1. ಕಾಡುತ್ತಿದೆ ಹಸಿರು ಬರ; ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿ ತೀವ್ರವಾಗಿ ಬರ (Karnataka Drought) ಪರಿಸ್ಥಿತಿಯು ಕಾಡುತ್ತಿದೆ. ರೈತರು ಬೆಳೆದ ಬೆಳೆಗಳು (Crop damage) ನೆಲಕಚ್ಚಿವೆ. ಅಲ್ಲದೆ, ನೀರಿಗಾಗಿ ಹಾಹಾಕಾರ ಎದುರಾಗಿದೆ. ರಾಜ್ಯಾದ್ಯಂತ ನಡೆದ ಬಿತ್ತನೆ, ಬೆಳೆ ನಾಶದ ಪ್ರಮಾಣ ಸೇರಿದಂತೆ ಇನ್ನಿತರ ವಿಷಯಗಳನ್ನು ಕೇಂದ್ರ ಬರ ಅಧ್ಯಯನ ತಂಡಕ್ಕೆ (Central Drought Study Team) ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಅಂಕಿ-ಅಂಶಗಳ ವಿವರಣೆ ಸಹಿತ ಮಾಹಿತಿ ನೀಡಿದ್ದಾರೆ. ಅಲ್ಲದೆ, ರಾಜ್ಯದ ರೈತರ ರಕ್ಷಣೆಗೆ ಪೂರಕವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Karnataka Drought : ಕರ್ನಾಟಕದಲ್ಲಿ ಈ ವರ್ಷ ಎದುರಾಗಲಿದೆ ಆಹಾರ ಕೊರತೆ!
2. ಉಗ್ರರನ್ನು, ಅವರನ್ನು ಪೋಷಿಸುವ ವ್ಯವಸ್ಥೆಯನ್ನು ಮಟ್ಟ ಹಾಕಿ! ತನಿಖಾ ಸಂಸ್ಥೆಗಳಿಗೆ ಶಾ ಸೂಚನೆ
ನವ ದೆಹಲಿ: ಹೊಸ ಉಗ್ರರ ಗುಂಪುಗಳು ರೂಪುಗೊಳ್ಳದಂತೆ ಎಲ್ಲಾ ಭಯೋತ್ಪಾದನಾ ವಿರೋಧಿ ಸಂಸ್ಥೆಗಳು ಕಠಿಣ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಗುರುವಾರ ಕರೆ ನೀಡಿದ್ದಾರೆ. ಭಯೋತ್ಪಾದನಾ ನಿಗ್ರಹ ಸಭೆಯಲ್ಲಿ (anti-terror meet) ಗುಡುಗಿದ ಅವರು, ನಾವು ಭಯೋತ್ಪಾದನೆಯನ್ನು ಅದರ ಬುಡಸಮೇತ ನಾಶ ಪಡಿಸಬೇಕಾಗಿದೆ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
3. ನಾವೇನು ಟೆರರಿಸ್ಟಾ? ಬಿಜೆಪಿ ಸತ್ಯಶೋಧನ ತಂಡದ ಮುಂದೆ ಗಾಯಾಳು ಅಳಲು!
