Site icon Vistara News

IPL 2023: ಏಕ ದಿನ ವಿಶ್ವ ಕಪ್​ ತಂಡದಲ್ಲಿ ಅಜಿಂಕ್ಯ ರಹಾನೆ ಕೂಡ ಇರಲಿ ಎಂದಿದ್ದಾರೆ ಮಾಜಿ ವೇಗಿ

Ajinkya Rahane should also be in the one-day World Cup squad, says former pacer

ಮುಂಬಯಿ : ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್​ ನಿಗದಿಯಾಗಿದೆ. ವಿಶ್ವ ಕಪ್​ ಗೆಲ್ಲದೆ ದಶಕ ಕಳೆದಿರುವ ಕಾರಣ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ಇಲ್ಲಾದರೂ ಒಂದು ಕಪ್​ ಗೆಲ್ಲಲಿ ಎಂಬ ಆಸೆಯಿದೆ. ಹಿರಿಯ ಆಟಗಾರರು ಇದೇ ಮಾತನ್ನು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ಇಲ್ಲಿ ಕಪ್​ ಗೆಲ್ಲಬೇಕು ಎಂದು ಸಲಹೆ ಕೊಡುತ್ತಿದ್ದಾರೆ. ಕಪ್​ ಗೆಲ್ಲಬೇಕಾದರೆ ತಂಡದಲ್ಲಿ ಅವರು ಇರಬೇಕು, ಇವರು ಇರಬೇಕು ಎಂದೆಲ್ಲ ಸಲಹೆ ಕೊಡುತ್ತಿದ್ದಾರೆ. ಅಂತೆಯೇ ಟೀಮ್​ ಇಂಡಿಯಾದ ಮಾಜಿ ವೇಗಿ ಎಸ್​ ಶ್ರೀಶಾಂತ್ ಪ್ರಕಾರ ಭಾರತ ತಂಡಕ್ಕೆ ಕಪ್​ ಗೆಲ್ಲಬೇಕಾದರೆ ಅಜಿಂಕ್ಯ ರಹಾನೆ ಅವರನ್ನೂ ಸೇರಿಸಿಕೊಳ್ಳಬೇಕು.

2011ರ ಏಕದಿನ ವಿಶ್ವಕಪ್‌ ಬಳಿಕ ಭಾರತ ತಂಡ ಇಲ್ಲಿಯವರೆಗೂ ಐಸಿಸಿ ಟ್ರೋಪಿ ಗೆದ್ದಿಲ್ಲ. 2019ರ ಏಕದಿನ ವಿಶ್ವ ಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತಿತ್ತು ರೋಹಿತ್​ ನೇತೃತ್ವದ ಭಾರತ ತಂಡ. 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಲೀಗ್‌ ಹಂತದಿಂದಲೇ ಹೊರ ಬಿದ್ದಿತ್ತು. 2022ರ ಟೂರ್ನಿಯಲ್ಲಿ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಗಿತ್ತು.

2011ರಲ್ಲಿ ಭಾರತದಲ್ಲಿ ನಡೆದಿದ್ದ ಏಕ ದಿನ ವಿಶ್ವ ಕಪ್​ನಲ್ಲಿ ಭಾರತ ತಂಡ ವಿಶ್ವ ಕಪ್ ಗೆದ್ದಿತ್ತು. ಅಲ್ಲಿಂದ ಭಾರತಕ್ಕೆ ಕಪ್ ಸಿಗಲಿಲ್ಲ. ಆದರೆ, ಈ ಬಾರಿಯ ಅಭಿಯಾನಕ್ಕೂ ಗಾಯದ ಸಮಸ್ಯೆಗಳು ಎದುರಾಗಿವೆ. ರಿಷಭ್‌ ಪಂತ್‌, ಜಸ್‌ಪ್ರೀತ್‌ ಬುಮ್ರಾ, ಶ್ರೇಯಸ್‌ ಅಯ್ಯರ್‌ ಗಾಯಕ್ಕೆ ತುತ್ತಾಗಿರುವುದರಿಂದ ಬಲಿಷ್ಠ ತಂಡವನ್ನು ರಚಿಸುವುದು ಸುಲಭವಲ್ಲ. ಹೀಗಾಗಿ ಉತ್ತಮ ಫಾರ್ಮ್​ನಲ್ಲಿರುವ ಅಜಿಂಕ್ಯ ರಹಾನೆಗೆ ಅವಕಾಶ ಕೊಡಬೇಕು ಎಂದಿದ್ದಾರೆ ಶ್ರೀಶಾಂತ್​.

ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಅಜಿಂಕ್ಯ ರಹಾನೆ ಇದ್ದರೆ ಉತ್ತಮ. ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯುತ್ತಿದೆ. ಅವರು ಕೂಡ ಉತ್ತಮ ಫಾರ್ಮ್​ನಲ್ಲಿ ಇದ್ದಾರೆ. ಹೀಗಾಗಿ ರಹಾನೆಯನ್ನು ತಂಡಕ್ಕೆ ಆಯ್ಕೆ ಮಾಡುವ ಖಚಿತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ ಎಂದು ಶ್ರೀಶಾಂತ್​ ಹೇಳಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ತೋರುವ ಗ್ಯಾರಂಟಿಯಿದೆ. ಹೀಗಾಗಿ ಐಪಿಎಲ್ ಮತ್ತು ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಪ್ರದರ್ಶನವನ್ನು ಪರಿಗಣಿಸಿ ಅವರಿಗೆ ಅವಕಾಶ ನೀಡಬೇಕು ಎಂದು ಶ್ರೀಶಾಂತ್​ ಹೇಳಿದ್ದಾರೆ.

2018ರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಗೊಂಡ ನಂತರ ಅಜಿಂಕ್ಯ ರಹಾನೆ ಇಲ್ಲಿಯವರೆಗೂ ಒಂದೇ ಒಂದು ಏಕದಿನ ಪಂದ್ಯ ಆಡಿಲ್ಲ. ಜತೆಗೆ 2016ರ ಬಳಿಕವೂ ಅವರು ಭಾರತದ ಪರ ಟಿ20 ಪಂದ್ಯವನ್ನೂ ಆಡಿಲ್ಲ. ದೇಶಿ ಕ್ರಿಕೆಟ್‌ ಹಾಗೂ 2023ರ ಐಪಿಎಲ್‌ ಟೂರ್ನಿಯಲ್ಲಿನ ಫಾರ್ಮ್‌ ಪರಿಗಣಿಸಿ ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್‌ ಚಾಂಪಿಯನ್‌ಷಿಪ್‌ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ.

ಹಾಲಿ ನಡೆಯುತ್ತಿರುವ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿರುವ ರಹಾನೆ 7 ಪಂದ್ಯಗಳಲ್ಲಿ 189ರ ಸ್ಟ್ರೈಕ್‌ ರೆಟ್‌ನಲ್ಲಿ 224 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಸಿಎಸ್‌ಕೆ ತಂಡದ ಪ್ರಮುಖ ಬ್ಯಾಟರ್​ ಎನಿಸಿಕೊಂಡಿದ್ದಾರೆ.

Exit mobile version