Amy Jones-Piepa Cleary: ನಿಶ್ಚಿತಾರ್ಥ ಮಾಡಿಕೊಂಡ ಇಂಗ್ಲೆಂಡ್​-ಆಸ್ಟ್ರೇಲಿಯಾ ತಂಡದ ಮಹಿಳಾ ಆಟಗಾರ್ತಿಯರು - Vistara News

ಕ್ರೀಡೆ

Amy Jones-Piepa Cleary: ನಿಶ್ಚಿತಾರ್ಥ ಮಾಡಿಕೊಂಡ ಇಂಗ್ಲೆಂಡ್​-ಆಸ್ಟ್ರೇಲಿಯಾ ತಂಡದ ಮಹಿಳಾ ಆಟಗಾರ್ತಿಯರು

Amy Jones-Piepa Cleary: ಇಂಗ್ಲೆಂಡ್​ ಆಟಗಾರ್ತಿ ಸಲಿಂಗ ವಿವಾಹವಾಗುತ್ತಿರುವ ಮೂರನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗರಾದ ನತಾಲಿಯಾ ಸೀವರ್ ಮತ್ತು ಕ್ಯಾಥರಿನ್ ಬ್ರಂಟ್, ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್(Georgie Hodge) ಸಲಿಂಗ ವಿವಾಹವಾಗಿದ್ದರು.

VISTARANEWS.COM


on

Amy Jones-Piepa Cleary
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್​: ಇತ್ತೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಸಲಿಂಗಿ ಜೋಡಿ ವಿವಾಹ ಹೆಚ್ಚಾಗಿ ನಡೆಯುತ್ತಿವೆ. ಅದರಲ್ಲೂ ಕ್ರಿಕೆಟ್​ ವಲಯದಲ್ಲಿ ಹೆಚ್ಚು. ಒಂದು ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್​ ಆಟಗಾರ್ತಿ ಡೇನಿಯಲ್ ವ್ಯಾಟ್(Danielle Wyatt) ಅವರು ತನ್ನ ಬಹುಕಾಲ ಗೆಳತಿ ಜಾರ್ಜಿ ಹಾಡ್ಜ್(Georgie Hodge) ಅವರೊಂದಿಗೆ ಮದುವೆಯಾಗಿದ್ದರು. ಇದೀಗ ಇಂಗ್ಲೆಂಡ್​​ ಮತ್ತು ಆಸ್ಟ್ರೇಲಿಯಾ ಮಹಿಳಾ ಸ್ಟಾರ್​ ಕ್ರಿಕೆಟಿಗರಿಬ್ಬರು ನಿಶ್ಚಿತಾರ್ಥ(Amy Jones-Piepa Cleary Engagement) ಮಾಡಿಕೊಂಡಿದ್ದಾರೆ.

ಇಂಗ್ಲೆಂಡ್​ ತಂಡ ವಿಕೆಟ್​ ಕೀಪರ್​ ಆಮಿ ಜೋನ್ಸ್​(Amy Jones) ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್​​​ ಆಟಗಾರ್ತಿ ಪೈಪಾ ಕ್ಲಿಯರಿ(Piepa Cleary) ಸಲಿಂಗಿ ವಿವಾಹವಾಗಲು(Amy Jones-Piepa Cleary) ಮುಂದಾಗಿರುವ ಜೋಡಿ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೊವನ್ನು ಉಭಯ ಆಟಗಾರ್ತಿಯರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು ನಾವು ಜತೆಯಾಗಿ ಜೀವಿಸಲು ಮೊದಲ ಹೆಜ್ಜೆ ಇಟ್ಟಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ.