ಶಿವಮೊಗ್ಗ: ನಾವೇನು ಟೆರರಿಸ್ಟಾ? ನೀವೇ ಹೇಳಿ ಸರ್? ಹೆಣ್ಣು ಮಕ್ಕಳನ್ನು ಕಾಪಾಡಿದ್ದೇ ತಪ್ಪಾ? ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಅಂತ ಕೇಸ್ ಹಾಕಿದ್ದಾರೆ. ಕಲ್ಲು ಹೊಡೆದವರನ್ನು ಬಿಟ್ಟು ನಮ್ಮ ಮೇಲೆ ಕೇಸ್ ಮಾಡಿದ್ದಾರೆ ಎಂದು ಬಿಜೆಪಿ ಸತ್ಯಶೋಧನಾ ತಂಡದ (BJP fact finding team) ಮುಂದೆ ರಾಗಿಗುಡ್ಡದಲ್ಲಿ ನಡೆದ ಗಲಭೆಯಲ್ಲಿ (Shivamogga Violence) ಗಾಯಾಳುವಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ (McGann Hospital) ಚಿಕಿತ್ಸೆ ಪಡೆಯುತ್ತಿರುವ ಪ್ರದೀಪ್ ಅಳಲು ತೋಡಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
4. ಹ್ಯಾಟ್ರಿಕ್ ಚಿನ್ನ ಗೆದ್ದ ಭಾರತ; ಪದಕ ಸಂಖ್ಯೆ 84ಕ್ಕೆ ಏರಿಕೆ
ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ(Asian Games 2023) ಗುರುವಾರ, ಭಾರತ ಮುಟ್ಟಿದೆಲ್ಲ ಚಿನ್ನ ಎಂಬಂತೆ ಮೂರು ಚಿನ್ನದ ಪದಕ ಗೆದ್ದುಕೊಂಡಿದೆ. ಇದರಲ್ಲಿ ಎರಡು ಚಿನ್ನ ಆರ್ಚರಿಯಲ್ಲಿ ದಾಖಲಾದರೆ, ಮತ್ತೊಂದು ಚಿನ್ನ ಸ್ಕ್ವಾಷ್ನಲ್ಲಿ ದೊರಕಿತು. ಮಧ್ಯಾಹ್ನ ನಡೆದ ಪುರಷರ ಆರ್ಚರಿ ತಂಡದ ಫೈನಲ್ನಲ್ಲಿ ಭಾರತದ ಓಜಸ್ ಡಿಯೋಟಾಲೆ, ಅಭಿಷೇಕ್ ವರ್ಮಾ ಮತ್ತು ಪ್ರಥಮೇಶ್ ಜಾವ್ಕರ್ ಅವರು ಕೊರಿಯಾವನ್ನು 230-235 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದರು. ಈ ಮೂಲಕ ಭಾರತದ ಚಿನ್ನದ ಪದಕ ಸಂಖ್ಯೆ 21ಕ್ಕೆ ಏರಿದೆ. ಮಹಿಳಾ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಚೀನಾ ವಿರುದ್ಧ 4-0 ಗೋಲ್ಗಳಿಂದ ಸೋತು ನಿರಾಸೆ ಮೂಡಿಸಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
5. ಮೊದಲ ಪಂದ್ಯದಲ್ಲಿಯೇ ಅಬ್ಬರಿಸಿದ ನ್ಯೂಜಿಲ್ಯಾಂಡ್; ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ
ಅಹಮದಾಬಾದ್: ಡವೋನ್ ಕಾನ್ವೆ (ಅಜೇಯ 152 ರನ್) ಹಾಗೂ ಯುವ ಆಲ್ರೌಂಡರ್ ರಚಿನ್ ರವೀಂದ್ರ (ಅಜೇಯ 123) ಜೋಡಿಯ ದಾಖಲೆಯ 273 ರನ್ಗಳ ಜತೆಯಾಟದಿಂದ ಮಿಂಚಿದ ನ್ಯೂಜಿಲ್ಯಾಂಡ್ ತಂಡ ವಿಶ್ವ ಕಪ್ 2023ರ ಮೊದಲ (ICC World Cup 2023) ಪಂದ್ಯದಲ್ಲಿ ಕಳೆದ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್ಗಳ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಕಳೆದ ಆವೃತ್ತಿಯ ಫೈನಲ್ ಪಂದ್ಯದ ವಿವಾದಾತ್ಮಕ ಸೋಲಿಗೆ ಪ್ರತ್ಯುತ್ತ ಕೊಟ್ಟಿದೆ. ಈ ಪಂದ್ಯದೊಂದಿಗೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್ಗೆ ಭರ್ಜರಿ ಆರಂಭ ದೊರಕಿದೆ. ಜತೆಗೆ ದೊಡ್ಡ ಮೊತ್ತದ ಸ್ಕೋರ್ಗಳ ಪಂದ್ಯಗಳು ನಡೆಯುವ ಎಲ್ಲ ಸೂಚನೆಗಳು ಲಭಿಸಿವೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ವಿಶ್ವ ಕಪ್ ಕುರಿತ ಎಲ್ಲ ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
