Site icon Vistara News

IPL 2024 : ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​​ರೌಂಡರ್​ಗಳು ಇವರು

IPL Auction 1

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೆಚ್ಚು ಯಶಸ್ಸು ಪಡೆಯುವುದು ಆಲ್​ರೌಂಡರ್​ಗಳು. ಹೀಗಾಗಿ ಅವರಿಗೆ ಹರಾಜಿನಲ್ಲಿ ಹಚ್ಚು ಬೇಡಿಕೆ ಇರುತ್ತದೆ. ಚಾಂಪಿಯನ್ ತಂಡಗಳಂತೂ ಆಲ್​ರೌಂಡರ್​ಗಳ ದೊಡ್ಡ ಬಣವನ್ನೇ ಹೊಂದಿತ್ತು. ಗುಜರಾತ್ ಟೈಟಾನ್ಸ್ ತಂಡವನ್ನು ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನಲ್ಲಿ ರವೀಂದ್ರ ಜಡೇಜಾ ಅವರ ಪಾತ್ರ ದೊಡ್ಡದಾಗಿದೆ. ಹೀಗಾಗಿ ಐಪಿಎಲ್ 2024 ಹರಾಜಿಗೆ ಕೇವಲ ಎರಡು ವಾರಗಳು ಬಾಕಿ ಇರುವಾಗ, ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​ರೌಂಡರ್​ಗಳ ಕುರಿತು ನೋಡೋಣ.

ಪ್ರಮುಖ ಆಲ್​ರೌಂಡರ್​ಗಳ ವಿವರ ಇಂತಿದೆ

ಬೌಲಿಂಗ್ ಆಲ್ ರೌಂಡರ್ ಗಳು

ಶಾರ್ದೂಲ್ ಠಾಕೂರ್, ಪ್ಯಾಟ್ ಕಮಿನ್ಸ್, ಡೇವಿಡ್ ವಿಲ್ಲಿ, ಕೈಲ್ ಜೇಮಿಸನ್, ವನಿಂದು ಹಸರಂಗ ಮತ್ತು ಒಡಿಯನ್ ಸ್ಮಿತ್ ಈ ವರ್ಗಕ್ಕೆ ಸೇರುತ್ತಾರೆ. ಸಾಮಾನ್ಯವಾಗಿ ಈ ಕ್ರಿಕೆಟಿಗರು ತಮ್ಮ ಬೌಲಿಂಗ್ ಸಾಮರ್ಥ್ಯದ ಮೂಲಕ ಯಾವುದೇ ಇಲೆವೆನ್​ಗೆ ಸೇರುವ ಅವಕಾಶನವನ್ನು ಹೊಂದಿರುತ್ತಾರೆ.

ಪ್ಯಾಟ್ ಕಮಿನ್ಸ್ ಬೌಲಿಂಗ್ ಆಲ್ರೌಂಡರ್​​ಗೆ ಉತ್ತಮ ಉದಾಹರಣೆ. ಟೂರ್ನಿಯ 6 ಆವೃತ್ತಿಗಳಲ್ಲಿ ಆಡಿರುವ ಅವರು 42 ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ. ಐಪಿಎಲ್​​ನಲ್ಲಿ ಅವರ ಬ್ಯಾಟಿಂಗ್ ಅಷ್ಟೊಂದು ಬಲವಾಗಿ ಇರದ ಹೊರತಾಗಿಯೂ ಒಮ್ಮೊಮ್ಮೆ ಅಚ್ಚರಿ ಮೂಡಿಸಿದ್ದೂ ಇದೆ. ವೇಗದ ಬೌಲಿಂಗ್ ಆಲ್ರೌಂಡರ್ 152.21 ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದಾರೆ. ಐಪಿಎಲ್​​ನಲ್ಲಿ 3 ನೇ ಅತಿವೇಗ ವೇಗದ ಅರ್ಧ ಶತಕ ಬಾರಿಸಿದ್ದಾರೆ.

ಬ್ಯಾಟಿಂಗ್ ಆಲ್ರೌಂಡರ್​ಗಳು

ಮೈಕೆಲ್ ಬ್ರೇಸ್ವೆಲ್, ಶಾರುಖ್ ಖಾನ್, ಅಜ್ಮತುಲ್ಲಾ ಒಮರ್ಜೈ ಮತ್ತು ಶಕೀಬ್ ಅಲ್ ಹಸನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ಆಲ್ರೌಂಡರ್​ಗಳಿಗಿಂತ ಭಿನ್ನವಾಗಿ ಈ ಆಟಗಾರರು ಯಾವಾಗಲೂ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಾಗಿರುವುದಿಲ್ಲ. ಅಜ್ಮತುಲ್ಲಾ ಮತ್ತು ಶಕೀಬ್ ತಮ್ಮ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳ ಆಧಾರದ ಮೇಲೆ ತಂಡವನ್ನು ರಚಿಸಬಹುದಾದರೂ ಬ್ರೇಸ್ವೆಲ್ ಮತ್ತು ಶಾರುಖ್ ಕೆಳ ಕ್ರಮಾಂಕದ ಬ್ಯಾಟರ್​ಗಳಾಗಿ ಮಾತ್ರ ಕರ್ತವ್ಯ ನಿರ್ವಹಿಸಬಲ್ಲರು.

ಇದನ್ನೂ ಓದಿ : Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

ಅಜ್ಮತುಲ್ಲಾ ಒಮರ್ಜೈ ಅಗ್ರ ಕ್ರಮಾಂಕಕ್ಕೆ ಸಂಪೂರ್ಣವಾಗಿ ಸರಿಹೊಂದುತ್ತಾರೆ. 2023 ರ ಏಕ ದಿನ ವಿಶ್ವ ಕಪ್​ನಲ್ಲಿ ಅವರು 9 ಪಂದ್ಯಗಳಲ್ಲಿ 350 ಕ್ಕೂ ಹೆಚ್ಚು ರನ್ ಮತ್ತು 7 ವಿಕೆಟ್​​ಗಳನ್ನು ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ನೂರ್ ಅಹ್ಮದ್ ಮತ್ತು ಫಜಲ್ಹಕ್ ಫಾರೂಕಿ ಅವರಿಗಿಂತ ನಂತರದಲ್ಲಿ 23 ವರ್ಷದ ವೇಗಿ ಪಂದ್ಯಾವಳಿಯಲ್ಲಿ ತಮ್ಮ ದೇಶದ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಮತ್ತು ಐದನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ. ಟಿ 20 ಯಲ್ಲಿ ಅವರ ದಾಖಲೆಯೂ ತುಂಬಾ ಕಳಪೆಯಾಗಿಲ್ಲ. ಆಡಿದ 62 ಪಂದ್ಯಗಳಲ್ಲಿ, ಅವರು ಬ್ಯಾಟ್​ನಿಂದ 129.51 ಸರಾಸರಿಯಲ್ಲಿ ರನ್​ ಮಾಡಿದ್ದಾರೆ. 59 ವಿಕೆಟ್​​ಗಳನ್ನು ಪಡೆದಿದ್ದಾರೆ.

Exit mobile version