Site icon Vistara News

IND vs AFG : ಭಾರತ ತಂಡದ ಗೆಲುವಿಗೆ 273 ರನ್​ಗಳ ಗುರಿಯೊಡ್ಡಿದ ಅಪಘಾನಿಸ್ತಾನ

ind vs afghan

ನವದೆಹಲಿ: ಬ್ಯಾಟಿಂಗ್​ಗೆ ಅನುಕೂಲಕರವಾಗಿರವು ಡೆಲ್ಲಿಯ ಪಿಚ್​ನಲ್ಲಿ ಅಫಘಾನಿಸ್ತಾನ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಬ್ಯಾಟಿಂಗ್ ಮಾಡಿತು. ಹೀಗಾಗಿ ಭಾರತ ವಿರುದ್ಧ ವಿಶ್ವ ಕಪ್​ ಪಂದ್ಯದಲ್ಲಿ (IND vs AFG) 272 ರನ್​ಗಳನ್ನು ಪೇರಿಸಿತು. ಇದರೊಂದಿಗೆ ಭಾರತ ತಂಡಕ್ಕೆ 273 ರನ್​ಗಳ ಗೆಲುವಿನ ಗುರಿ ಎದುರಾಗಿದೆ. ಭಾರತ ತಂಡದ ಪರ ಬೌಲಿಂಗ್​ನಲ್ಲಿ ಜಸ್​ಪ್ರಿತ್ ಬುಮ್ರಾ 39 ರನ್​ಗಳಿಗೆ 4 ವಿಕೆಟ್ ಉರುಳಿಸಿ ಮಿಂಚಿದರು. ಅಫಘಾನಿಸ್ತಾನ ತಂಡದಲ್ಲಿ ನಾಯಕ ಹಶ್ಮತುಲ್ಲಾ ಶಾಹಿದಿ (80 ರನ್)​ ಹಾಗೂ ಅಜ್ಮತುಲ್ಲಾ ಒಮರ್ಜೈ (62 ರನ್​) ಅರ್ಧ ಶತಕಗಳನ್ನು ಬಾರಿಸಿದರು.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಂಡದ ಆಟಗಾರರು 8 ವಿಕೆಟ್​ ನಷ್ಟಮಾಡಿಕೊಂಡು 272 ರನ್​ಗಳನ್ನು ಬಾರಿಸಿದರು.

ಇನಿಂಗ್ಸ್ ಆರಂಭಿಸಿದ ಅಘಘಾನಿಸ್ತಾನ ತಂಡ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಿತು. ಆರಂಭಿಕರಾದ ರಹ್ಮನುಲ್ಲಾ ಗುರ್ಬಜ್​ (21) ಹಾಗೂ ಇಬ್ರಾಹಿಂ ಜದ್ರಾನ್​ (22) ರನ್ ಬಾರಿಸಿತು. ಆದರೆ, ಈ ಜೋಡಿ 31 ರನ್​ ಗಳಿಸಿದಾದ ಬುಮ್ರಾ ಜದ್ರಾನ್ ವಿಕೆಟ್ ಉರುಳಿಸಿದರು. ಬಳಿಕ ಬಂದ ರಹ್ಮತ್ ಶಾ ಶಾರ್ದುಲ್ ಠಾಕೂರ್ ಅವರಿಗೆ ಎಲ್​ಬಿಡಬ್ಲ್ಯೂ ಔಟ್​ ಆದರು. ಇದೇ ವೇಳೆ ಶಾರ್ದೂಲ್ ಠಾಕೂರ್​ ಬೌಂಡರಿ ಬಳಿ ಹಿಡಿದ ಅದ್ಭುತ ಕ್ಯಾಚ್​ಗೆ ಗುರ್ಬಜ್​ ಔಟಾದರು. 63 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ಅಫಘಾನಿಸ್ತಾನ ತಂಡ ಹಿನ್ನಡೆ ಅನುಭವಿಸಿತು.

ಈ ಸುದ್ದಿಗಳನ್ನೂ ಓದಿ
ICC World Cup 2023 : ಕಾಂಗರೂ- ಹರಿಣಗಳ ನಡುವಿನ ಹಣಾಹಣಿಯಲ್ಲಿ ಗೆಲುವು ಯಾರಿಗೆ?
ICC World Cup 2023 : ವಿಶ್ವ ಕಪ್​ನಲ್ಲಿ ಹೊಸ ದಾಖಲೆ ಬರೆದ ಪಾಕಿಸ್ತಾನ
ICC World Cup 2023 : ಬಿಗ್​ ಸ್ಕೋರ್​ ಪಂದ್ಯದಲ್ಲಿ ಲಂಕಾ ಮಣಿಸಿದ ಪಾಕ್​

ಹಶ್ಮತುಲ್ಲಾ, ಅಜ್ಮತುಲ್ಲಾ ಶತಕದ ಜತೆಯಾಟ

ಹಿನ್ನಡೆಗೆ ಒಳಗಾದ ಅಪಘಾನಿಸ್ತಾನ ತಂಡವನ್ನು ನಾಯಕ ಹಶ್ಮತುಲ್ಲಾ ಶಾಹಿದಿ (80) ಹಾಗೂ ಅಜ್ಮತುಲ್ಲಾ ಒಮರ್ಜೈ (63) ಕಾಪಾಡಿದರು. ಅವರಿಬ್ಬರೂ ಅರ್ಧ ಶತಕಗಳನ್ನು ಬಾರಿಸಿದರಲ್ಲದೆ, ನಾಲ್ಕನೇ ವಿಕೆಟ್​ಗೆ 121 ರನ್​ಗಳ ಜತೆಯಾಟವಾಡಿದರು. ಆದರೆ, ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಒಮರ್ಜೈ ಅವರನ್ನು ಹಾರ್ದಿಕ್ ಪಾಂಡ್ಯ ಬೌಲ್ಡ್ ಮಾಡಿದರು. ಹಶ್ಮತುಲ್ಲಾ ಕುಲ್ದೀಪ್ ಎಸೆತಕ್ಕೆ ಎಲ್​ಬಿಡಬ್ಲ್ಯು ಔಟಾದರು. ಮೊಹಮ್ಮದ್ ನಬಿ 19 ರನ್​ ಬಾರಿಸಿದರೆ, ರಶೀದ್ ಖಾನ್​ 16 ರನ್ ಗಳಿಸಿದರು. ಮುಜೀಬ್​ ಉರ್​ ರಹಮಾನ್ 10 ರನ್​ ಕೊಡುಗೆ ಕೊಟ್ಟರು.

ಹಾರ್ದಿಕ್ ಪಾಂಡ್ಯ ಭಾರತ ಪರವಾಗಿ 2 ವಿಕೆಟ್ ಉರುಳಿಸಿದರೆ, ಕುಲ್ದೀಪ್​ ಯಾದವ್​ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಉರುಳಿಸಿದರು. ಆದರೆ, ಮೊಹಮ್ಮದ್​ ಸಿರಾಜ್​ 9 ಓವರ್​ಗಳ ಸ್ಪೆಲ್​ನಲ್ಲಿ ಯಾವುದೇ ವಿಕೆಟ್ ಪಡೆಯದೇ 70 ರನ್ ನೀಡಿದ್ದು ತಂಡದ ಪಾಲಿಗೆ ದುಬಾರಿ ಎನಿಸಿತು. ಅವರನ್ನು ಕ್ರಿಕೆಟ್​ ಪ್ರೇಮಿಗಳು ಟ್ರೋಲ್ ಮಾಡಿದರು.

ತಂಡಗಳು ಇಂತಿವೆ

ಭಾರತ ತಂಡ: ರೋಹಿತ್ ಶರ್ಮಾ (ಸಿ), ಇಶಾನ್ ಕಿಶನ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಅಫಘಾನಿಸ್ತಾನ ತಂಡ : ರಹಮಾನುಲ್ಲಾ ಗುರ್ಬಾಜ್ (ವಿಕೆ), ಇಬ್ರಾಹಿಂ ಝದ್ರನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ಸಿ), ನಜೀಬುಲ್ಲಾ ಝದ್ರನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಾಕ್ ಫಾರೂಕಿ.

Exit mobile version