6.‘ಸಪ್ತಪದಿ’ ತುಳಿಯದ ಮದ್ವೆ ಮದುವೆಯೇ ಅಲ್ಲ! ಅಲಹಾಬಾದ್ ಹೈಕೋರ್ಟ್
ನವದೆಹಲಿ: ಸಪ್ತಪದಿ (Saptapadi Rituals) ಸೇರಿದಂತೆ ಇತರ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸದ ಹಿಂದೂ ವಿವಾಹವು (Hindu Marriage) ಊರ್ಜಿತವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court)ಹೇಳಿದೆ. ತನ್ನಿಂದ ದೂರವಾಗಿರುವ ಹೆಂಡತಿ, ನನಗೆ ವಿಚ್ಛೇದನ ನೀಡದೆಯೇ ಎರಡನೇ ಮದುವೆ ಮಾಡಿಕೊಂಡಿದ್ದಾಳೆ ಎಂದು ವ್ಯಕ್ತಿಯೊಬ್ಬ ಆರೋಪಿಸಿರುವ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಹಿಂದೂ ಧಾರ್ಮಿಕ ಪ್ರಕ್ರಿಯೆಗಳನ್ನು ಪೂರೈಸದ ಮದುವೆ ಅಪೂರ್ಣ ಎನಿಸಲಿದೆ ಎಂದು ಹೇಳಿದೆ(quashed the proceedings of a case). ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
7.ಎಫ್‌ಡಿಗಳಿಂದ ಹೆಚ್ಚಿನ ಆದಾಯ ಬೇಕೇ? ಲ್ಯಾಡರಿಂಗ್ ತಂತ್ರದಂತೆ ಹೂಡಿಕೆ ಮಾಡಿ ನೋಡಿ!
ಉಳಿತಾಯ ಯೋಜನೆ ಮತ್ತು ಸಾಂಪ್ರದಾಯಿಕ ಹೂಡಿಕೆದಾರರಲ್ಲಿ ಬ್ಯಾಂಕ್ ಸ್ಥಿರ ಠೇವಣಿಗಳು (Fixed Deposits) ಅತ್ಯಂತ ಜನಪ್ರಿಯ ಹಣಕಾಸು ಯೋಜನೆಗಳಾಗಿವೆ. ವರ್ಷಗಳ ಬಳಿಕ ನಿಶ್ಚಿತ ಲಾಭದ ಖಾತ್ರಿಯನ್ನು ಒದಗಿಸುವ ಈ ಪ್ಲ್ಯಾನ್‌ಗಳ ನಿತ್ಯ ಹರಿದ್ವರ್ಣ ಎನಿಸಿಕೊಂಡಿವೆ. ಅಲ್ಲದೇ ಹೆಚ್ಚು ಸುರಕ್ಷಿತವಾಗಿರುವ ಈ ಬ್ಯಾಂಕ್ ಎಫ್‌ಡಿಗಳನ್ನು (Bank Fixed Deposits) ಯಾವಾಗ ಬೇಕಿದ್ದರೂ ನಗದಾಗಿ ಪರಿವರ್ತಿಸಬಹುದು. ಹೀಗಿದ್ದೂ, ಅವಧಿ ಪೂರ್ವ ನಗದು ಮಾಡಿದ್ರೆ ಒಂದಿಷ್ಟು ದಂಡವನ್ನು ಬ್ಯಾಂಕುಗಳ ಪಾವತಿಸಿಕೊಳ್ಳುತ್ತವೆ. ಆದರೆ, ಬಳಕೆದಾರರಿಗೆ ಬ್ಯಾಂಕ್ ಎಫ್‌ಡಿ ಲ್ಯಾಡರಿಂಗ್ (Bank FD Laddering) ತಂತ್ರ ಗೊತ್ತಿದ್ದರೆ, ಅವಧಿ ಪೂರ್ವ ಠೇವಣಿ ಹಿಂತೆಗೆತದ ವೇಳೆಯೂ ನಷ್ಟವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಆ ಕುರಿತು ನಿಮಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ ಓದಿ(Money Guide). ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
8. ನಾರ್ವೆ ನಾಟಕಕಾರ ಜಾನ್ ಫೋಸ್ಸೆಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ, ಸಲ್ಮಾನ್ ರಶ್ದಿಗೆ ಮಿಸ್!
