Site icon Vistara News

Pakistan Cricket Team : ಪಾಕ್ ಆಟಗಾರನ ಕಳ್ಳಾಟ ಕಂಡು ಮೈದಾನದಲ್ಲೇ ಬೆಂಡೆತ್ತಿದ ಅಂಪೈರ್​

Pakistan Cricket team

ಪರ್ತ್​​: ಪಾಕಿಸ್ತಾನದ ಕ್ರಿಕೆಟಿಗರು (Pakistan Cricket Team) ಮೈದಾನದಲ್ಲಿ ಮಾಡುವ ಅವಾಂತರಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇಂಥ ಘಟನೆಗಳಿಗೆ ಛೀಮಾರಿ ಹಾಕಿಸಿಕೊಂಡ ಬಳಿಕವೂ ಅವರು ಪಾಠ ಕಲಿಯುವುದಿಲ್ಲ. ಮೊಸದಾಟ ಹಾಗೂ ಇನ್ನಿತರ ಅಕ್ರಮಗಳ ವಿಚಾರಕ್ಕೆ ಬಂದಾಗಲೂ ಆ ದೇಶದ ಕ್ರಿಕೆಟ್​ ಕುಖ್ಯಾತಿ ಪಡೆದುಕೊಂಡಿದೆ. ಮೊದಲೇ ಪ್ರಾಮಾಣಿಕತೆ ಮತ್ತು ಪಾಕಿಸ್ತಾನದ ಕ್ರಿಕೆಟ್​ಗೆ ಎಣ್ಣೆ- ಸೀಗೆಕಾಯಿ ಸಂಬಂಧವಾಗಿರುವ ಕಾರಣ ಅಲ್ಲಿನ ಆಟಗಾರರ ಬಗ್ಗೆ ಅಂಪೈರ್​ಗಳು ಹಾಗೂ ರೆಫರಿಗಳಿಗೆ ಒಂದಿಷ್ಟು ಹೆಚ್ಚು ಅನುಮಾನ. ಅಂಥದ್ದೇ ಒಂದು ಅನುಮಾನಾಸ್ಪದ ಪ್ರಸಂಗ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ನಡೆದಿದೆ.

ಪರ್ತನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಆನ್ ಫೀಲ್ಡ್ ಅಂಪೈರ್ ಪಾಕಿಸ್ತಾನದ ಆಟಗಾರ ಅಗಾ ಸಲ್ಮಾನ್ ಅವರ ತೋಳುಗಳು ಮತ್ತು ಮಣಿಕಟ್ಟುಗಳನ್ನು ಪರೀಕ್ಷಿಸಿದ ಘಟನೆ ನಡೆದಿದೆ. ಅವರು ತೋಳಿನಲ್ಲಿ ಏನೂ ಬಚ್ಚಿಟ್ಟುಕೊಂಡಿದ್ದಾರೆ ಹಾಗೂ ಅದನ್ನು ಮೋಸದಾಟಕ್ಕೆ ಬಳಸುತ್ತಿದ್ದಾರೆ ಎಂಬುದೇ ಅಂಪೈರ್​ ಗೆ ಅನುಮಾನವಾಗಿತ್ತು. ಬಳಿಕ ಅದು ರಿಸ್ಟ್​ ಬ್ಯಾಂಡ್​ ಎಂಬುದು ಗೊತ್ತಾಯಿತು.

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗವೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಆಸ್ಟ್ರೇಲಿಯಾವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಿದರೆ, ಶಾನ್ ಮಸೂದ್ ಪಾಕಿಸ್ತಾನವನ್ನು ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ :

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಆನ್ ಫೀಲ್ಡ್ ಅಂಪೈರ್ ಗಳು ಪಾಕಿಸ್ತಾನದ ಆಲ್ ರೌಂಡರ್ ಸಲ್ಮಾನ್ ಅವರ ನಡವಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅವರು ತನ್ನ ತೋಳುಗಳಲ್ಲಿ ಏನನ್ನೋ ಬಚ್ಚಿಟ್ಟಿದ್ದಾರೆ ಎಂಬ ಅನುಮಾನ ಅಂಪೈರ್​ಗಳಿಗೆ ಬಂತು. ಬಳಿಕ ಅವರು ಶಾಲಾ ಮಕ್ಕಳಂತೆ ಸಲ್ಮಾನ್​ ಅವರ ಬಟ್ಟೆಯನ್ನು ಪರಿಶೀಲಿನ ಅನುಮಾನ ಪರಿಹರಿಸಿಕೊಂಡರು.