31 ವರ್ಷದ ಆಮಿ ಜೋನ್ಸ್ 2019 ರಲ್ಲಿ ಇಂಗ್ಲೆಂಡ್​ ತಂಡದ ಪರ ಪದಾರ್ಪಣೆ ಮಾಡಿದ್ದರು. ಇದುರೆಗೆ ಇಂಗ್ಲೆಂಡ್​ ಪರ 107 ಟಿ20, 91 ಏಕದಿನ ಮತ್ತು 6 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ(1951), ಟಿ20ಯಲ್ಲಿ (1515), ಟೆಸ್ಟ್​ನಲ್ಲಿ (116) ರನ್​ ಗಳಿಸಿದ್ದಾರೆ. ಆಮಿಯವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್‌ಗಾಗಿ ಆಡುತ್ತಿರುವಾಗ 28 ವರ್ಷದ ಆಸ್ಟ್ರೇಲಿಯಾದ ವೇಗಿ ಪೈಪಾ ಕ್ಲಿಯರಿ ಜತೆ ಪ್ರೇಮಾಂಕುರವಾಗಿತ್ತು. ಇದೀಗ ಈ ಜೋಡಿ ಒಂದಾಗಿ ಜೀವನ ನಡೆಸಲು ಸಿದ್ಧರಾಗಿದ್ದಾರೆ.

ಇಂಗ್ಲೆಂಡ್​ ಆಟಗಾರ್ತಿ ಸಲಿಂಗ ವಿವಾಹವಾಗುತ್ತಿರುವ ಮೂರನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗರಾದ ನತಾಲಿಯಾ ಸೀವರ್ ಮತ್ತು ಕ್ಯಾಥರಿನ್ ಬ್ರಂಟ್, ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್(Georgie Hodge) ಸಲಿಂಗ ವಿವಾಹವಾಗಿದ್ದರು.

ಇದನ್ನೂ ಓದಿ Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್(Georgie Hodge) ಇದೇ ಜೂನ್​ನಲ್ಲಿ ವಿವಾಹವಾಗಿದ್ದರು. ಕಳೆದ ವರ್ಷ ಮಾರ್ಚ್ 2ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ‘ನಮ್ಮ ಮುಂದಿನ ಜೀವನವನ್ನು ದೃಢಪಡಿಸಿಕೊಳ್ಳುತ್ತಿದ್ದೇವೆ’ ಎಂದು ಮನೆಯ ಎಮೊಜಿಗಳನ್ನು ಹಾಕಿ ಟ್ವಿಟರ್​ ಪೋಸ್ಟ್​ ಮೂಲಕ ಡೇನಿಯಲ್‌ ವ್ಯಾಟ್‌ ತಮ್ಮ ವಿವಾಹದ(Danielle Wyatt Marriage) ತಮ್ಮ ವಿವಾಹದ ವಿಚಾರವನ್ನು ಪ್ರಕಟಿಸಿ ಮದುವೆಯ ಮೂರು ಫೋಟೊಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್ ಜೋಡಿಗಳಿಗೆ ಭಾರತ ಮಹಿಳಾ ತಂಡದ ಆಟಗಾರ್ತಿ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮೀಮಾ ರೋಡ್ರಿಗಸ್​ ಸೇರಿ ಹಲವು ದೇಶದ ಆಟಗಾರ್ತಿಯರು ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಶುಭ ಕೋರಿದ್ದರು. ವಿವಾಹ ಸಮಾರಂಭದಲ್ಲಿ ಇಂಗ್ಲೆಂಡ್​ ನಾಯಕಿ ನಾಯಕಿ ಹೀದರ್ ನೈಟ್, ಡ್ಯಾನಿ ವ್ಯಾಟ್, ಇಶಾ ಗುಹಾ, ಜೆನ್ನಿ ಗನ್ ಸೇರಿದಂತೆ ಇಂಗ್ಲೆಂಡ್ ತಂಡದ ಪ್ರಸ್ತುತ ಮತ್ತು ಹಿಂದಿನ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics: ಕೊಕೊ ಗಾಫ್ ಅಮೆರಿಕದ ಧ್ವಜಧಾರಿ; ಈ ಗೌರವ ಪಡೆದ ಅತಿ ಕಿರಿಯ ಕ್ರೀಡಾಪಟು

Paris Olympics: ಮಹಿಳಾ ಟೆನಿಸ್​ ಸಿಂಗಲ್ಸ್‌ನಲ್ಲಿ ವಿಶ್ವ ನಂ. 2 ಶ್ರೇಯಾಂಕವನ್ನು ಹೊಂದಿರುವ ಗಾಫ್ ಕಳೆದ ವರ್ಷದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗದಲ್ಲಿಯೂ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದು ಬೀಗಿದ್ದರು.

