ ಹಿಂದೆ ಅನ್ವರ್‌ಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಫುಟ್‌ಬಾಲ್ ಆಡದಂತೆ ಕಟ್ಟಿಹಾಕಿತ್ತು. ಹೈಪರ್ ಮಯೊಕಾರ್ಡಿಯೋಪಥಿ ಎಂಬ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಅನ್ವರ್ ಬಳಲುತ್ತಿದ್ದರು. ಈ ಬಗ್ಗೆ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಕೆಲವು ಕಾಲ ಫುಟ್‌ಬಾಲ್‌ನಿಂದ ದೂರವಿರಬೇಕಾಗಿತ್ತು. ಇದು ಅವರ ಫುಟ್‌ಬಾಲ್ ವೃತ್ತಿಜೀವನದ ಮುಕ್ತಾಯ ಎಂಬಂತೆ ಕಂಡುಬಂದಿತ್ತು. ಆದರೆ, 21 ವರ್ಷದ ಯುವ ಆಟಗಾರ ೪ ವರ್ಷಗಳ ಬಳಿಕ ಫುಟ್‌ಬಾಲ್ ವೃತ್ತಿ ಜೀವನಕ್ಕೆ ಮರಳಿದ ರೀತಿ ನಿಜಕ್ಕೂ ಸ್ಫೂರ್ತಿದಾಯಕ!
ಗೆಲ್ಲುವ ಛಲವಿದ್ದರೆ ಯಾವದೇ ಕಾಯಿಲೆ ತಡೆಯಲಾರದು ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ಫುಟ್‌ಬಾಲ್‌ಗೆ ಮರಳುತ್ತಿದ್ದಂತಯೇ ಅನ್ವರ್ ಗೋಲ್ ಹೊಡೆದು ಮಿಂಚಿದರು. ಅನ್ವರ್ ಭಾರತದ ಪರ ಮೊದಲ ಗೋಲ್ ಹೊಡೆದು ಮುನ್ನಡೆ ಸಾಧಿಸುವಂತೆ ಮಾಡಿದರು.
ನಂತರ ಸುನೀಲ್ ಛೆತ್ರಿ, ಮಾನ್ವೀರ್ ಸಿಂಗ್, ಹಾಗೂ ಇಶಾನ್ ಪಂಡಿತ ಒಂದೊಂದು ಗೋಲ್ ಹೊಡೆದು ಹಾಂಕಾಂಗ್ ವಿರುದ್ಧ 4-0 ಅಂತರದ ಭಾರಿ ಗೆಲುವು ಸಾಧಿಸಲು ನೆರವಾದರು. ಅಲ್ಲದೆ, ಸುನೀಲ್ ಛೆತ್ರಿ ಈ ಪಂದ್ಯದಲ್ಲಿ ಗೋಲ್ ಹೊಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಗೋಲ್ ಹೊಡೆದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದರು.
ಇದನ್ನೂ ಓದಿ: UEFA Europa League | 14 ಬಾರಿ ಚಾಂಪಿಯನ್! ದಾಖಲೆ ಬರೆದ ರಿಯಲ್ ಮ್ಯಾಡ್ರಿಡ್ ಗೆಲುವು!