ಯಾವಾಗ ನಡೆಯಿತು?

ಸ್ಟೀವ್ ಸ್ಮಿತ್ ಔಟಾದಾಗ ಮತ್ತು ಪಾಕಿಸ್ತಾನ ಆಟಗಾರರು ಸಂಭ್ರಮಿಸುತ್ತಿದ್ದರು. ಈ ವೇಳೆ ಅಂಪೈರ್ ಆಘಾ ಸಲ್ಮಾನ್ ಅವರನ್ನು ಕರೆದು ಮಣಿಕಟ್ಟು ತೋರಿಸುವಂತೆ ಕೋರಿಕೊಂಡರು. ತಾನು ಕೇವಲ ರಿಸ್ಟ್ ಬ್ಯಾಂಡ್ ಧರಿಸಿದ್ದೇನೆ ಎಂದು ತೋರಿಸಲು ಅವನು ತನ್ನ ತೋಳುಗಳನ್ನು ತೋರಿಸಿದರು. ಈ ವೇಳೆ ಪಾಕಿಸ್ತಾನದ ನಾಯಕ ಶಾನ್ ಮಸೂದ್ ತಮ್ಮ ತಂಡದ ಆಟಗಾರನಿಗೆ ಬೆಂಬಲ ವ್ಯಕ್ತಪಡಿಸಿದರು. ಅದು ಕೇವಲ ಬ್ಯಾಂಡ್​ ಎಂಬುದಾಗಿ ಅವರು ಹೇಳಿದರು.

ಈ ಘಟನೆಯೂ ವೀಕ್ಷಕ ವಿವರಣೆಗಾರರಾದ ಕೆರ್ರಿ ಒ’ಕೀಫ್ ಮತ್ತು ಮಾರ್ಕ್ ಹೊವಾರ್ಡ್ ಅವರ ಗಮನವನ್ನೂ ಸೆಳೆಯಿತು. ಕೆರ್ರಿ ಒ’ಕೀಫ್, “ಅಲ್ಲಿ ಏನೋ ಚರ್ಚೆ ನಡೆಯುತ್ತಿದೆ. ಅದು ಯಾವುದರ ಬಗ್ಗೆ ಇರಬಹುದು ಎಂದು ಪ್ರಶ್ನಿಸುತ್ತಾರೆ. ಈ ವೇಳೆ ಮಾರ್ಕ್ ಹೊವಾರ್ಡ್: “ರಿಸ್ಟ್ ಬ್ಯಾಂಡ್ ಆಗಿರಬಹುದು. ಅದರ ಬಗ್ಗೆ ಚಿಂತಿಸಬೇಡಿ ಎಂದು ಎಂದು ಹೇಳಿದರು.

ವಾರ್ನರ್ ಶತಕದಿಂದ ಉತ್ತಮ ಸ್ಕೋರ್​

ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 10 ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿತ್ತು. ಡೇವಿಡ್ ವಾರ್ನರ್ ಅವರ 164 ರನ್ ಮತ್ತು ಮಿಚೆಲ್ ಮಾರ್ಷ್ ಅವರ 90 ರನ್​ಗಳ ಜತೆಯಾಟದೊಂದಿಗೆ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಅತ್ಯುತ್ತಮವಾಗಿ ಆಡಿತು.

ಪಾಕಿಸ್ತಾನದ ವೇಗಿ ಅಮೀರ್ ಜಮಾಲ್ 111 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಎರಡನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. ಪಾಕಿಸ್ತಾನ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ 42 ರನ್ ಮತ್ತು ನಾಯಕ ಶಾನ್ ಮಸೂದ್ 30 ರನ್ ಗಳಿಗೆ ವಿಕೆಟ್ ಕಳೆದುಕೊಂಡಿತು. ಸ್ಪಿನ್ನರ್ ನಾಥನ್ ಲಿಯಾನ್ ಶಫೀಕ್ ಅವರನ್ನು ಔಟ್ ಮಾಡಿದರು. ಮಿಚೆಲ್ ಸ್ಟಾರ್ಕ್ ಶಾನ್​ ಮಸೂದ್​ ಅವರನ್ನು ಔಟ್​ ಮಾಡಿದರು.

Exit mobile version