Site icon Vistara News

Ambati Rayudu : ರಾಜಕೀಯದಿಂದ ಮತ್ತೆ ಕ್ರಿಕೆಟ್​ಗೆ ಬಂದ ಅಂಬಾಟಿ; ಈ ಬಾರಿ ಮುಂಬಯಿ ತಂಡ

Ambati Rayudu

ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಅದು ಇಂಡಿಯನ್ ಪ್ರೀಮಿಯರ್ ಲೀಗ್​​ (ಐಪಿಎಲ್​) ಅಲ್ಲ. ಯುಎಇಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಲೀಗ್ ಟಿ 20 ಟೂರ್ನಿಯಲ್ಲಿ. ಜನವರಿ 19ರಿಂದ ಯುಎಇಯಲ್ಲಿ ಆರಂಭವಾಗಲಿರುವ ಆ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ಎಮಿರೇಟ್ಸ್ ಫ್ರಾಂಚೈಸಿಯನ್ನು ಅಂಬಾಟಿ ರಾಯುಡು ಪ್ರತಿನಿಧಿಸಲಿದ್ದಾರೆ.

ವಿಶೇಷವೆಂದರೆ, ರಾಯುಡು ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ತಂಡ ಟ್ರೋಫಿ ಗೆದ್ದ ನಂತರ ಐಪಿಎಲ್​ನಿಂದ ನಿವೃತ್ತರಾಗಿದ್ದರು. ಅವರು 2010ರಿಂದ 2017ರವರೆಗೆ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.

ರಾಜಕೀಯಕ್ಕೆ ಬ್ರೇಕ್​ ಕೊಟ್ಟಿದ್ದರು

ಐಎಲ್​ಟಿ 20ಗೆ ಲಭ್ಯರಾಗುವ ಸಲುವಾಗಿ ರಾಯುಡು ಅವರು ರಾಜಕೀಯ ಕ್ಷೇತ್ರದಿಂದ ವಾಪಸ್​ ಬಂದಿದ್ದರು. ಕೆಲವು ದಿನಗಳ ಹಿಂದೆ ಸೇರಿದ್ದ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಉಪ ಮುಖ್ಯಮಂತ್ರಿ ಕೆ. ನಾರಾಯಣ ಸ್ವಾಮಿ ಮತ್ತು ರಾಜಂಪೇಟ ಲೋಕಸಭಾ ಸದಸ್ಯ ಪಿ.ಮಿಥುನ್ ರೆಡ್ಡಿ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರಿದ್ದರು. ಆದರೆ, ಕೆಲವೇ ದಿನಗಳಲ್ಲಿ ವಾಪಸ್ ಬಂದು ಅಚ್ಚರಿ ಮೂಡಿಸಿದ್ದರು.

ನಾನು ವೈಎಸ್ಆರ್​ಪಿ ಪಕ್ಷ ತೊರೆಯಲು ಮತ್ತು ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ ಎಂದು ಎಲ್ಲರಿಗೂ ತಿಳಿಸುತ್ತಿದ್ದೇನೆ. ಮುಂದಿನ ಕ್ರಮವನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು, “ಎಂದು ಮಾಜಿ ಕ್ರಿಕೆಟಿಗ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ದಿನಗಳ ಹಿಂದೆ ಬರೆದುಕೊಂಡಿದ್ದರು.

ರಾಯುಡು ತಮ್ಮ ರಾಜಕೀಯ ನಿವೃತ್ತಿಗೆ ಈಗ ಕಾರಣ ಕೊಟ್ಟಿದ್ದಾರೆ. ಅವರು ಎಂಐ ಎಮಿರೇಟ್ಸ್ ಪರ ಆಡಲಿರುವ ಕಾರಣ ರಾಜಕೀಯದಿಂದ ಮುಕ್ತಿ ಪಡೆಯಬೇಕಾಗುತ್ತು. ಹೀಗಾಗಿ ಸ್ವಲ್ಪ ಸಮಯದವರೆಗೆ ರಾಜಕೀಯವನ್ನು ತೊರೆದಿದ್ದಾರೆ.

ಜನವರಿ 20ರಿಂದ ದುಬೈನಲ್ಲಿ ಆರಂಭವಾಗಲಿರುವ ಐಎಲ್​ಟಿ20 ಟೂರ್ನಿಯಲ್ಲಿ ಅಂಬಾಟಿ ರಾಯುಡು ಆಗಿರುವ ನಾನು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದೇನೆ. ವೃತ್ತಿಪರ ಕ್ರೀಡೆಯನ್ನು ಆಡುವಾಗ ನಾನು ರಾಜಕೀಯವಾಗಿ ಸಂಬಂಧದಿಂದ ದೂರವಿರುವ ಅಗತ್ಯವಿದೆ ಎಂದು ಅವರು ಟ್ವೀಟ್​ ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ಪರ 55 ಪಂದ್ಯಗಳು

ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ, ಅವರು ಭಾರತಕ್ಕಾಗಿ 55 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 47.05 ಸರಾಸರಿಯಲ್ಲಿ ಒಟ್ಟು 1694 ರನ್ ಗಳಿಸಿದ್ದಾರೆ. ಅವರು ಭಾರತಕ್ಕಾಗಿ ಏಕದಿನ ಕ್ರಿಕೆಟ್​ನಲ್ಲಿ ಮೂರು ಶತಕಗಳು ಮತ್ತು 10 ಅರ್ಧಶತಕಗಳನ್ನು ಗಳಿಸಿದ್ದಾರೆ. ಆರು ಟಿ 20 ಪಂದ್ಯಗಳನ್ನು ಆಡಿದ್ದು 42 ರನ್ ಗಳಿಸಿದ್ದಾರೆ.

ಐಪಿಎಲ್​​ನಲ್ಇಲ ರಾಯುಡು 204 ಪಂದ್ಯಗಳನ್ನು ಆಡಿದ್ದು, ಒಂದು ಶತಕ ಮತ್ತು 22 ಅರ್ಧಶತಕಗಳೊಂದಿಗೆ 4348 ರನ್ ಗಳಿಸಿದ್ದಾರೆ. 2013, 2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಪರ ಹಾಗೂ 2018, 2021 ಹಾಗೂ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಪ್ರಶಸ್ತಿ ಗೆದ್ದಿದ್ದಾರೆ.

Exit mobile version