ನವದೆಹಲಿ : ಐಪಿಎಲ್ 16ನೇ ಆವೃತ್ತಿಯ 28ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಪ್ರವಾಸಿ ಕೆಕೆಆರ್ ಬಳಗ ಮೊದಲು ಬ್ಯಾಟ್ ಮಾಡಬೇಕಾಗಿದೆ. ನವ ದೆಹಲಿಯ ಅರುಣ್ ಜೆಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ಆಯೋಜನೆಗೊಂಡಿದೆ. ಸಂಜೆಯಿಂದಲೇ ಡೆಲ್ಲಿಯಲ್ಲಿ ಮಳೆ ಬಂದ ಕಾರಣ ಟಾಸ್ 1 ಗಂಟೆಯೂ ಅಧಿಕ ಕಾಲ ತಡವಾಯಿತು. 8.15ರ ವೇಳೆಗೆ ಟಾಸ್ ನಡೆದು, ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಸತತವಾಗಿ ಐದು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ತಂಡಗಳ ಟೂರ್ನಿಯಲ್ಲಿ ಕೊನೇ ಸ್ಥಾನದಲ್ಲಿದೆ. ಸೋಲುಗಳ ಸುಳಿಯಲ್ಲಿ ಸಿಲುಕಿರುವ ಈ ತಂಡಕ್ಕೆ ಹೇಗಾದರೂ ಮಾಡಿ ಗೆಲುವಿನ ಹಳಿಗೆ ಮರಳುವ ಉದ್ದೇಶವಿದೆ. ಅದಕ್ಕಾಗಿ ತಂಡದ ಎಲ್ಲ ವಿಭಾಗಗಳು ಮೈ ಚಳಿ ಬಿಟ್ಟು ಆಡಬೇಕಾಗಿದೆ. ಅತ್ತ ಕೋಲ್ಕೊತಾ ತಂಡವೂ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ. ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಈ ತಂಡವೂ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ನೈಟ್ ರೈಡರ್ಸ್ ಪರ, ವೆಂಕಟೇಶ್ ಅಯ್ಯರ್ ಪ್ರಭಾವಿ ಆಟಗಾರನಾಗಿ ಪ್ರಮುಖ ರನ್ ಗಳಿಸುದ್ದಾರೆ. ಅವರ ಹೊರತಾಗಿ, ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಸ್ಥಿರವಾಗಿದ್ದಾರೆ. ವೆಂಕಟೇಶ್ ಅಯ್ಯರ್ ಅವರು ಶತಕ ಗಳಿಸಿದ ಕೊಲ್ಕೊತಾ ತಂಡದ ಆಟಗಾರರಾಗಿದ್ದಾರೆ. ಅವರು ಮತ್ತೊಮ್ಮೆ ಸಿಡಿದೆದ್ದರೆ ಕೆಕೆಅರ್ ಜಯ ಸುಲಭವಾಗಲಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ನಾಯಕ ಡೇವಿಡ್ ವಾರ್ನರ್, ಮಳೆಯಿಂದಾಗಿ ಪರಿಸ್ಥಿತಿ ನಮಗೆ ಅನುಕೂಲಕರವಾಗಬಹುದು. ಎಷ್ಟು ರನ್ ಕ್ರೊಡೀಕರಣಗೊಳ್ಳುತ್ತದೆ ಎಂಬ ಮಾಹಿತಿ ಇಲ್ಲ. ನಮ್ಮ ತಂಡದಲ್ಲಿ ಎರಡು ಬದಲಾವಣೆಗಳಿವೆ ಎಂದು ಹೇಳಿದರು.
ನಿತೀಶ್ ರಾಣಾ ಮಾತನಾಡಿ, ಮೂರು ವರ್ಷಗಳ ಬಳಿಕ ಡೆಲ್ಲಿಯಲ್ಲಿ ಆಡುತ್ತಿದ್ದೇನೆ. ಹೊಸ ಭಾವ ಮೂಡಿದೆ. ನಮ್ಮ ತಂಡದಲ್ಲಿ ನಾಲ್ಕು ಬದಲಾವಣೆಗಳಿವೆ ಎಂದು ಹೇಳಿದ್ದಾರೆ.
ತಂಡಗಳು ಈ ರೀತಿ ಇವೆ
ಕೋಲ್ಕತ್ತಾ ನೈಟ್ ರೈಡರ್ಸ್: ಜೇಸನ್ ರಾಯ್, ಲಿಟನ್ ದಾಸ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ ಮನ್ದೀಪ್ ಸಿಂಗ್, ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಕುಲ್ವಂತ್ ಖೆಜ್ರೋಲಿಯಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನೋರ್ಜೆ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್.