Site icon Vistara News

ICC World Cup 2023 : ಅತಿ ವೇಗದ ಶತಕ; ಐರ್ಲೆಂಡ್​ ಬ್ಯಾಟರ್​​ನ ದಾಖಲೆ ಮುರಿದ ದ. ಆಫ್ರಿಕಾದ ಆಟಗಾರ

Aiden Markram

ನವ ದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಏಡೆನ್ ಮಾರ್ಕ್ರಮ್ ಅಕ್ಟೋಬರ್ 7 ರಂದು ಶ್ರೀಲಂಕಾ ವಿರುದ್ಧ ಏಕದಿನ ವಿಶ್ವ ಕಪ್​ನಲ್ಲಿ ವೇಗವಾಗಿ ಶತಕ ಬಾರಿಸಿದ ದಾಖಲೆ ಮಾಡಿದ್ದಾರೆ. ಅವರು ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 54 ಎಸೆತಗಳಲ್ಲಿ 106 ರನ್ ಗಳಿಸಿದ್ದರು. ಅದಕ್ಕಿಂತ ಮೊದಲು ಅವರು 49 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ದಾಖಲೆ ಬರೆದರು. ಮಾರ್ಕ್ರಮ್ ಅವರಲ್ಲದೆ, ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವಾನ್ ಡೆರ್ ಡುಸೆನ್ ಕೂಡ ದೆಹಲಿಯಲ್ಲಿ ಶತಕಗಳನ್ನು ಬಾರಿಸಿದರು.

ಮಾರ್ಕ್ರಮ್ ಅವರು 12 ವರ್ಷಗಳ ಹಿಂದೆ ಐರ್ಲೆಂಡ್​ ತಂಡದ ಬ್ಯಾಟರ್​ ಕೆವಿನ್​ ಒಬ್ರಿಯಾನ್​ ಮಾಡಿದ್ದ 50 ಎಸೆತಗಳ ಶತಕದ ದಾಖಲೆಯನ್ನು ಮುರಿದರು. ಕಾಕತಾಳಿಯವೆಂದರೆ 2011 ವಿಶ್ವ ಕಪ್​ ಭಾರತದಲ್ಲಿಯೇ ನಡೆದಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಒಬ್ರಿಯಾನ್​ ದಾಖಲೆ ಮಾಡಿದ್ದರು. ಇದೀಗ ಆ ದಾಖಲೆಯನ್ನು ಭಾರತದ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ನವ ದೆಹಲಿಯಲ್ಲಿ ಮುರಿಯಲಾಗಿದೆ.

ವಿಶ್ವಕಪ್​ನಲ್ಲಿ ಅತಿ ವೇಗದ ಶತಕಗಳ ಸಾಧನೆ

ಡಿ ಕಾಕ್ ವಿಕೆಟ್​​ ಪತನದ ನಂತರ ಮಾರ್ಕ್ರಮ್ ಬ್ಯಾಟಿಂಗ್ ಮಾಡಲು ಬಂದರು. ಬಲಗೈ ಬ್ಯಾಟರ್​ ಕ್ರೀಸ್​ನಲ್ಲಿ ಸ್ಥಿರಗೊಳ್ಳಲು ಸುಮಾರು 10 ಎಸೆತಗಳನ್ನು ತೆಗೆದುಕೊಂಡರು. ಅದರ ನಂತರ, ಅವರು ಡುಸೆನ್ ಅವರೊಂದಿಗೆ ಶ್ರೀಲಂಕಾದ ಬೌಲರ್​​ಗಳ ಮೇಲೆ ಸವಾರಿ ಮಾಡಿದರು. ಹೀಗಾಗಿ ಕೊನೆಯ 10 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ 137 ರನ್ ಗಳಿಸಿತು. ಹೆನ್ರಿ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಜತೆಯಾಟದ ಮೂಲಕ ದಕ್ಷಿಣ ಆಫ್ರಿಕಾವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದರ ಗರಿಷ್ಠ ಮೊತ್ತದ ದಾಖಲೆಯನ್ನು ಮಾಡಿತು. ವಿಶ್ವ ಕಪ್​ನಲ್ಲಿ ಮೂರು ಬಾರಿ 400 ರನ್​ಗಳ ಗಡಿಯನ್ನು ದಾಟಿದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇದನ್ನೂ ಓದಿ : ind vs aus : ವಿಶ್ವ ಕಪ್​ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವುದೇ ಭಾರತ?

ತಮ್ಮ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ಡುಸೆನ್​ ನಮಗೆ ಪರಿಪೂರ್ಣ ದಿನ. (ಚೆಂಡು) ಆರಂಭದಲ್ಲಿ ಸ್ವಲ್ಪ ತಿರುಗಿತು. ಆದರೆ ನಮಗೆ ಉತ್ತಮ ಪಾಲುದಾರಿಕೆ ಸಿಕ್ಕಿತು. ಒಟ್ಟಾರೆಯಾಗಿ, ಉತ್ತಮ ತಂಡದ ಪ್ರಯತ್ನ. (ಐಡೆನ್) ಮಾರ್ಕ್ರಮ್ ಅವರ ಆಟವೇ ವಿಶೇಷ. . ನಾವು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಿದ್ದೇವೆ. ಡೇವಿಡ್ ಮಿಲ್ಲರ್ ಮತ್ತು ಹೆನ್ರಿ ಕ್ಲಾಸೆನ್ ಸೇರಿದಂತೆ ಮಧ್ಯಮ ಕ್ರಮಾಂಕವು ತಮ್ಮ ಸಾಮರ್ಥ್ಯವನ್ನು ತೋರಿಸಿದೆ ಎಂದು ಹೇಳಿದರು.

ಮತ್ತೊಂದೆಡೆ, ಹೊನಲು ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರುತ್ತದೆ. ದಸುನ್ ಶನಕಾ ಮತ್ತು ತಂಡವು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನಿಸುತ್ತದೆ ಮತ್ತು ಕನಿಷ್ಠ ದಕ್ಷಿಣ ಆಫ್ರಿಕಾದ ಒಟ್ಟು ಮೊತ್ತವನ್ನು ಮೀರಲು ಯತ್ನಿಸಬಹುದು.

Exit mobile version