Site icon Vistara News

BCCI : ಲಂಕಾ ಮಂಡಳಿ ಬಳಿಕ ಇದೀಗ ಬಿಸಿಸಿಐಗೂ ಬ್ಯಾನ್ ಆಗುವ ಭಯ?

Srilanka Cricket team

ಬೆಂಗಳೂರು: ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು (ಅಮಾನತುಗೊಳಿದೆ. ಇದರಿಂದಾಗಿ ಹಾಲಿ ವಿಶ್ವ ಕಪ್​ನಲ್ಲಿ 9 ಪಂದ್ಯಗಳಲ್ಲಿ ಕೇವಲ 2 ಗೆಲುವುಗಳೊಂದಿಗೆ ಕೊನೆಗೊಳಿಸಿದ ಲಂಕಾ ತಂಡಕ್ಕೆ ಹೆಚ್ಚುವರಿ ಹಿನ್ನಡೆಯಾಗಿದೆ. ಐಸಿಸಿ ಈ ಕಠಿಣ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದು ಶ್ರೀಲಂಕಾದಲ್ಲಿ ಕ್ರಿಕೆಟ್ ಆಡಳಿತದಲ್ಲಿ ಸರ್ಕಾರದ ರಾಜಕೀಯ ಹಸ್ತಕ್ಷೇಪಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದೆ. ಆದರೆ, ರಾಜಕೀಯ ಹಸ್ತಕ್ಷೇಪದ ಆರೋಪ ಇರುವುದು ಕೇವಲ ಶ್ರೀಲಂಕಾ ಕ್ರಿಕೆಟ್​ ಮಂಡಳಿ ವಿರುದ್ಧ ಮಾತ್ರವಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಹ ರಾಜಕೀಯದಿಂದ ನಲುಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಲಂಕಾಗೆ ಅನ್ವಯಿಸಲಾಗಿರುವ ನಿಯಮ ಎಲ್ಲರಿಗೂ ಆಗಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.

2024 ರ ಐಸಿಸಿ ಟಿ 20 ವಿಶ್ವಕಪ್​​ಗೆ ಏಳು ತಿಂಗಳುಗಳು ಮಾತ್ರ ಉಳಿದಿವೆ ಎಂದು ಲೆಕ್ಕಾಚಾರ ತೆಗೆದುಕೊಂಡರೆ ಲಂಕಾ ಕ್ರಿಕೆಟ್​ ಸಮಿತಿಯ ಅಮಾನತು ಸಮಯವು ತುಂಬಾ ದುರದೃಷ್ಟಕರ ಎಂದು ಹೇಳಲಾಗಿದೆ. ಲಂಕಾ ತಂಡಕ್ಕೆ ವಿಶ್ವ ಕಪ್​ನಲ್ಲಿ ಆಡುವುದಕ್ಕೆ ಇದರಿಂದಾಗಿ ಸಾಧ್ಯವಾಗುವುದಿಲ್ಲ.

ಬಿಸಿಸಿಐ, ಪಿಸಿಬಿಗೆ ಬಿಸಿ

ಬಿಸಿಸಿಐ ಮತ್ತು ಪಿಸಿಬಿಯ ಟೀಕಾಕಾರರು ಆಯಾ ಮಂಡಳಿಗಳ ಕಾರ್ಯಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇದೆ ಎಂದು ಹೇಳಲಾಗಿದೆ. ಜಯ್ ಶಾ ಮತ್ತು ರಾಜೀವ್ ಶುಕ್ಲಾ ಅವರು ಪ್ರತಿಷ್ಠಿತ ಭಾರತೀಯ ಮಂಡಳಿಯಲ್ಲಿ ಪ್ರಮುಖ ಮುಖಗಳಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಶ್ರೀಲಂಕಾದ ಅಂತಿಮ ಲೀಗ್ ಪಂದ್ಯಕ್ಕೆ ಮುಂಚಿತವಾಗಿ, ಕ್ರೀಡಾ ಸಚಿವ ರೋಶನ್ ರಣಸಿಂಘೆ ಪುರುಷರ ತಂಡದ ನಿರಾಶಾದಾಯಕ ಪ್ರದರ್ಶನದಿಂದಾಗಿ ಇಡೀ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ್ದರು. ಆದಾಗ್ಯೂ, ದೇಶದ ಉನ್ನತ ನ್ಯಾಯಾಲಯವು ಈ ನಿರ್ಧಾರಕ್ಕೆ 14 ದಿನಗಳ ತಡೆಯಾಜ್ಞೆ ವಿಧಿಸಿ, ಶಮ್ಮಿ ಸಿಲ್ವಾ ಅವರನ್ನು ಶ್ರೀಲಂಕಾ ಕ್ರಿಕೆಟ್ನ ಅಧ್ಯಕ್ಷರಾಗಿ ತಾತ್ಕಾಲಿಕವಾಗಿ ಮುಂದುವರಿಸಿದೆ.

ಮಂಡಳಿಯ ದೈನಂದಿನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವ ರಾಜಕೀಯ ವಿವಾದಗಳಿಂದ ಸಮಸ್ಯೆ ಹೆಚ್ಚಾಗಿದೆ. 2023 ರ ವಿಶ್ವಕಪ್​​ನ ಕಳಪೆ ಪ್ರದರ್ಶನದ ನಂತರ, ತಂಡವು ಹೊಸ ನಾಯಕನನ್ನು ನೇಮಿಸುವುದು ಮತ್ತು ಪ್ರಸ್ತುತ ಮುಖ್ಯ ಕೋಚ್ ಕ್ರಿಸ್ ಸಿಲ್ವರ್ವುಡ್ ಅವರ ಭವಿಷ್ಯವನ್ನು ನಿರ್ಧರಿಸುವುದು ಸೇರಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಆದಾಗ್ಯೂ, ತಂಡದ ವಿಷಯಗಳನ್ನು ಪರಿಹರಿಸುವ ಮೊದಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯೇ ಸಂಪೂರ್ಣ ಸರಿಪಡಿಸುವ ಅಗತ್ಯವಿದೆ.

ಇದನ್ನೂ ಓದಿ: Sri Lanka Cricket Team : ಲಂಕಾ ಕ್ರಿಕೆಟ್​ ತಂಡಕ್ಕೆ ಬಹು ದೊಡ್ಡ ಸಂಕಷ್ಟ!

2019 ರಲ್ಲಿ ಅಮಾನತುಗೊಂಡ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆಯ ಬಳಿಕ ಕಳೆದ ನಾಲ್ಕು ವರ್ಷಗಳಲ್ಲಿ ಅಮಾನತು ಎದುರಿಸಿದ ಐಸಿಸಿಯ ಎರಡನೇ ಪೂರ್ಣ ಸದಸ್ಯ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಜಿಂಬಾಬ್ವೆಗೆ ವ್ಯತಿರಿಕ್ತವಾಗಿ ಐಸಿಸಿ ಶ್ರೀಲಂಕಾದೊಂದಿಗೆ ಮೃದು ಧೋರಣೆ ತೋರಿಸುತ್ತಿದೆ. ಅಮಾನತು ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.

Exit mobile version