VISTARANEWS.COM


on

Paris Olympics
Koo

ವಾಷಿಂಗ್ಟನ್‌: ಯುವ ಮಹಿಳಾ ಟೆನಿಸ್ ಆಟಗಾರ್ತಿ ಕೊಕೊ ಗಾಫ್(Coco Gauff) ಅವರು ಪ್ಯಾರಿಸ್​ ಒಲಿಂಪಿಕ್ಸ್‌ನ(Paris Olympics) ಉದ್ಘಾಟನಾ ಸಮಾರಂಭದಲ್ಲಿ(Paris Olympics Opening Ceremony) ಅಮರಿಕದ ಮಹಿಳಾ ಧ್ವಜಧಾರಿಯಾಗಲಿದ್ದಾರೆ(US Flag Bearer). ಶುಕ್ರವಾರ(ಜುಲೈ 26) ನಡೆಯುವ ಉದ್ಘಾಟನ ಸಮಾರಂಭದಲ್ಲಿ ಯುಎಸ್ ಧ್ವಜವನ್ನು ಹೊತ್ತೊಯ್ಯಲಿದ್ದಾರೆ. ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜತೆಗೆ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಧ್ವಜಧಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಟೆನಿಸ್ ಆಟಗಾರ್ತಿ ಎಂದೆನಿಸಿಕೊಳ್ಳಲಿದ್ದಾರೆ. ಪುರುಷರ ವಿಭಾಗದಲ್ಲಿ ಖ್ಯಾತ ಬಾಸ್ಕೆಟ್​ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಯುಎಸ್ ಧ್ವಜವನ್ನು ಹೊತ್ತೊಯ್ಯಲಿದ್ದಾರೆ.

ಮಾರ್ಚ್ 2004 ರಲ್ಲಿ ಜನಿಸಿದ ಗಾಫ್​, ಪ್ಯಾರಿಸ್​ನಲ್ಲಿ ಯುಎಸ್ ಧ್ವಜವನ್ನು(Coco Gauff US Flag Bearer) ಹಿಡಿಯುವ ಮೂಲಕ 1976 ರ ವಿಂಟರ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಯುಎಸ್‌ಗೆ ಧ್ವಜಧಾರಿಯಾಗಿ ಸೇವೆ ಸಲ್ಲಿಸಿದ ಆಲ್ಪೈನ್ ಸ್ಕೀಯರ್ ಸಿಂಡಿ ನೆಲ್ಸನ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಗಾಫ್​ಗೆ ಈಗ 20 ವರ್ಷ.

ಮಹಿಳಾ ಟೆನಿಸ್​ ಸಿಂಗಲ್ಸ್‌ನಲ್ಲಿ ವಿಶ್ವ ನಂ. 2 ಶ್ರೇಯಾಂಕವನ್ನು ಹೊಂದಿರುವ ಗಾಫ್ ಕಳೆದ ವರ್ಷದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗದಲ್ಲಿಯೂ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದು ಬೀಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಯುಎಸ್​​ ಓಪನ್‌ನಲ್ಲಿ, ಪ್ರಶಸ್ತಿ ಗೆಲ್ಲುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ 2ನೇ ಅಮೇರಿಕನ್ ಆಟಗಾರ್ತಿ ಎನಿಸಿಕೊಂಡಿದ್ದರು. ದಾಖಲೆ ಸೆರೆನಾ ವಿಲಿಯಮ್ಸ್ ಹೆಸರಿನಲ್ಲಿದೆ. ವಿಲಿಯಮ್ಸ್​ 1999 ರಲ್ಲಿ 17 ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಇದನ್ನೂ ಓದಿ Paris Olympics: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು

ಸಮೀಕ್ಷೆಯೊಂದರ ಪ್ರಕಾರ ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಪಟ್ಟಿಯಲ್ಲಿ ಅಮೆರಿಕಕ್ಕೆ ಅಗ್ರ ಸ್ಥಾನ ಲಭಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. 2008ರ ಬೀಜಿಂಗ್‌ ಕ್ರೀಡಾಕೂಟವನ್ನು ಹೊರತುಪಡಿಸಿ, 1992ರಿಂದ ಒಲಿಂಪಿಕ್ಸ್‌ ನಲ್ಲಿ ಅಮೆರಿಕವೇ ಪ್ರಭುತ್ವ ಸಾಧಿಸಿದೆ. ಸಮೀಕ್ಷೆ ಪ್ರಕಾರ ಅಮೆರಿಕ 112 ಪದಕಗಳನ್ನು ಗೆಲ್ಲುವ ಸಾಧ್ಯತೆ ಇದೆ. ಗಾಫ್ ಕೂಡ ಈ ಬಾರಿ ಚೊಚ್ಚಲ ಪದಕ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.

ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್‌ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Continue Reading

ಕ್ರೀಡೆ

Hardik Pandya: ವಿಚ್ಛೇದನ ನೀಡಿ ಒಂದು ವಾರ ಕಳೆಯುವ ಮುನ್ನವೇ ಮಾಜಿ ಪತ್ನಿಯ ಪೋಸ್ಟ್​ಗೆ ಲೈಕ್ಸ್​, ಕಮೆಂಟ್​ ಮಾಡಿದ ಹಾರ್ದಿಕ್​ ಪಾಂಡ್ಯ

Hardik Pandya:

VISTARANEWS.COM


on

Hardik Pandya
Koo

ಮುಂಬಯಿ: ಕಳೆದ ವಾರವಷ್ಟೇ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ(Hardik Pandya) ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ(Hardik-Natasa Divorce) ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಈ ಘಟನೆ ಸಂಭವಿಸಿ ಒಂದು ವಾರ ವಾರ ಕಳೆಯುವ ಮುನ್ನವೇ ಪಾಂಡ್ಯ ತಮ್ಮ ಮಾಜಿ ಪತ್ನಿಯ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಲೈಕ್​ ಮತ್ತು ಕಮೆಂಟ್​ ಮಾಡಿದ್ದಾರೆ. ಪಾಂಡ್ಯ ಎಮೊಜಿ ಮೂಲಕ ಪ್ರತಿಕ್ರಿಯಿಸಿದ ಪೋಸ್ಟ್​ನ ಫೋಟೋ ವೈರಲ್​ ಆಗಿದೆ.

ನತಾಶಾ ಸ್ಟಾಂಕೋವಿಕ್ ತಮ್ಮ ಮಗನೊಂದಿಗೆ ಲಂಡನ್​ನಲ್ಲಿರುವ ಡೈನೋಸಾರ್‌ ಮಾದರಿಯ ವಿಲಕ್ಷಣ ಹಕ್ಕಿಯ ಪಳಯುಳಿಕೆ ಇರುವಂತಹ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಹಲವು ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗೆ ಹಾರ್ದಿಕ್​ ಪಾಂಡ್ಯ ಸೂಪರ್​ ಮತ್ತು ಲವ್​ ಎಮೊಜಿಯ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇದನ್ನು ನೆಟ್ಟಿಗರು ಸ್ಕ್ರೀನ್​ ಶಾರ್ಟ್​ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದಾರೆ. ಇಷ್ಟು ಆತ್ಮೀಯವಾಗಿರುವ ನೀವು ಯಾಕೆ ವಿಚ್ಛೇದನ ಪಡೆದು ಮಗನಿಂದ ತಂದೆ ತಾಯಿಯ ಪ್ರೀತಿಯನ್ನು ಕಸಿದುಕೊಂಡಿದ್ದೀರಾ? ಎಂದು ಕೆಲವರು ಕಮೆಂಟ್ ಮೂಲಕ ಪ್ರಶ್ನೆ​ ಮಾಡಿದ್ದಾರೆ.

ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಸಂವಹನ ಕೊರತೆಯೇ ಮುಖ್ಯ ಕಾರಣ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳಕ್ಕೆ ಪರಿಹಾರ ಕಂಡುಕೊಳ್ಳುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್​ಗೆ ಕಾರಣವಾಯಿತು. ಇದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಬಗ್ಗೆ ಯಾವುದೇ ತಪ್ಪು ಸುದ್ದಿ ಹಬ್ಬಿಸಬಾರದು ಎಂದು ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ Hardik Pandya: ಫಿಟ್ನೆಸ್‌ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸಿಕ್ಸ್​ ಪ್ಯಾಕ್​ ಮೂಲಕ ತಿರುಗೇಟು ಕೊಟ್ಟ ಹಾರ್ದಿಕ್​ ಪಾಂಡ್ಯ

ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ವಿಚ್ಛೇದನ ಪಡೆದರೂ ಕೂಡ ಇಬ್ಬರೂ ಪುತ್ರ ಅಗಸ್ತ್ಯನನ್ನು(Agastya) ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ ಎಂದು ಈಗಾಗಲೇ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಯಲ್ಲಿ ಖಚಿತಪಡಿಸಿದ್ದಾರೆ.

ಅನನ್ಯ ಪಾಂಡೆ ಹಿಂದೆ ಬಿದ್ದ ಪಾಂಡ್ಯ?


ವರದಿಗಳ ಪ್ರಕಾರ ಹಾರ್ದಿಕ್​ ಪಾಂಡ್ಯ ಬಾಲಿವುಡ್ ನಟಿ ಅನನ್ಯ ಪಾಂಡೆ(Ananya Panday) ಜತೆ ಚಾಟಿಂಗ್​, ಡೇಟಿಂಗ್​ ಆರಂಭಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಅನನ್ಯ ಪಾಂಡೆ ಅವರನ್ನು ದೀಢಿರ್​ ಆಗಿ ಫಾಲೋ ಮಾಡಲಾರಂಭಿಸಿದ್ದು. ಅತ್ತ ಅನನ್ಯ ಪಾಂಡೆ ಕೂಡಾ ಹಾರ್ದಿಕ್ ಪಾಂಡ್ಯ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲಾರಂಭಿಸಿದ್ದಾರೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹೊಸ ಸಂಚಲನ ಹುಟ್ಟುಹಾಕಿದ್ದು ಪಾಂಡ್ಯ ಸದ್ಯದಲ್ಲೇ ಅನನ್ಯ ಪಾಂಡೆ ಜತೆ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

Continue Reading

ಕ್ರೀಡೆ

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

Mohammed Shami: ಶಮಿ ಅವರು ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ.

VISTARANEWS.COM


on

Mohammed Shami
Koo

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರು ಕೌಟುಂಬಿಕ ಕಲಹ, ವೈಯಕ್ತಿಕ ಕಾರಣ ಹಾಗೂ ಖಿನ್ನತೆಯಿಂದ ಮೂರು ಸಲ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂಬ ವಿಚಾರವನ್ನು ಸ್ವತಃ ತವಾಗಿಯೇ ಹೇಳಿಕೊಂಡಿದ್ದರು. ಆದರೆ, ಇದೀಗ ಶಮಿ 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ ವಿಚಾರವನ್ನು ಅವರ ಗೆಳೆಯ ಬಹಿರಂಗಪಡಿಸಿದ್ದಾರೆ. ಈ ವಿಚಾರ ಕೇಳಿ ಶಮಿ ಅಭಿಮಾನಿಗಳು ಒಂದು ಕ್ಷಣ ಆತಂಕಗೊಂಡಿದ್ದಾರೆ.

ಶಮಿ ಅವರ ಸ್ನೇಹಿತ ಉಮೇಶ್ ಕುಮಾರ್ ಅವರು ಶುಭಂಕರ್ ಮಿಶ್ರಾ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವ ವೇಳೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. “ಎರಡು ವರ್ಷಗಳ ಹಿಂದಿನ ಸಂಗತಿ ಇದಾಗಿದ್ದು, ಬೆಳಿಗ್ಗೆ ಸುಮಾರು 4 ಗಂಟೆ ಇರಬಹುದು. ನಾನು ನೀರು ಕುಡಿಯಲು ಎದ್ದು ಅಡುಗೆ ಮನೆಯ ಕಡೆಗೆ ಹೋಗುತ್ತಿದ್ದೆ, ಈ ವೇಳೆ ಶಮಿ ಬಾಲ್ಕನಿಯಲ್ಲಿ ನಿಂತಿದ್ದರು. ಚಿಂತೆಯಲ್ಲಿ ಇದ್ದ ಹಾಗೆ ಕಾಣಿಸುತ್ತಿತ್ತು. ನಾವು 19ನೇ ಮಹಡಿಯಲ್ಲಿ ವಾಸಿಸುತ್ತಿದ್ದೆವು. ನೀರು ಕುಡಿಯಲು ಹೋಗುತ್ತಿದ್ದ ನಾನು ನೇರವಾಗಿ ಶಮಿ ಬಳಿ ಓಡಿ ಬಂದೆ. ನಾನು ಬರುವುದು ಕೊಂಚ ತಡವಾಗಿದ್ದರೂ ಕೂಡ ಶಮಿ ಇಂದು ಜೀವಂತವಾಗಿರುತ್ತಿರಲಿಲ್ಲ. ಅವರು ಅಂದು ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ದೇವರ ದಯೆಯಿಂದ ಆ ದಿನ ರಾತ್ರಿ ದೊಡ್ಡ ಅನಾಹುತವೊಂದು ತಪ್ಪಿತು” ಎಂದು ಹೇಳುವ ಮೂಲಕ ಶಮಿ ಆತ್ಮಹತ್ಯೆಗೆ ಮುಂದಾಗಿದ್ದ ಶಾಕಿಂಗ್​ ವಿಚಾರವನ್ನು ಅವರ ಸ್ನೇಹಿತ ತೆರೆದಿಟ್ಟರು.

“ಶಮಿಯನ್ನು ಅಂದು ನಾನು ಆತ್ಮಹತ್ಯೆಗೆ ಯತ್ನಿಸಿದ್ದ ಬಗ್ಗೆ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಿದ್ದ ಶಮಿ, ಪಾಕಿಸ್ತಾನದ ಜತೆ ಮ್ಯಾಚ್‌ ಫಿಕ್ಸಿಂಗ್ ಆರೋಪ ಕೇಳಿ ಬಂದಿರುವುದು ಸಹಿಸಿಕೊಳ್ಳು ಸಾಧ್ಯವಾಗದೆ ನಾನು ಈ ರಿತಿ ಮಾಡಲು ಮುಂದಾದೆ ಎಂದು ಹೇಳಿದ್ದಾಗಿ ಅವರ ಗೆಳೆಯ ಹೇಳಿದ್ದಾರೆ. ವಿಚ್ಛೇದಿತ ಪತ್ನಿ ಹಸಿನ್ ಜಹಾನ್‌ ಅವರು ಶಮಿ ವಿರುದ್ಧ ಮ್ಯಾಚ್‌ ಫಿಕ್ಸಿಂಗ್ ಆರೋಪ ಮಾಡಿದ್ದರು. ಈಗಲೂ ಕೂಡ ಶಮಿ ಅವರ ವೈವಾಹಿಕ ಬದುಕು ಆಗಾಗ ಅನಪೇಕ್ಷಿತ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ.

ಇದನ್ನೂ ಓದಿ Mohammed Shami : ರೋಹಿತ್​ ಶರ್ಮಾಗೆ ನನ್ನ ಬೌಲಿಂಗ್​ ಎಂದರೆ ಭಯ; ಮೊಹಮ್ಮದ್ ಶಮಿ

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ತಂಡದ ನಾಯಕ ರೋಹಿತ್​ ಶರ್ಮ ಜತೆಗಿನ ಇನ್‌ಸ್ಟಾಗ್ರಾಮ್‌ ಚಾಟ್​ನಲ್ಲಿ ಶಮಿ ತಾನು ಖಿನ್ನತೆಗೆ ಒಳಗಾಗಿ ಮೂರು ಸಲ ಸಾಯಲು ಮುಂದಾಗಿದ್ದೆ ಎಂದು ಹೇಳಿಕೊಂಡಿದ್ದರು.

ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ  ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

Continue Reading

ಕ್ರೀಡೆ

Paris Olympics: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು

Paris Olympics: ಭಾರತೀಯ ಸೇನೆಯ 24 ಮಂದಿ ಕೂಡೆ ಸ್ಪರ್ಧಿಸುತ್ತಿರುವುದು ವಿಶೇಷ. ಇದರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಬಾಕ್ಸರ್​ಗಳಾದ ಜಾಸ್ಮಿನ್​ ಲಂಬೋರಿಯಾ ಮತ್ತು ಕುಸ್ತಿ ಪಟು ರಿತಿಕಾ ಹೂಡಾ ಈ ಮಹಿಳಾ ಸೇನಾನಿಗಳು.

VISTARANEWS.COM


on

Paris Olympics
Koo

ಬೆಂಗಳೂರು: ಒಲಿಂಪಿಕ್ಸ್‌ನಂಥ(Paris Olympics) ಜಾಗತಿಕ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದೇ ಭಾರತೀಯ ಕ್ರೀಡಾಪಟುಗಳ ಮುಖ್ಯ ಗುರಿ. ಈ ಬಾರಿ 117 ಕ್ರೀಡಾಪಟುಗಳು ಪದಕ ಕನಸನ್ನು ಹೊತ್ತು ಪ್ಯಾರಿಸ್​ಗೆ ತೆರಳಲಿದ್ದಾರೆ. ಒಲಿಂಪಿಕ್ಸ್ಗೆ ತೆರಳುವ ಕ್ರೀಡಾಪಟುಗಳಿಗೆ ಹಿಂದೆಂದಿಗಿಂತ್ತಲೂ ದೊರೆಯದ ಬೆಂಬಲ ಈ ಬಾರಿ ಸಿಕ್ಕಿದೆ.

117 ಕ್ರೀಡಾಪಟುಗಳ ಪೈಕಿ 72 ಮಂದಿಗೆ ಇದು ಚೊಚ್ಚಲ ಒಲಿಂಪಿಕ್ಸ್​ ಕೂಟವಾಗಿದೆ. ಭಾರತೀಯ ಸೇನೆಯ 24 ಮಂದಿ ಕೂಡೆ ಸ್ಪರ್ಧಿಸುತ್ತಿರುವುದು ವಿಶೇಷ. ಇದರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಬಾಕ್ಸರ್​ಗಳಾದ ಜಾಸ್ಮಿನ್​ ಲಂಬೋರಿಯಾ ಮತ್ತು ಕುಸ್ತಿ ಪಟು ರಿತಿಕಾ ಹೂಡಾ ಈ ಮಹಿಳಾ ಸೇನಾನಿಗಳು. ಅಥ್ಲೆಟಿಕ್ಸ್​ನಲ್ಲಿ ಗರಿಷ್ಠ 13 ಮಂದಿ ಸೈನಿಕರಿದ್ದಾರೆ. ಟೋಕಿಯೊ ಒಲಿಂಪಿಕ್ಸ್​ ಜಾವೆಲಿನ್​ ಎಸೆತದಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾ, ಓಟಗಾರ ಅವಿನಾಶ್​ ಸಾಬ್ಲೆ ಇದರಲ್ಲಿ ಪ್ರಮುಖರು. ಬಾಕ್ಸರ್​ ಅಮಿತ್​ ಪಂಗಲ್​, ಆರ್ಚರ್​ ತರುಣ್​ದೀಪ್ ರೈ, ಟೆನಿಸ್​ ಆಟಗಾರ ಶ್ರೀರಾಮ್​ ಬಾಲಾಜಿ ಕೂಡ ಸೈನಿಕರಾಗಿದ್ದಾರೆ.

ನಾಳೆಯಿಂದ ಭಾರತದ ಸ್ಪರ್ಧೆ ಆರಂಭ

ಭಾರತ (India’s Schedule At Paris Olympics) ನಾಳೆಯಿಂದ ಒಲಿಂಪಿಕ್ಸ್​ ಸ್ಪರ್ಧೆ ಆರಂಭಿಸಲಿದೆ(India’s July 25 Schedule At Paris Olympics). ನಾಳೆ(ಗುರುವಾರ) ನಡೆಯುವ ಆರ್ಚರಿ(Archery) ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತು ವಿಭಾಗದಲ್ಲಿ ಭಾರತ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್(Ankita Bhakat), ಭಜನ್ ಕೌರ್(Bhajan Kaur)​ ಕಣಕ್ಕಿಳಿಯಲಿದ್ದಾರೆ. ಪುರುಷರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಬಿ. ಧೀರಾಜ್(B. Dhiraj), ತರುಣದೀಪ್ ರೈ(Tarundeep Rai), ಪ್ರವೀಣ್ ಜಾಧವ್(Pravin Jadhav) ಸ್ಪರ್ಧಿಸಲಿದ್ದಾರೆ. ಈ ಪಂದ್ಯ ಸಂಜೆ 5: 45ಕ್ಕೆ ನಡೆಯಲಿದೆ. ಮಹಿಳೆಯ ಪಂದ್ಯ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಇದನ್ನೂ ಓದಿ Paris Olympics: ಕ್ರೀಡಾಪಟುಗಳು ರತಿ ಕ್ರೀಡೆ ನಡೆಸಿದರೆ ಮಂಚ ಮುರಿದೇ ಹೋಗುತ್ತೆ! ಏನಿದು ‘ಆ್ಯಂಟಿ ಸೆಕ್ಸ್​ ಬೆಡ್?

ಕರ್ನಾಟಕದಿಂದ 9 ಮಂದಿ ಸ್ಪರ್ಧೆ


ಒಲಿಂಪಿಕ್ಸ್​ನಲ್ಲಿ ಈ ಬಾರಿ ರಾಜ್ಯದ ಪರವಾಗಿ ಒಟ್ಟು 9 ಮಂದಿ ಕ್ರೀಡಾಳುಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ. ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್​ನಲ್ಲಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್​ನಲ್ಲಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಧಿನಿಧಿ ದೇಸಿಂಗೂ , ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್​ನಲ್ಲಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್​ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್​ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಕಣಕ್ಕಿಳಿಯಲಿದ್ದಾರೆ. ಎಲ್ಲ 9 ಮಂದಿಯೂ ಪದಕ ಗೆಲ್ಲಲಿ ಎನ್ನುವುದು ಕನ್ನಡಿಗರ ಆಶಯ ಮತ್ತು ಹಾರೈಕೆ.

Continue Reading
Advertisement
BJP Protest
ಕರ್ನಾಟಕ4 hours ago

BJP Protest: ಸದನದಲ್ಲಿ ಬಿಜೆಪಿ, ಜೆಡಿಎಸ್ ