ಲಂಡನ್: ಇತ್ತೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಸಲಿಂಗಿ ಜೋಡಿ ವಿವಾಹ ಹೆಚ್ಚಾಗಿ ನಡೆಯುತ್ತಿವೆ. ಅದರಲ್ಲೂ ಕ್ರಿಕೆಟ್ ವಲಯದಲ್ಲಿ ಹೆಚ್ಚು. ಒಂದು ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಡೇನಿಯಲ್ ವ್ಯಾಟ್(Danielle Wyatt) ಅವರು ತನ್ನ ಬಹುಕಾಲ ಗೆಳತಿ ಜಾರ್ಜಿ ಹಾಡ್ಜ್(Georgie Hodge) ಅವರೊಂದಿಗೆ ಮದುವೆಯಾಗಿದ್ದರು. ಇದೀಗ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ಸ್ಟಾರ್ ಕ್ರಿಕೆಟಿಗರಿಬ್ಬರು ನಿಶ್ಚಿತಾರ್ಥ(Amy Jones-Piepa Cleary Engagement) ಮಾಡಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡ ವಿಕೆಟ್ ಕೀಪರ್ ಆಮಿ ಜೋನ್ಸ್(Amy Jones) ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ್ತಿ ಪೈಪಾ ಕ್ಲಿಯರಿ(Piepa Cleary) ಸಲಿಂಗಿ ವಿವಾಹವಾಗಲು(Amy Jones-Piepa Cleary) ಮುಂದಾಗಿರುವ ಜೋಡಿ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೊವನ್ನು ಉಭಯ ಆಟಗಾರ್ತಿಯರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ನಾವು ಜತೆಯಾಗಿ ಜೀವಿಸಲು ಮೊದಲ ಹೆಜ್ಜೆ ಇಟ್ಟಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ.
31 ವರ್ಷದ ಆಮಿ ಜೋನ್ಸ್ 2019 ರಲ್ಲಿ ಇಂಗ್ಲೆಂಡ್ ತಂಡದ ಪರ ಪದಾರ್ಪಣೆ ಮಾಡಿದ್ದರು. ಇದುರೆಗೆ ಇಂಗ್ಲೆಂಡ್ ಪರ 107 ಟಿ20, 91 ಏಕದಿನ ಮತ್ತು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ(1951), ಟಿ20ಯಲ್ಲಿ (1515), ಟೆಸ್ಟ್ನಲ್ಲಿ (116) ರನ್ ಗಳಿಸಿದ್ದಾರೆ. ಆಮಿಯವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್‌ಗಾಗಿ ಆಡುತ್ತಿರುವಾಗ 28 ವರ್ಷದ ಆಸ್ಟ್ರೇಲಿಯಾದ ವೇಗಿ ಪೈಪಾ ಕ್ಲಿಯರಿ ಜತೆ ಪ್ರೇಮಾಂಕುರವಾಗಿತ್ತು. ಇದೀಗ ಈ ಜೋಡಿ ಒಂದಾಗಿ ಜೀವನ ನಡೆಸಲು ಸಿದ್ಧರಾಗಿದ್ದಾರೆ.
ಇಂಗ್ಲೆಂಡ್ ಆಟಗಾರ್ತಿ ಸಲಿಂಗ ವಿವಾಹವಾಗುತ್ತಿರುವ ಮೂರನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗರಾದ ನತಾಲಿಯಾ ಸೀವರ್ ಮತ್ತು ಕ್ಯಾಥರಿನ್ ಬ್ರಂಟ್, ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್(Georgie Hodge) ಸಲಿಂಗ ವಿವಾಹವಾಗಿದ್ದರು.
ಇದನ್ನೂ ಓದಿ Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!
ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್(Georgie Hodge) ಇದೇ ಜೂನ್ನಲ್ಲಿ ವಿವಾಹವಾಗಿದ್ದರು. ಕಳೆದ ವರ್ಷ ಮಾರ್ಚ್ 2ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ‘ನಮ್ಮ ಮುಂದಿನ ಜೀವನವನ್ನು ದೃಢಪಡಿಸಿಕೊಳ್ಳುತ್ತಿದ್ದೇವೆ’ ಎಂದು ಮನೆಯ ಎಮೊಜಿಗಳನ್ನು ಹಾಕಿ ಟ್ವಿಟರ್ ಪೋಸ್ಟ್ ಮೂಲಕ ಡೇನಿಯಲ್ ವ್ಯಾಟ್ ತಮ್ಮ ವಿವಾಹದ(Danielle Wyatt Marriage) ತಮ್ಮ ವಿವಾಹದ ವಿಚಾರವನ್ನು ಪ್ರಕಟಿಸಿ ಮದುವೆಯ ಮೂರು ಫೋಟೊಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್ ಜೋಡಿಗಳಿಗೆ ಭಾರತ ಮಹಿಳಾ ತಂಡದ ಆಟಗಾರ್ತಿ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮೀಮಾ ರೋಡ್ರಿಗಸ್ ಸೇರಿ ಹಲವು ದೇಶದ ಆಟಗಾರ್ತಿಯರು ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಶುಭ ಕೋರಿದ್ದರು. ವಿವಾಹ ಸಮಾರಂಭದಲ್ಲಿ ಇಂಗ್ಲೆಂಡ್ ನಾಯಕಿ ನಾಯಕಿ ಹೀದರ್ ನೈಟ್, ಡ್ಯಾನಿ ವ್ಯಾಟ್, ಇಶಾ ಗುಹಾ, ಜೆನ್ನಿ ಗನ್ ಸೇರಿದಂತೆ ಇಂಗ್ಲೆಂಡ್ ತಂಡದ ಪ್ರಸ್ತುತ ಮತ್ತು ಹಿಂದಿನ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.