ಸ್ಟಾಕ್ ಹೋಮ್: ನಾರ್ವೆ ಕಾಂದಬರಿಕಾರ ಹಾಗೂ ನಾಟಕಕಾರ ಜಾನ್ ಫೋಸ್ಸೆ (Norwegian author and Author Jon Fosse) ಅವರಿಗೆ 20203ರ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು (Nobel Prize in Literature) ಸ್ವಿಡಿಷ್ ಅಕಾಡೆಮಿ (Swedish Academy) ಗುರುವಾರ ಘೋಷಣೆ ಮಾಡಿದೆ. ಹೊಸ ನಮೂನೆಯ ನಾಟಕಗಳು ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾದ ಗದ್ಯಕ್ಕಾಗಿ ಜಾನ್ ಫೋಸ್ಸೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅಕಾಡೆಮಿ ಹೇಳಿದೆ. ನೊಬೆಲ್ ಪ್ರಶಸ್ತಿ ಅಕಾಡೆಮಿಯು ಹಲವಾರು ನಾಟಕಗಳು, ಕಾದಂಬರಿಗಳು, ಕವನ ಸಂಕಲನಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಮತ್ತು ಅನುವಾದಗಳನ್ನು ಒಳಗೊಂಡಂತೆ ನಾರ್ವೇಜಿಯನ್ ನೈನೋರ್ಸ್ಕ್‌ನಲ್ಲಿ ಬರೆದ ಫೊಸ್ಸೆ ಅವರ ಕೃತಿಯನ್ನು ಗೌರವಿಸಿದೆ(Nobel Prize 2023 .ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
9. ಈ ಬಾರಿ ಮಾಜಿ ಸ್ಪರ್ಧಿಗಳಿಗೆ ಚಾನ್ಸ್ ಇದೆಯಾ? ಯಾರೆಲ್ಲ ಮತ್ತೆ ದೊಡ್ಮನೆಗೆ ಬರಬೋದು?
ಬೆಂಗಳೂರು: ಬಿಗ್ ಬಾಸ್ ಹತ್ತನೇ (Bigg Boss Kannada 10) ಸೀಸನ್ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 8ರ ಸಂಜೆ 6ಕ್ಕೆ ನಡೆಯಲಿದೆ. ಅ.9ರಿಂದ ಪ್ರತಿ ರಾತ್ರಿ 9:30ಕ್ಕೆ ನಡೆಯಲಿದೆ. ಇದೀಗ ಸ್ಪರ್ಧಿಗಳು ಯಾರೆಲ್ಲ ಬರಬಹುದು ಎಂಬ ಚರ್ಚೆಗಳು ಶುರುವಾಗಿದೆ. ಈಗಾಗಲೇ ಚಾರ್ಲಿ ಮನೆಗೆ ಎಂಟ್ರಿ ಕೊಡುತ್ತಿರುವುದಂತೂ ಪಕ್ಕಾ ಆಗಿದೆ. ಇದರ ಜತೆಗೆ ದೊಡ್ಮನೆಗೆ ಹಳೇಯ ಸ್ಪರ್ಧಿಗಳು ಮತ್ತೆ ಸ್ಪರ್ಧಿಸಲಿದ್ದಾರಂತೆ ಎಂಬ ಮಾತುಗಳು ಜೋರಾಗಿದೆ. ಆ ಮೂಲಕ ಈ ಹಿಂದೆ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದವರಿಗೆ ಸೆಕೆಂಡ್ ಚಾನ್ಸ್ ಸಿಗುತ್ತಿದೆ ಎಂದು ವರದಿಯಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
10. ಪೆನ್ನು ಹಿಡಿಯೋ ಕೈಯಲ್ಲಿ ಸಿಗರೇಟ್! ಹುಡುಗಿಯರೂ ಸ್ಟ್ರಾಂಗ್ ಗುರು
ಬೆಂಗಳೂರು: ಹಿಂದೊಮ್ಮೆ ಬೆಂಗಳೂರಲ್ಲಿ (Bengaluru News) 7 ವರ್ಷದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಪತ್ತೆಯಾಗಿತ್ತು. ಪೋಷಕರಿಗೆ ತಿಳಿಯದೇ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಸಿಗರೇಟ್ ಸೇವಿಸುತ್ತಿದ್ದರು. ಇದೀಗ ರಾಜಾರೋಷವಾಗಿ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲೇ ಸಿಗರೇಟ್ ಸೇದುತ್ತಿರುವುದು ಕಂಡು ಬಂದಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: