Site icon Vistara News

ಪಾಕ್​ ವಿರುದ್ಧ ಗೆಲುವು; ಕ್ಯಾಬ್​ನಲ್ಲಿ ಲುಂಗಿ ಡ್ಯಾನ್ಸ್​ ಮಾಡಿ ಸಂಭ್ರಮಿಸಿದ ಆಫ್ಘನ್​ ಆಟಗಾರರು

Afghanistan cricketers groove to Lungi Dance

ಚೆನ್ನೈ: ಪ್ರಸಕ್ತ ಸಾಗುತ್ತಿರುವ ವಿಶ್ವಕಪ್​ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ(Pakistan vs Afghanistan) ವಿರುದ್ಧ ಅಫಘಾನಿಸ್ತಾನ 8 ವಿಕೆಟ್​ಗಳ ಐತಿಹಾಸಿಕ ಗೆಲುವು ಸಾಧಿಸಿತ್ತು. ಗೆಲುವಿನ ಬಳಿಕ ಆಟಗಾರರು ಮೈದಾನದಲ್ಲಿ ಮಾತ್ರವಲ್ಲದೆ ತಾವು ಪ್ರಯಾಣಿಸಿದ ಕ್ಯಾಬ್​ನಲ್ಲಿಯೂ ಲುಂಗಿ ಡ್ಯಾನ್ಸ್(Lungi Dance)​ ಮಾಡಿ ಸಂಭ್ರಮಿಸಿದ್ದಾರೆ. ಇದರ ವಿಡಿಯೊ ವೈರಲ್(viral video)​ ಆಗಿದೆ.

ಕ್ಯಾಬ್​ನಲ್ಲಿ ಲುಂಗಿ ಡ್ಯಾನ್

ಚೆನ್ನೈಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಕೂಡಲೇ ಆಫ್ಘನ್​ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಬದ್ಧ ಎದುರಾಳಿಯನ್ನು ಮಣಿಸಿದ ಸಂತಸದಲ್ಲಿ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದರು. ಅಲ್ಲದೆ ತಮಗೆ ಬೆಂಬಲ ಸೂಚಿಸಿದ ಭಾರತೀಯ ಅಭಿಮಾನಿಗಳಿಗೆ ಸ್ಟೇಡಿಯಂಗೆ ಒಂದು ಸುತ್ತು ಹಾಕಿ ಧನ್ಯವಾದ ತಿಳಿಸಿದ್ದರು. ಪಂದ್ಯ ಮುಗಿದು ಡ್ರೆಸಿಂಗ್​ ರೂಮ್​ನಲ್ಲಿ ಕೇಕ್​ ಕತ್ತರಿಸಿ ಟೇಬಲ್​ ಮೇಲೆ ಹತ್ತಿ ಕುಣಿಸಿದು ಕುಪ್ಪಳಿಸಿದ್ದರೂ. ಆದರೂ ಕೂಡ ತೃಪ್ತಿಯಾಗದ ಆಫ್ಘನ್​ ಆಗಾರರು ಹೋಟೆಲ್​ಗೆ ತೆರಳುವ ವೇಳೆ ಕ್ಯಾಬ್​ನಲ್ಲಿ ಬಾಲಿವುಡ್​ನ ಸ್ಟಾರ್​ ಹಿರಿಯ ನಟ ಶಾರೂಖ್ ಖಾನ್(Shah Rukh Khan) ಮತ್ತು ದೀಪಿಕಾ ಪಡುಕೋಣೆ ನಟನೆಯ ಚೆನ್ನೈ ಎಕ್ಸ್ ಪ್ರೆಸ್ ಸಿನೆಮಾದ ಪ್ರಸಿದ್ಧ ಲುಂಗಿ ಡ್ಯಾನ್ಸ್ ಹಾಡಿಗೆ ಕುಣಿದು ಮತ್ತೊಮ್ಮೆ ಗೆಲುವಿನ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಆಟಗಾರರು ಲುಂಗಿ ಡ್ಯಾನ್ಸ್ ಮಾಡಿದ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ AFG vs PAK: ಪಾಕ್​​ ಪರಾಭವ; ಗುಂಡಿನ ಸುರಿಮಳೆಗೈದು ಸಂಭ್ರಮಿಸಿದ ಕಾಬೂಲ್​ ಜನತೆ

