Site icon Vistara News

ISPL : ಮುಂಬೈ ತಂಡವನ್ನು ಖರೀದಿಸಿದ ಅಮಿತಾಭ್​ ಬಚ್ಚನ್​

Amithbha Bacchan

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಮುಂಬೈ ತಂಡದ ಮಾಲೀಕರಾಗಿ ಅಧಿಕೃತವಾಗಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL ) ಗೆ ಸೇರ್ಪಡೆಗೊಂಡಿದ್ದಾರೆ. ಹೊಸ ದಿನ ಮತ್ತು ಹೊಸ ಉದ್ಯಮ, ತಂಡದ ಮಾಲೀಕನಾಗಿ ಮುಂಬೈನೊಂದಿಗೆ ಇರುವುದು ನನಗೆ ಗೌರವ ಮತ್ತು ಅಭಿಮಾನ ಎಂದು 81 ವರ್ಷದ ನಟ ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಟೆನಿಸ್ ಬಾಲ್ ಕ್ರಿಕೆಟ್​ ಲೀಗ್ ಆಗಿದ್ದು, ಮೊಟ್ಟ ಮೊದಲ ಬಾರಿಗೆ ಲೀಗ್​ ರೂಪದಲ್ಲಿ ನಡೆಯಲಿದೆ. ಸ್ಟಾರ್ ನಟರ ಮಾಲೀಕತ್ವ ಸೇರಿದಂತೆ ವಿಭಿನ್ನ ಗುರಿಯೊಂದಿಗೆ ಈ ಟೂರ್ನಿ ನಡೆಯಲಿದೆ.

ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್, ಭಾರತದ ಮಾಜಿ ಕ್ರಿಕೆಟ್ ಕೋಚ್ ರವಿ ಶಾಸ್ತ್ರಿ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಮಲ್ ಕಾಳೆ ಅವರ ಪರಿಕಲ್ಪನೆಯ ಐಎಸ್​​ಪಿಎಲ್ ಭಾರತದಲ್ಲಿ ನಡೆಯಲಿರುವ ವಿಶೇಷ ಟೆನಿಸ್ ಬಾಲ್ ಟಿ-ಟೆನ್ ಕ್ರಿಕೆಟ್ ಸ್ವರೂಪವಾಗಿದೆ.. ಈ ಆವಿಷ್ಕಾರವು ದೇಶದಲ್ಲಿ ಮೊದಲ ಟಿ10 ಮಾದರಿಯ ಕ್ರಿಕೆಟ್​ ಲೀಗ್ ಎನಿಸಿಕೊಂಡಿದೆ.

ಟೂರ್ನಿಯಲ್ಲಿ ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತಾ ಮತ್ತು ಶ್ರೀನಗರ ನಗರಗಳನ್ನು ಪ್ರತಿನಿಧಿಸುವ ಆರು ತಂಡಗಳು ಭಾಗವಹಿಸಲಿವೆ. ಏಳು ದಿನಗಳ ಕಾಲ ನಡೆಯಲಿರುವ ಐಎಸ್​ಪಿಎಲ್​ ಮಾರ್ಚ್ 2, 2024ರಂದು ಪ್ರಾರಂಭವಾಗಿ ಮಾರ್ಚ್ 9 ರಂದು ಕೊನೆಗೊಳ್ಳಲಿದ್ದು, ಎಲ್ಲಾ 19 ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.

ತಂಡದ ಮಾಲೀಕತ್ವದ ಸಾಲಿನಲ್ಲಿ ಡಿಸೆಂಬರ್ 13 ರಂದು ಶ್ರೀನಗರ ತಂಡವನ್ನು ಖರೀದಿಸಿದ ಅಕ್ಷಯ್ ಕುಮಾರ್ ಮತ್ತು ಡಿಸೆಂಬರ್ 18 ರಂದು ಬೆಂಗಳೂರು ತಂಡದ ಮಾಲೀಕತ್ವವನ್ನು ವಹಿಸಿಕೊಂಡ ಹೃತಿಕ್ ರೋಷನ್ ಅವರೂ ಸೇರಿಕೊಂಡಿದ್ದಾರೆ. ಈಗ, ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ಮುಂಬೈ ತಂಡದ ಮಾಲೀಕತ್ವವನ್ನು ತೆಗೆದುಕೊಳ್ಳುವ ಮೂಲಕ ಲೀಗ್​ಗೆ ಪ್ರವೇಶಿಸಿದ್ದಾರೆ. ಈ ಬೆಳವಣಿಗೆಯು ಹೊಸ ಹತ್ತು ಓವರ್​ಗಳ ಟೂರ್ನಿಯಲ್ಲಿನ ಸ್ಟಾರ್ ಮಾಲೀಕತ್ವದ ಪಟ್ಟಿಗೆಯನ್ನು ಹಿಗ್ಗಿಸಿದೆ. ಟೆನ್ನಿಸ್ ಬಾಲ್ ಕ್ರಿಕೆಟ್ ಅನ್ನು ಭಾರತೀಯ ಕ್ರಿಕೆಟ್​ನಲ್ಲಿ ಅಗ್ರ ಸ್ಥಾನಕ್ಕೇರಿಸುವ ಗುರಿಯನ್ನು ಹೊಂದಿದೆ.

