Site icon Vistara News

ICC World Cup 2023 : ಲಂಕಾ ಮಣಿಸಿ 5ನೇ ಸ್ಥಾನಕ್ಕೇರಿದ ಆಪ್ಘನ್​ ; ಉಳಿದ ತಂಡಗಳ ಸ್ಥಾನವೇನು?

Afghan Team

ಬೆಂಗಳೂರು: ಪುಣೆಯಲ್ಲಿ ನಡೆದ ಹಾಲಿ ವಿಶ್ವ ಕಪ್​ನ 30ನೇ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಸಣ್ಣ ಬದಲಾಣೆಯಾಗಿದೆ. ಆದರೆ ಮೊದಲ ಸ್ಥಾನಗಳಲ್ಲಿ ಯಾವುದೇ ಪಲ್ಲಟ ಉಂಟಾಗಿಲ್ಲ. ಈ ಪಂದ್ಯದಲ್ಲಿ ಭಾಗಿಯಾದ ಶ್ರೀಲಂಕಾ ಹಾಗೂ ಅಫಘಾನಿಸ್ತಾನ ತಂಡದ ಸ್ಥಾನಗಳು ಮೇಲೆ ಕೆಳಗಾಗಿವೆ. ಪ್ರಸ್ತುತ ಆಡಿರುವ ಆರು ಪಂದ್ಯಗಳಲ್ಲಿ ಆಪ್ಘನ್​ ಮೂರನ್ನು ಗೆದ್ದು ಒಟ್ಟು ಆರು ಅಂಕಗಳನ್ನು ಸಂಪಾದಿಸಿದೆ. ಇದರೊಂದಿಗೆ -0.718 ರನ್ ರೇಟ್​ನೊಂದಿಗೆ ಐದನೇ ಸ್ಥಾನಕ್ಕೆ ಏರಿಕೆಯಾಗಿದೆ. ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಮೂರು ಪಂದ್ಯ ಗೆದ್ದಿರುವ ಹೊಸ ಸಾಧನೆಯನ್ನೂ ಅಫಘಾನಿಸ್ತಾನ ತಂಡ ಮಾಡಿದೆ. ಇದೇ ವೇಳೆ ಹಶ್ಮತುಲ್ಲಾ ಶಾಹಿದಿ ನೇತೃತ್ವದ ಬಳಗ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡವನ್ನು ಹಿಂದಕ್ಕೆ ತಳ್ಳಿದೆ. ಈ ಪಂದ್ಯಕ್ಕೆ ಮೊದಲು ಅಫಘಾನಿಸ್ತಾನ ತಂಡ ಏಳನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಎರಡು ಕ್ರಮಾಂಕ ಬಡ್ತಿ ಪಡೆದುಕೊಂಡಂತಾಗಿದೆ.

ಹೊಸ ಪಟ್ಟಿಯಲ್ಲಿ ಶ್ರೀಲಂಕಾ ತಂಡ ಆರನೇ ಸ್ಥಾನಕ್ಕೆ ಇಳಿದಿದೆ. ಪಂದ್ಯಕ್ಕೆ ಮೊದಲು ಲಂಕಾ ಐದನೇ ಸ್ಥಾನ ಪಡೆದಿತ್ತು. ಲಂಕಾ ತಂಡ 6 ಪಂದ್ಯಗಳಲ್ಲಿ ಆಡಿದ್ದು. 2 ಗೆಲುವಿನೊಂದಿಗೆ 4 ಅಂಕಗಳನ್ನು ಹೊಂದಿದೆ. -0.275 ಲಂಕಾ ತಂಡದ ರನ್​ ರೇಟ್. ಇದೇ ವೇಳೆ ಆರನೇ ಸ್ಥಾನದಲ್ಲಿದ್ದ ಪಾಕ್​​ ತಂಡ ಏಳನೇ ಸ್ಥಾನಕ್ಕೆ ಜಾರಿದ. ಪಾಕ್​ ತಂಡ ಆರರಲ್ಲಿ ಎರಡು ಗೆಲುವು ಕಂಡದೆ. ಈ ತಂಡ -0.387 ನೆಟ್​ರನ್​ರೇಟ್​ ಹೊಂದಿದೆ. ಇದು ಲಂಕಾಗಿಂತಲೂ ಕಡಿಮೆಯಾಗಿದೆ.