ಚೆನ್ನೈನ ಚೆಪಾಕ್ ಸ್ಟೇಡಿಯಮ್​ನಲ್ಲಿ(MA Chidambaram Stadium, Chennai) ಸೋಮವಾರ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಾಕಿಸ್ತಾನ, ಆಫ್ಘನ್​ ಬೌಲರ್​ಗಳ ಶಿಸ್ತಿನ ದಾಳಿಗೆ ತಡೆಯೊಟ್ಟುವಲ್ಲಿ ವಿಫಲವಾಗಿ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗೆ 282 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಅಪಘಾನಿಸ್ತಾನ ಕೇವಲ 2 ವಿಕೆಟ್​ ಕಳೆದುಕೊಂಡು ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತು. ಈ ಮೂಕಲ ಏಕದಿನ ಕ್ರಿಕೆಟ್​ ಮಾದರಿಯಲ್ಲಿ ಪಾಕ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತ್ತು.

ಕಾಬಲ್​ನಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ

ಆಫ್ಘನ್​ ತಂಡ ಪಾಕಿಸ್ತಾನವನ್ನು ಮಣಿಸುತ್ತಿಂದತೆಯೇ ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವಿಶೇಷ ಸಂಭ್ರಮಾಚರಣೆ ಮಾಡಲಾಯಿತು. ತಾಲಿಬಾನಿಗಳು ಮನೆಯಲ್ಲಿದ್ದ ಬಂದೂಕುಗಳನ್ನು ಹೊರತಂದು ದೀಪಾಳಿಯಲ್ಲಿ ಸಿಡಿದ ಪಟಾಕಿಯಂತೆ ಬಂದೂಕಿನಿಂದ ಗುಂಡು ಸಿಡಿಸಿ ಸಂಭ್ರಮಿಸಿದರು. ಪಾಕ್​ ವಿರುದ್ಧದ ಈ ಗೆಲುವು ಅಭಿಮಾನಿಗಳಿಗೆ ವಿಶ್ವಕಪ್​ ಗೆದ್ದಷ್ಟೇ ಖಷಿ ನೀಡಿದಂತಿತ್ತು. ಈ ಹಿಂದೆ ಇಂಗ್ಲೆಂಡ್​ ವಿರುದ್ಧ ಗೆದ್ದಾಗ ಈ ರೀತಿಯ ಸಂಭ್ರಮ ಕಾಣಿಸಿರಲಿಲ್ಲ. ಪಾಕಿಸ್ತಾನ ಬದ್ಧ ವೈರಿ ಆಗಿರುವುದರಿಂದ ಇವರ ವಿರುದ್ಧದ ಗೆಲುವು ದೊಡ್ಡ ಸಾಧನೆಯಾಗಿದೆ.

ಆಟಗಾರರೊಂದಿಗೆ ಕುಣಿದು ಕುಪ್ಪಳಿಸಿದ ಇರ್ಫಾನ್​ ​

ಪಾಕಿಸ್ತಾನದ ಸೋಲನ್ನು ಕೇವಲ ಆಫ್ಘನ್​ ಮಾತ್ರವಲ್ಲ ಭಾರತೀಯರು ಸಂಭ್ರಮಿಸಿದ್ದರು. ಚೆನ್ನೈ ಸ್ಟೇಡಿಯಂನಲ್ಲಿ ಭಾರತೀಯ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನರೆದು ಆಫ್ಘನ್​ಗೆ ಬೆಂಬಲ ಸೂಚಿಸಿದ್ದರು. ಪಾಕಿಸ್ತಾನ ಸೋತ ಖುಷಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್ ಅವರು ಆಫ್ಘನ್​ ಆಟಗಾರ ಜತೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದರು. ಈ ವಿಡಿಯೊ ವೈರಲ್(Viral Video)​ ಆಗಿತ್ತು.

Exit mobile version