Site icon Vistara News

ಒಡೆದ ಹೃದಯದ ಎಮೋಜಿ ಹಾಕಿದ ಸೂರ್ಯಕುಮಾರ್​; ಇದರ ಹಿಂದಿದೆ ಬಲವಾದ ಕಾರಣ

Suryakumar Yadav's Cryptic Post

ಜೊಹಾನ್ಸ್​ಬರ್ಗ್​: ನಾಯಕನಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸಿದ ಸಾಧನೆ ತೋರಿದ್ದರೂ, ಸೂರ್ಯಕುಮಾರ್​ ಯಾದವ್(Suryakumar Yadav)​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಡೆದು ಹೋದ ಹೃದಯದ ಫೋಟೊವನ್ನು ಶೇರ್​ ಮಾಡಿದ್ದಾರೆ. ಅವರ ಪೋಸ್ಟ್​ ಕಂಡು ಕೆಲವರು ಅಚ್ಚರಿಗೊಂಡಿದ್ದಾರೆ.

ಹೌದು, ಯಾವುದೇ ವಿಚಾರವನ್ನು ಬರೆದುಕೊಳ್ಳದೆ ಸೂರ್ಯಕುಮಾರ್​ ಅವರು ಮಾಡಿರುವ ಈ ಪೋಸ್ಟ್​ನ ಹಿಂದಿರುವ ಅಸಲಿ ರಹಸ್ಯವೆಂದರೆ, ಅಚ್ಚರಿ ಎಂಬಂತೆ ರೋಹಿತ್​ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್​(Mumbai Indians Captain) ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದು. ನೇರವಾಗಿ ಅವರು ಈ ವಿಚಾರವನ್ನು ಹೇಳಲಿದ್ದರೂ ಪರೋಕ್ಷವಾಗಿ ಹಾಕಿರುವ ಈ ಪೋಸ್ಟ್​ ಕ್ರಿಕೆಟ್​ ಅಭಿಮಾನಿಗಳಿಗೆ ಅರ್ಥವಾಗಿದೆ.

ಉತ್ತಮ ಬಾಂಧವ್ಯ

ರೋಹಿತ್​ ಮತ್ತು ಸೂರ್ಯಕುಮಾರ್​​ ನಡುವೆ ಉತ್ತಮ ಬಾಂಧವ್ಯ ಇದೆ. ಈ ವಿಚಾರ ಎಲ್ಲರಿಗೂ ತಿಳಿದಿದೆ. ಕಳೆದ ವರ್ಷದ ಐಪಿಎಲ್​ನಲ್ಲಿ ಸೂರ್ಯಕುಮಾರ್​ ಅವರು ನಿರೀಕ್ಷಿತ ಪ್ರದರ್ಶನ ತೋರದಿದ್ದರೂ ಕೂಡ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ರೋಹಿತ್​ ಪ್ರಮುಖ ಕಾರಣ. ಟೀಮ್​ ಇಂಡಿಯಾ ಪರ ಫಾರ್ಮ್​ ಕಳೆದುಕೊಂಡಲಾಗಲು ಸೂರ್ಯ ಅವರ ಬೆಂಬಲಕ್ಕೆ ರೋಹಿತ್ ನಿಂತಿದ್ದರು. ಇದೀಗ ಅವರ ನೆಚ್ಚಿನ ನಾಯಕನನ್ನು ಈ ಸ್ಥಾನದಿಂದ ಕೆಳಗಿಳಿಸಿರುವುದು ಅವರಿಗೆ ಬೇಸರ ತಂದಂತಿದೆ. ಇದೇ ಕಾರಣಕ್ಕೆ ಅವರು ಒಡೆದು ಹೋದ ಹೃದಯದ ಎಮೊಜಿ ಹಾಕಿ ತನ್ನ ನೋವನ್ನು ವ್ಯಕ್ತಪಡಿಸಿದಂತಿದೆ.

ಇದನ್ನೂ ಓದಿ Rohit Sharma:​ ಶೀಘ್ರದಲ್ಲೇ ಟಿ20 ಕ್ರಿಕೆಟ್​ಗೆ ರೋಹಿತ್ ಗುಡ್‌ ಬೈ ಹೇಳುವುದು ಖಚಿತ!


ಹಾರ್ದಿಕ್​ ಪಾಂಡ್ಯ ಅವರನ್ನು ಟ್ರೇಡ್​ ಮೂಲಕ ಗುಜರಾತ್​ ತಂಡದಿಂದ ಖರೀದಿ ಮಾಡಿದಾಗ ಮುಂಬೈ ತಂಡದ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ಮರು ದಿನವೇ ಮುಂಬೈ ಇಂಡಿಯನ್ಸ್​ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಬುಮ್ರಾ ಅವರನ್ನು ಹೊಗಳಿ ಅವರ ಫೋಟೋವೊಂದನ್ನು ಶೇರ್​ ಮಾಡುವ ಮೂಲಕ ಬುಮ್ರಾ ಅವರನ್ನು ತಣ್ಣಗಾಗಿಸುವ ಕೆಲಸ ಮಾಡಿತ್ತು. ಇದೀಗ ಸೂರ್ಯ ಕೂಡ ಫ್ರಾಂಚೈಸಿಯ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದಂತಿದೆ. ಒಟ್ಟಾರೆ ಮುಂಬೈ ಇಂಡಿಯನ್ಸ್​ ಈ ಬಾರಿ ಒಡೆದ ಮನೆಯಾಗಿದೆ ಎಂದರೂ ತಪ್ಪಾಗಲಾರದು.

ಲಕ್ಷಾನುಗಟ್ಟಲೇ ಫಾಲೋವರ್ಸ್​ ನಷ್ಟ

ರೋಹಿತ್‌ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್‌) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿದೆ. ಫಾಲೋವರ್ಗಳ ಮತ್ತೆ ಕುಸಿತ ಕಂಡರೂ ಅಚ್ಚರಿಯಿಲ್ಲ.

ಮುಂಬೈ ತಂಡ ಎಂದಿಗೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್‌ ತೆಂಡೂಲ್ಕರ್​ ಅವರಿಂದ ಹರ್ಭಜನ್‌ ತನಕ, ಪಾಂಟಿಂಗ್‌ ಅವರಿಂದ ರೋಹಿತ್‌ ತನಕ ಉತ್ತಮ ನಾಯಕರನ್ನು ಕಂಡಿದೆ. ಇವರಲ್ಲಿ ರೋಹಿತ್‌ ಅವರದು ಅತ್ಯಂತ ದೊಡ್ಡ ಕೊಡುಗೆ ಇದೆ. 5 ಬಾರಿ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ. ಫ್ರಾಂಚೈಸಿ ಎಂದಿಗೂ ರೋಹಿತ್‌ಗೆ ಕೃತಜ್ಞವಾಗಿದೆ ಎಂದು ಮುಂಬೈ ಇಂಡಿಯನ್ಸ್​ ತನ್ನ ವೆಬ್‌ಸೈಟ್‌ನಲ್ಲಿ ಬರೆದಿದೆ.

Exit mobile version