Site icon Vistara News

Afghanistan Cricket : ವಿಷ ಹಾಕಿ ಅಫಘಾನಿಸ್ತಾನ ಕ್ರಿಕೆಟಿಗನ ಕೊಲೆ ಯತ್ನ!

Afghanistan Cricketer

ನವ ದೆಹಲಿ: 2010ರಲ್ಲಿ ಅಪಘಾನಿಸ್ತಾನ ತಂಡದ (Afghanistan Cricket) ಪರವಾಗಿ ಎರಡು ಏಕದಿನ ಪಂದ್ಯಗಳನ್ನು ಆಡಿದ್ದ ಕ್ರಿಕೆಟರ್​ ಅಬ್ದುಲ್ಲಾ ಮಜಾರಿ ಅವರಿಗೆ ವಿಷ ಹಾಕಿ ಕೊಲೆ ಮಾಡುವ ಯತ್ನ ನಡೆದಿದೆ. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಸುಧಾರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರೀಗ ಅಪಾಯದಿಂದ ಪಾರಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಮಾಜಿ ಕ್ರಿಕೆಟಿಗನಿಗೆ ಅಪರಿಚಿತ ವ್ಯಕ್ತಿಗಳು ವಿಷಪ್ರಾಶನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಷಯ ಗೊತ್ತಾದ ತಕ್ಷಣ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣ ಸುಧಾರಿಸಿಕೊಂಡಿದ್ದಾರೆ.

ಮಜಾರಿ ಆಫ್ಘನ್​ ಪರ ಎರಡು ಏಕದಿನ ಪಂದ್ಯಗಳಲ್ಲಿ ಎರಡು ವಿಕೆಟ್ ಕಬಳಿಸಿದ್ದರು. ಅದೇ ರೀತಿ ಮೂರು ರನ್ ಗಳಿಸಿದ್ದಾರೆ. ಅಬ್ದುಲ್ಲಾ 2020ರಲ್ಲಿ ಕೊನೇ ಬಾರಿಗೆ ಶ್ಪಗೆಜಾ ಕ್ರಿಕೆಟ್ ಲೀಗ್​​ನಲ್ಲಿ ತಮ್ಮ ತಂಡ ಮಿಸ್ ಐನಾಕ್ ನೈಟ್ಸ್ ಪರ ಆಡಿದ್ದರು. ಬೂಸ್ಟ್ ಡಿಫೆಂಡರ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಅವಕಾಶ ಪಡೆದಿದ್ದರು. ಪಂದ್ಯದ ಸಮಯದಲ್ಲಿ, ಅವರು ಕೇವಲ ಮೂರು ಓವರ್​​ಗಳಲ್ಲಿ 14.00 ಎಕಾನಮಿಯಲ್ಲಿ 42 ರನ್​ ನೀಡಿದ್ದರು.

2021ರಲ್ಲಿ ತಾಲಿಬಾನ್ ರಾಷ್ಟ್ರವನ್ನು ವಶಪಡಿಸಿಕೊಂಡಾಗಿನಿಂದ ಅಫ್ಘಾನಿಸ್ತಾನದ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ . ಆದರೆ, ಪುನರುಜ್ಜೀವನದ ಸಮಯದಲ್ಲಿ, ತಾಲಿಬಾನ್ ಹೋರಾಟಗಾರರು ಅಬ್ದುಲ್ಲಾ ಮಜಾರಿ ಅವರೊಂದಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಪ್ರಧಾನ ಕಚೇರಿಗೆ ಹೋಗಿದ್ದು ಸುದ್ದಿಯಾಗಿತ್ತು. ಅಲ್ಲಿ ಅವರು ತಮಗೆ ಅವಕಾಶ ಕೊಡಿ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆದಾಗ್ಯೂ, ಎಸಿಬಿ ಅಧ್ಯಕ್ಷ ಹಮೀದ್ ಶಿನ್ವಾರಿ ತಾಲಿಬಾನ್ ಅಧಿಕಾರ ವಹಿಸಿಕೊಂಡರೂ, ಕ್ರಿಕೆಟ್​ಗೆ ಯಾವುದೇ ಬೆದರಿಕೆ ಇಲ್ಲ’ ಎಂದು ತಮ್ಮ ಹೇಳಿಕೆ ನೀಡಿದ್ದಾರೆ. ವಿಶೇಷವೆಂದರೆ ತಾಲಿಬಾನ್ ಗುಂಪಿನ ಸದಸ್ಯರ ಹಸ್ತಕ್ಷೇಪದಿಂದಾಗಿ ಪ್ರಕ್ಷುಬ್ಧತೆ ಉಂಟಾಗಿರುವ ಹೊರತಾಗಿಯೂ ರಾಷ್ಟ್ರೀಯ ಕ್ರಿಕೆಟ್ ತಂಡವು ನಿಯಮಿತವಾಗಿ ಕ್ರೀಡೆಯನ್ನು ಆಡುತ್ತಿದೆ.

ಇದನ್ನೂ ಓದಿ : World Cup 2023 : ಮುಂಬಯಿ ತಲುಪಿದ ವಿಶ್ವ ಕಪ್​ ಟ್ರೋಫಿ

ಅಕ್ಟೋಬರ್ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್​​ನಲ್ಲಿ ಆಫ್ಘಾನ್ ತಂಡ ಪಾಲ್ಗೊಳ್ಳಲಿದೆ. ಅಕ್ಟೋಬರ್ 7 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್​ಪಿಸಿಎ) ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಅದಕ್ಕೂ ಮುನ್ನ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ 2023ರಲ್ಲಿ ಅಫಘಾನಿಸ್ತಾನ ತಂಡ ಪಾಲ್ಗೊಳ್ಳಲಿದೆ. ಈ ಪಂದ್ಯಾವಳಿಯು ಏಕದಿನ ವಿಶ್ವಕಪ್ ಡ್ರೆಸ್ ರಿಹರ್ಸಲ್ ಆಗಿರುತ್ತದೆ. ಸರಣಿಗಳು ಹಾಗೂ ಏಷ್ಯಾ ಕಪ್​ ಬಳಿಕ ಅಫಘಾನಿಸ್ತಾನ ತಂಡ ಸಜ್ಜಾಗಲಿದೆ.

Exit mobile version