ಮಾರ್ಚ್​ 22ರಂದು ಐಪಿಎಲ್​ ಶುರು, ಎಲ್ಲಿ ತನಕ ಟೂರ್ನಿ?

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತು ಮಾರ್ಚ್ 22 ರಿಂದ ಮೇ ಅಂತ್ಯದೊಳಗೆ ನಡೆಯಲಿದೆ ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಐಪಿಎಲ್ ಆಡಳಿತ ಮಂಡಳಿ ಸೋಮವಾರ ಐಪಿಎಲ್ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ವೇಳಾಪಟ್ಟಿ ಮತ್ತು ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದೆ.

ಇದನ್ನೂ ಓದಿ : Naveen-ul-Haq : ಕೊಹ್ಲಿ ಜತೆ ಜಗಳವಾಡಿದ್ದ ನವಿನ್​ ಉಲ್​ ಹಕ್​ಗೆ 20 ತಿಂಗಳು ನಿಷೇಧ

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಶ್ರೀಲಂಕಾದ ಆಟಗಾರರು ಐಪಿಎಲ್ 2024 ರ ಸಂಪೂರ್ಣ ಅವಧಿಗೆ ಲಭ್ಯವಿರುತ್ತಾರೆ ಎಂದು ಮಂಡಳಿಯು ಇದೇ ವೇಳೆ ದೃಢಪಡಿಸಿದೆ. ಮಾರ್ಚ್​​ನಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್​ವುಡ್​ ಮೇ ತಿಂಗಳಲ್ಲಿ ಪಂದ್ಯಾವಳಿಯಲ್ಲಿ ಆಡಲು ಲಭ್ಯವಿರುತ್ತಾರೆ ಎಂದು ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ದೃಢಪಡಿಸಿದೆ.

ಐಪಿಎಲ್ 2023 ರಲ್ಲಿ ಉತ್ತಮ ಋತುವಿನ ಹೊರತಾಗಿಯೂ, ಹೇಜಲ್ವುಡ್ ಅವರನ್ನು ಐಪಿಎಲ್ 2024 ಕ್ಕೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿದೆ. ಹೀಗಾಗಿ ಹೊಸ ತಂಡಕ್ಕೆ ಹರಾಜಿನ ಮೂಲಕ ಸೇರಿಕೊಳ್ಳಬೇಕಾಗಿದೆ.

ಇಂಗ್ಲೆಂಡ್ ಆಟಗಾರರ ಲಭ್ಯತೆ ಹೇಗೆ?

ಇಂಗ್ಲೆಂಡ್ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಮುಂದಿನ ಆವೃತ್ತಿಗೆ ಲಭ್ಯವಿರುವುದಿಲ್ಲ ಮತ್ತು ಉಳಿದ ಇಂಗ್ಲೆಂಡ್ ಆಟಗಾರರ ಲಭ್ಯತೆಯನ್ನು ಅವರ ಅಂತಾರಾಷ್ಟ್ರೀಯ ಬದ್ಧತೆಗಳಿಗೆ ಒಳಪಡಿಸಲಾಗುವುದು ಎಂದು ಭಾರತೀಯ ಕ್ರಿಕೆಟ್​ ಮಂಡಳಿ ದೃಢಪಡಿಸಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಕ್ರಿಕೆಟ್ ಐರ್ಲೆಂಡ್ (ಸಿಐ) ಮುಸ್ತಾಫಿಜುರ್ ರೆಹಮಾನ್ ಮತ್ತು ಜೋಶುವಾ ಲಿಟಲ್ ಅವರಿಗೆ ಐಪಿಎಲ್ 2024 ರಲ್ಲಿ ಭಾಗವಹಿಸಲು ವಿಶೇಷ ಅನುಮತಿ ನೀಡಿವೆ. ಐರ್ಲೆಂಡ್ ವೇಗಿ ಪಂದ್ಯಾವಳಿಯ ಸಂಪೂರ್ಣ ಅವಧಿಗೆ ಲಭ್ಯವಿದ್ದರೆ, ರೆಹಮಾನ್​ಗೆ ಮೇ 11 ರವರೆಗೆ ಎನ್ಒಸಿ ನೀಡಲಾಗಿದೆ.

ಟಸ್ಕಿನ್ ಅಹ್ಮದ್ ಮತ್ತು ಮೊಹಮ್ಮದ್ ಶೊರಿಫುಲ್ ಇಸ್ಲಾಂ ಐಪಿಎಲ್ 2024 ಆವೃತ್ತಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಬಿ ಬಿಸಿಸಿಐಗೆ ತಿಳಿಸಿದೆ.

Exit mobile version