ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಯ 23ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಗುಜರಾತ್ ಟೈಟನ್ಸ್ ಬಳಗ ಮೊದಲು ಬ್ಯಾಟ್ ಮಾಡಬೇಕಾಗಿದೆ. ಇದು ಕಳೆದ ಬಾರಿಯ ಐಪಿಎಲ್ನ ಚಾಂಪಿಯನ್ ಹಾಗೂ ರನ್ನರ್ಅಪ್ ತಂಡಗಳ ನಡುವಿನ ಹಣಾಹಣಿಯಾಗಿದ್ದ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿದೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ.
ಗುಜರಾತ್ ಟೈಟಾನ್ಸ್ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಲ್ಲದೆ, ಹಾಲಿ ಆವೃತ್ತಿಯಲ್ಲಿ ವಿಶ್ವಾಸದಿಂದಲೇ ಆಡುತ್ತಿದೆ. ಅವರ ಚೇಸಿಂಗ್ ದಾಖಲೆಯು ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾಗುತ್ತಿದೆ. ಹಿಂದಿನ ಪಂದ್ಯವನ್ನು ಒಂದು ಎಸೆತ ಉಳಿದಿರುವಂತೆ ಗೆದ್ದರೂ, ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿತ್ತು. ರಿಂಕು ಸಿಂಗ್ ಪವಾಡ ಮಾಡದೇ ಹೋಗಿದ್ದರೆ ಅಜೇಯ ತಂಡವಾಗಿ ಮುಂದುವರಿಯುತ್ತಿತ್ತು. ಹಾರ್ದಿಕ್ ಮತ್ತು ತಂಡ ಎಂಥ ಪರಿಸ್ಥಿತಿಯನ್ನು ಎದುರಿಸಲೂ ಸಜ್ಜಾಗಿದೆ.
ರಾಜಸ್ಥಾನ್ ರಾಯಲ್ಸ್ ಕೂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ರನ್ ಬಾರಿಸುವ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ. ಮೊದಲು ಬ್ಯಾಟ್ ಮಾಡಿದರೆ ಆರ್ಆರ್ಗೆ ಜಯ ಖಾತ್ರಿ ಎಂಬಂತಿದೆ ಅವರ ಪ್ರದರ್ಶನ. ಬೌಲಿಂಗ್ ವಿಭಾಗದಲ್ಲಿ, ಮೂವರು ಅನುಭವಿ ಬೌಲರ್‌ಗಳಿದ್ದಾರೆ. ಟ್ರೆಂಟ್ ಬೌಲ್ಟ್, ಅಶ್ವಿನ್ ಮತ್ತು ಚಹಾಲ್. ರಾಯಲ್ಸ್ ಅತ್ಯುತ್ತಮ NRR (+1.588) ಹೊಂದಿದೆ.
ತಂಡಗಳು ಇಂತಿವೆ
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ, ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ
ರಾಜಸ್ಥಾನ್ ರಾಯಲ್ಸ್ : ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮಾಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.