Site icon Vistara News

Sachin Tendulkar : ಸಾರಾ ಬಳಿಕ ಇದೀಗ ಸಚಿನ್​​​ಗೂ ಡೀಪ್​ಫೇಕ್​​ ​ ವಿಡಿಯೊ ಕಾಟ

Sachin Tendulkar

ಬೆಂಗಳೂರು : ಕಳೆದ ವರ್ಷ ಶುಬ್ಮನ್ ಗಿಲ್ ಅವರೊಂದಿಗಿನ ಸಾರಾ ತೆಂಡೂಲ್ಕರ್ ಅವರ ಡೀಪ್​ಫೇಕ್​ ಫೋಟೋ ವೈರಲ್ ಆಗಿತ್ತು. ಇದೀಗ ಅವರ ತಂದೆ, ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕೂಡ ಇದಕ್ಕೆ ಬಲಿಯಾಗಿದ್ದಾರೆ. ಅಪ್​ಲೋಡ್ಮಾ ಡಲಾದ ಡೀಪ್ ಫೇಕ್ ವೀಡಿಯೊದಲ್ಲಿ, ಸಚಿನ್ ತೆಂಡೂಲ್ಕರ್ ಗೇಮಿಂಗ್ ಅಥವಾ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಅಪ್ಲಿಕೇಶನ್ ಅನ್ನು ಬಳಸಿಕೊಂಡು ಜನರು ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಸಚಿನ್ ತೆಂಡೂಲ್ಕರ್​ ಅವರು ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಮಹಾರಾಷ್ಟ್ರ ಸೈಬರ್ ವಿಭಾಗ ಅನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ವೀಡಿಯೊಗಳು ನಕಲಿ. ತಂತ್ರಜ್ಞಾನದ ವ್ಯಾಪಕ ದುರುಪಯೋಗವನ್ನು ನೋಡಿದಾಗ ಆತಂಕವಾಗುತ್ತದೆ. ಈ ರೀತಿಯ ವೀಡಿಯೊಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್ ಗಳ ಬಗ್ಗೆ ವರದಿ ಮಾಡಲು ಪ್ರತಿಯೊಬ್ಬರನ್ನು ವಿನಂತಿಸುತ್ತೇನೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಜಾಗರೂಕರಾಗಿರಬೇಕು ಮತ್ತು ದೂರುಗಳಿಗೆ ಸ್ಪಂದಿಸಬೇಕು. ತಪ್ಪು ಮಾಹಿತಿ ಮತ್ತು ಡೀಪ್ ಫೇಕ್ ಗಳ ಹರಡುವಿಕೆಯನ್ನು ತಡೆಗೆ ತ್ವರಿತ ಕ್ರಮವು ನಿರ್ಣಾಯಕ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್​ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರ ಡೀಪ್ ಫೇಕ್ ಚಿತ್ರ ವೈರಲ್ ಆಗಿತ್ತು. ಈ ಚಿತ್ರದಲ್ಲಿ ಸಾರಾ ತನ್ನ ವಂದತಿಯ ಗೆಳೆಯ ಶುಭ್ಮನ್ ಗಿಲ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆದಾಗ್ಯೂ ಪರಶೀಲನೆ ಮಾಡಿದಾಗ ಸಾರಾ ಪಕ್ಕದಲ್ಲಿ ಕುಳಿತಿದ್ದು ಶುಬ್ಮನ್ ಅಲ್ಲ. ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ : Sachin Tendulkar : ಮುದ್ದೇನಹಳ್ಳಿಯಲ್ಲಿ ಕ್ರಿಕೆಟ್​ ಆಡಲಿದ್ದಾರೆ ಸಚಿನ್​, ಯುವರಾಜ್​ ಸಿಂಗ್​

ಸರ್ಕಾರದ ಮಾರ್ಗಸೂಚಿಗಳು

ರಶ್ಮಿಕಾ ಮಂದಣ್ಣ, ಸಾರಾ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಸೆಲೆಬ್ರಿಟಿಗಳು ಸಹ ಬಲಿಪಶುವಾದ ನಂತರ ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಡೀಪ್ ಫೇಕ್ ಚಿತ್ರಗಳು ಮತ್ತು ವೀಡಿಯೊಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪನಿಗಳು ಡೀಪ್ ಫೇಕ್ ಚಿತ್ರಗಳು ಮತ್ತು ವೀಡಿಯೊಗಳ ಬಗ್ಗೆ 36 ಗಂಟೆಗಳ ಒಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಹಾಗೆ ಮಾಡಲು ವಿಫಲವಾದರೆ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು) ನಿಯಮಗಳು 2021 ರ ನಿಯಮ 7 ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ.

ಮಾರ್ಗಸೂಚಿಗಳು ಈ ಕೆಳಗಿನಂತಿವೆ

Exit mobile version