ಇದನ್ನೂ ಓದಿ : Salman Khan: ಸಲ್ಮಾನ್‌ ಖಾನ್‌ರನ್ನು ನೋಡಿಯೂ ನೋಡದ ಹಾಗೆ ಹೋದ ರೊನಾಲ್ಡೊ; ಫ್ಯಾನ್ಸ್‌ ಕೆಂಡ!
ICC World Cup 2023 : ಭಾರತದ ಪಿಚ್​ ಹಿಡಿಸಲಿಲ್ಲ; ಸೋಲಿಗೊಂದು ಕುಂಟು ನೆಪ ಹೇಳಿದ ಪಾಕ್​ ಕೋಚ್​

ಸದ್ಯ ಭಾರತ 6 ಪಂದ್ಯಗಳಲ್ಲಿ 6ನ್ನೂ ಗೆದ್ದು +1.405 ರನ್​ ರೇಟ್​ನೊಂದಿಗೆ ಮೊದಲ ಸ್ಥಾನ ಪಡೆದಿದೆ. ಭಾರತ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ನವೆಂಬರ್​ 2ರಂದು ಆಡಲಿದೆ. ಈ ಪಂದ್ಯವನ್ನೂ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ಭಾರತದ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಮತ್ತೆ ನಂ.1ಸ್ಥಾನಕ್ಕೇರಲಿದೆ. ಆಗ ಭಾರತ ದ್ವಿತೀಯ ಸ್ಥಾನಕ್ಕೆ ಜಾರಲಿದೆ. ದಕ್ಷಿಣ ಆಫ್ರಿಕಾ, ಭಾರತಕ್ಕಿಂತ ಒಂದು ಪಂದ್ಯ ಕಡಿಮೆ ಗೆದ್ದಿದ್ದರೂ ರನ್​ ರೇಟ್​ ಉತ್ತಮವಾಗಿರುವುದರಿಂದ ಈ ಲಾಭ ಪಡೆಯಲಿದೆ. ಕಿವೀಸ್​ ಗೆದ್ದರೆ ಭಾರತದ ಅಗ್ರಸ್ಥಾನ ಭದ್ರವಾಗಲಿದೆ. ಉತ್ತಮ ರನ್​ ರೇಟ್​ ಹೊಂದಿದ್ದರೆ ಕಿವೀಸ್ ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೂ ಏರಬಹುದು. 6ರಲ್ಲಿ 4 ಪಂದ್ಯ ಗೆದ್ದ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದೆ.

ಅಂಕಪಟ್ಟಿ ಇಂತಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ66012+1.405
ದಕ್ಷಿಣ ಆಫ್ರಿಕಾ65110+2.032
ನ್ಯೂಜಿಲ್ಯಾಂಡ್​6428+1.232
ಆಸ್ಟ್ರೇಲಿಯಾ6428+0.970
ಅಫಘಾನಿಸ್ತಾನ6336-0.718
ಶ್ರೀಲಂಕಾ 6244-0.275
ಪಾಕಿಸ್ತಾನ6244-0.387
ನೆದರ್ಲ್ಯಾಂಡ್ಸ್6244-1.277
ಬಾಂಗ್ಲಾದೇಶ​ 6152-1.338
ಇಂಗ್ಲೆಂಡ್​​​ 6152-1.652

ವಿಶ್ವ ಕಪ್​ನ 31ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಬಾಂಗ್ಲಾದೇಶ ತಂಡ ಇದುವರೆಗೆ ಆಡಿರುವ 6ರಲ್ಲಿ ಕೇವಲ 1 ಮಾತ್ರ ಗೆದ್ದಿದೆ. ಪಾಕ್​ಗೆ 2 ವಿಜಯ ಲಭಿಸಿದೆ. ಈ ಪಂದ್ಯದ ಕೋಲ್ಕೊತಾದ ಈಡನ್​ ಗಾರ್ಡನ್ಸ್​ನಲ್ಲಿ ಆಯೋಜನೆಗೊಂಡಿದೆ.

Exit mobile version