ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಇಂದು (ಭಾನುವಾರ) ನಡೆದ ಸೂಪರ್-8(T20 World Cup 2024) ಪಂದ್ಯದಲ್ಲಿ ಅಫಘಾನಿಸ್ತಾನ(AFG vs AUS) ಬಲಿಷ್ಠ ಆಸ್ಟ್ರೇಲಿಯಾವನ್ನು 21 ರನ್ಗಳಿಂದ ಮಗುಚಿ ಹಾಕಿ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡಿತು. ಆಸೀಸ್ ವಿರುದ್ಧದ ಈ ಗೆಲುವನ್ನು ಆಟಗಾರರು ಮಾತ್ರವಲ್ಲದೆ ಆಫ್ಘನ್ನರು(Afghanistan) ಕೂಡ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಅಫಘಾನಿಸ್ತಾನದ ಬೀದಿ ಬೀದಿಗಳಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಫಘಾನಿಸ್ತಾನ ತಂಡ ಕಮಿನ್ಸ್ ಅವರ ಬೌಲಿಂಗ್ ದಾಳಿಯ ಮಧ್ಯೆಯೂ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 148 ರನ್ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅರ್ಧಶತಕದ ಹೊರತಾಗಿಯೂ 127 ರನ್ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಈ ಗೆಲುವಿನೊಂದಿಗೆ ಆಫ್ಘಾನ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡಿತು.
ಚಾಂಪಿಯನ್ ಹಾಡಿಗೆ ಕುಣಿದು ಕುಪ್ಪಳಿಸಿದ ಆಟಗಾರರು
ಪಂದ್ಯ ಗೆದ್ದು ಹೋಟೆಲ್ಗೆ ತೆರಳುವ ವೇಳೆ ಅಫಘಾನಿಸ್ತಾನ ತಂಡದ ಆಟಗಾರರು ತಮ್ಮ ಬಸ್ನಲ್ಲಿ ಡ್ವೇನ್ ಬ್ರಾವೊ ಹಾಡಿದ ಡೀಜೆ….ಬ್ರಾವೊ…ಚಾಂಪಿಯನ್…ಚಾಂಪಿಯನ್ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಬ್ರಾವೊ ಕೂಡ ಆಟಗಾರರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬ್ರಾವೊ ಅಫಘಾನಿಸ್ತಾನ ತಂಡ ಬೌಲಿಂಗ್ ಕೋಚ್ ಆಗಿದ್ದಾರೆ.
ಇದನ್ನೂ ಓದಿ AUS vs AFG: ಆಸ್ಟ್ರೇಲಿಯಾಕ್ಕೆ ಆಘಾತವಿಕ್ಕಿದ ಆಫ್ಘಾನ್; 21 ರನ್ ಸೋಲು ಕಂಡ ಆಸೀಸ್
ಅಫಘಾನಿಸ್ತಾನ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಗುಲ್ಬದಿನ್ ನೈಬ್ 2 ಓವರ್ಗೆ 20 ರನ್ ನೀಡಿ 4 ವಿಕೆಟ್ ಕಿತ್ತರು. ಇವರಿಗೆ ಉತ್ತಮ ಸಾಥ್ ನೀಡಿದ ನವೀನ್ ಉಲ್ ಹಕ್ 4 ಓವರ್ಗೆ 20 ರನ್ ಬಿಟ್ಟುಕೊಟ್ಟು 3 ವಿಕೆಟ್ ಉರುಳಿಸಿದರು. ನಾಯಕ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಲಾ ಒಂದು ವಿಕೆಟ್ ಪೆಡೆದರು.
ನಾಳೆ ನಡೆಯುವ ಭಾರತ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಕಂಡು, ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫಘಾನಿಸ್ತಾನ ಗೆದ್ದರೆ ಸೆಮಿಫೈನಲ್ ಪ್ರವೇಶಿಸಲಿದೆ. ಗ್ರಾಸ್ ಐಲೆಟ್ನಲ್ಲಿ(Saint Lucia latest weather) ನಡೆಯಲಿರುವ ಭಾರತ-ಆಸೀಸ್(Australia vs India) ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಭಾರೀ ಮಳೆಯಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಪಂದ್ಯ ರದ್ದಾದರೆ ಭಾರತಕ್ಕೆ ಲಾಭವಾಗಲಿದೆ. ಆದರೆ ಆಸೀಸ್ಗೆ ಇದು ಭಾರೀ ನಷ್ಟವಾಗಲಿದೆ. ಬಾಂಗ್ಲಾ ವಿರುದ್ಧ ಅಫಘಾನಿಸ್ತಾನ ಗೆದ್ದರೆ, ಆಸೀಸ್ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.