ಅಹಮದಾಬಾದ್: ಹೈವೋಲ್ಟೇಜ್ ಪಂದ್ಯವಾದ ಭಾರತ(IND vs PAK) ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನೋಡಲು ಬರುವ ಅಭಿಮಾನಿಗಳಿಗೆ ನಿರಾಸೆಯಾಗಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಟ್ಕಾ, ಪಾನ್ ಮಸಾಲವನ್ನು ನಿಷೇಧಿಸಲಾಗಿದೆ. ಈ ವಿಚಾರವನ್ನು ಗುಜರಾತ್ ಕ್ರಿಕೆಟ್ ಮಂಡಳಿ ತಿಳಿಸಿದೆ.
“ಅಹಮದಾಬಾದ್ ಪೊಲೀಸರಿಗೆ ಭದ್ರತೆಯ ಜತಗೆ. ಕ್ರೀಡಾಂಗಣದೊಳಗೆ ಬರುವ ಯಾವುದೇ ಅಭಿಮಾನಿಗಳು ಕೂಡ ‘ಗುಟ್ಕಾ’ ತರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ” ಎಂದು ಗುಜರಾತ್ ಕ್ರಿಕೆಟ್ ಮಂಡಳಿ ತಿಳಿಸಿದೆ. “ಪಾನ್ ಮಸಾಲ ಮತ್ತು ಗುಟ್ಕಾ ತಿನ್ನಲು ಬಿಟ್ಟರೆ. ಇದನ್ನು ತಿಂದು ಕೆಲವರು ಸ್ಟೇಡಿಯಂನಲ್ಲೇ ಉಗಿಯುತ್ತಾರೆ ಮತ್ತು ವಾಶ್ ರೂಮ್ಗಳಲ್ಲಿ ಇದರ ಕವರ್ಗಳನ್ನು ಹಾಕಿ ಬಿಡುತ್ತಾರೆ. ಇದು ಪೈಪ್ಗಳಳಲ್ಲಿ ಸಿಲುಕಿ ಇದನ್ನು ಮತ್ತೆ ಸರಿಪಡಿಸಬೇಕು. ಅಲ್ಲದೆ ಎಲ್ಲ ಕಡೆ ಇದರ ಕಲೆಗಳು ಕೂಡ ಇರುತ್ತದೆ. ಸ್ವಚ್ಛತ್ತೆಯ ದೃಷ್ಟಿಯಿಂದ ಸ್ಟೇಡಿಯಂನಲ್ಲಿ ಗುಟ್ಕಾ ನಿಷೇಧ ಮಾಡಲಾಗಿದೆ” ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಗಿಲ್ ಆಡುವುದು ಖಚಿತ
ಡೆಂಗ್ಯೂ ಜ್ವರದಿಂದ ಚೇತರಿಕೆ ಕಂಡಿರುವ ಶುಭಮನ್ ಗಿಲ್ ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ರೋಹಿತ್ ಶರ್ಮಾ ಅವರು ಗಿಲ್ ಶೇ. 99 ರಷ್ಟು ಆಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಮೊದಲೆರಡು ಪಂದ್ಯಗಳಲ್ಲಿ ಗಿಲ್ ಸ್ಥಾನದಲ್ಲಿ ಆಡಿದ್ದ ಇಶಾನ್ ಕಿಶನ್ ಈ ಪಂದ್ಯದಲ್ಲಿ ಬೆಂಚ್ ಕಾಯಬೇಕಾಗಬಹುದು.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯಕ್ಕೆ ಕ್ಷಣಗಣನೆ; ಮಳೆ ಭೀತಿ ಇದೆಯೇ?
ಬಿಗಿ ಬಂದೋಬಸ್ತ್
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ(narendra modi stadium) ಮೇಲೆ ದಾಳಿ ನಡೆಸುವುದಾಗಿ ಈಗಾಗಲೇ ಕೆಲವು ಅನಾಮಿಕ ಕರೆಗಳು ಕೂಡ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬೆದರಿಕೆ ಹಾಕಿದ್ದ ಎನ್ನಲಾಗಿರುವ ವ್ಯಕ್ತಿಯನ್ನು ಅಹಮದಾಬಾದ್ನ ಅಪರಾಧ ಪತ್ತೆ ದಳ ಬಂಧಿಸಿದೆ. ಈತ ತನ್ನ ಮೊಬೈಲ್‌ನಿಂದ ಬೆದರಿಕೆ ಇ-ಮೇಲ್ ಕಳುಹಿಸಿದ್ದ. ಆದರೆ ಈ ವ್ಯಕ್ತಿ ಯಾವುದೇ ಅಪರಾಧ ಹಿನ್ನೆಲೆಯನ್ನು ಹೊಂದಿಲ್ಲ. ಈತ ಮೂಲತಃ ಮಧ್ಯಪ್ರದೇಶದನಾಗಿದ್ದು ಗುಜರಾತ್‌ನ ರಾಜ್‌ಕೋಟ್ ಹೊರವಲಯದಲ್ಲಿ ವಾಸಿಸುತ್ತಿದ್ದ. ಸದ್ಯಕ್ಕೆ ಈತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಪಂದ್ಯಕ್ಕೆ ಸುಮಾರು 7 ಸಾವಿರಕ್ಕೂ ಅಧಿಕ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿ ಎಂದು ತಿಳಿದುಬಂದಿದೆ.
ಮೈದಾನದ 100 ಮೀ. ಆವರಣದಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಪಂದ್ಯ ನಡೆಯುವ ದಿನ ಸ್ಟೇಡಿಯಂ ಹೌಸ್ಫುಲ್ ಆಗುವುದು ಖಚಿತವಾಗಿದೆ. ಒಂದೇ ಕಡೆ ಲಕ್ಷಾಂತರ ಜನರು ಸೇರುವ ಜಾಗದಲ್ಲಿ ಅನಾಹುತವಾದರೆ ಭಾರಿ ಎಡವಟ್ಟು ಸಂಭವಿಸುತ್ತದೆ. ಹೀಗಾಗಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಅಮಿತಾಬ್, ರಜನಿಕಾಂತ್ ಭಾಗಿ
ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಕದನಕ್ಕೆ ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರಾದ ಬಾಲಿವುಡ್ನ ಅಮಿತಾಬ್ ಬಚ್ಚನ್(Amitabh Bachchan) ಮತ್ತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್(Rajnikanath) ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇವರ ಜತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಕೂಡ ಉಪಸ್ಥಿತರಿರಲಿದ್ದಾರೆ.