ಬಾರ್ಬಡೋಸ್: ವಿಶ್ವಕಪ್(T20 World Cup 2024) ಇತಿಹಾಸದಲ್ಲೇ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆದು ಇತಿಹಾಸ ಬರೆಯಲು ಮುಂದಾಗಿರುವ ದಕ್ಷಿಣ ಆಫ್ರಿಕಾ(South Africa vs India Final) ತಂಡಕ್ಕೆ ಐಡನ್ ಮಾರ್ಕ್ರಮ್(Aiden Markram) ಲಕ್ಕಿ ಕ್ಯಾಪ್ಟನ್(lucky captain) ಆಗಿದ್ದಾರೆ. ಇದು ಈಗಾಗಲೇ ಸಾಬೀತಾಗಿದೆ. ಅವರ ನಾಯಕತ್ವದ ಸಾಧನೆ ಇಂತಿದೆ.
ಹೌದು, ಐಡನ್ ಮಾರ್ಕ್ರಮ್ ನಾಯಕತ್ವದಲ್ಲಿ 2014ರ ಅಂಡರ್-19 ವಿಶ್ವಕಪ್ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿತ್ತು. ಇದೀಗ ಸೀನಿಯರ್ ಮಟ್ಟದಲ್ಲಿಯೂ ಅವರ ನಾಯಕತ್ವದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. 32 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಗಡಿ ದಾಟಿದ್ದು ಕೂಡ ಇವರ ನಾಯಕತ್ವದಲ್ಲೇ. ಇದೀಗ ಫೈನಲ್ನಲ್ಲಿ ಇವರ ಲಕ್ ಹೇಗಿದೆ, ಚೋಕರ್ಸ್ ಹೋಗಿ ಚಾಂಪಿಯನ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಧೋನಿ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ನಾಯಕತ್ವದ ಮೊದಲ ಪ್ರಯತ್ನದಲ್ಲೇ ಕಪ್ ಗೆದ್ದು ಭಾರತದ ಪಾಲಿಗೆ ಲಕ್ಕಿ ಕ್ಯಾಪ್ಟನ್ ಎನಿಸಿಕೊಂಡಿದ್ದರು. 2013ರಲ್ಲಿ ಇವರ ನಾಯಕತ್ವದಲ್ಲೇ ಚಾಂಪಿಯನ್ಸ್ ಟ್ರೋಫಿ ಕೂಡ ಗೆದ್ದಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಕೂಡ ಇದುವರೆಗೂ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ. ಇದೀಗ ಧೋನಿಯಂತೆ ಮಾರ್ಕ್ರಮ್ ಅವರು ದಕ್ಷಿಣ ಆಫ್ರೀಕಾಗೆ ಐತಿಹಾಸಿಕ ಕಪ್ ಗೆಲ್ಲವು ಕಾತರದಲ್ಲಿದ್ದಾರೆ. ಅಜೇಯವಾಗಿ ಫೈನಲ್ ಪ್ರವೇಶಿಸಿರುವವ ಹರಿಣ ಪಡೆಗೆ ಈ ಬಾರಿಯಾದರೂ ಕಪ್ ಗೆಲ್ಲುವ ಭಾಗ್ಯ ಇದೆಯಾ ಎಂದು ಕಾದು ನೋಡಬೇಕಿದೆ. ಈ ಹಿಂದೆ ಆಡಿದ ಎಲ್ಲ 7(ಏಕದಿನ, ಟಿ20) ಸೆಮಿಫೈನಲ್ ಪಂದ್ಯದಲ್ಲಿಯೂ ಸೋಲು ಕಂಡಿತ್ತು.
ಇದನ್ನೂ ಓದಿ IND vs SA Final: ವಿಶ್ವಕಪ್ ಗೆಲ್ಲಲು ಕೊಹ್ಲಿ, ರೋಹಿತ್, ದ್ರಾವಿಡ್ಗೆ ಇದು ಕೊನೆಯ ಅವಕಾಶ!
ಚೋಕರ್ಸ್
ದಕ್ಷಿಣ ಆಫ್ರಿಕಾ ತಂಡ(South Africa) 1992ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಇನ್ನೇನು ಪಂದ್ಯ ಗೆಲ್ಲುತ್ತದೆ ಎನ್ನುವಷ್ಟರಲ್ಲಿ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. 13 ಎಸೆತಗಳಲ್ಲಿ ಗೆಲುವಿಗೆ 22 ರನ್ ಬೇಕಿತ್ತು. ಮತ್ತೆ ಆಟ ಮುಂದುವರಿದಾಗ ಮೊಟ್ಟ ಮೊದಲ ಬಾರಿಗೆ ಪರಿಚವಾಗಿದ್ದ ಡಕ್ವರ್ತ್ ಲೂಯಿಸ್ ನಿಯದ ಪ್ರಕಾರ ಹರಿಣ ಪಡೆಗೆ 1 ಎಸೆತದಲ್ಲಿ 22 ರನ್ ಗಳಿಸುವ ಗುರಿ ನೀಡಲಾಯಿತು. ಈ ಪಂದ್ಯ ಸೋತ ಬಳಿಕ 1999ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಆಸ್ಟ್ರೇಲಿಯ ವಿರುದ್ದದ ಪಂದ್ಯ ಟೈ ಆಗಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯ ಲೆಕ್ಕಾಚಾರದ ಮೂಲಕ ಫೈನಲ್ ಪ್ರವೇಶಿಸಿ ಕಪ್ ಗೆದ್ದಿತ್ತು. 2007 ರಲ್ಲಿ ಆಸ್ಟ್ರೇಲಿಯ ವಿರುದ್ಧ ಗ್ರಾಸ್ ಐಲೆಟ್ ನಲ್ಲಿ 7 ವಿಕೆಟ್ ಸೋಲು ಅನುಭವಿಸಿ ಆಘಾತಕ್ಕೆ ಗುರಿಯಾಗಿತ್ತು. 2015 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಕ್ಲೆಂಡ್ ನಲ್ಲಿ 4 ವಿಕೆಟ್ ಸೋಲು ಅನುಭವಿಸಿ ಚೋಕರ್ಸ್ ಎಂದು ಮತ್ತೆ ಕರೆಸಿಕೊಳ್ಳುವ ಸ್ಥಿತಿ ಹರಿಣಗಳ ಪಾಲಿಗೆ ಬಂದೊದಗಿತ್ತು.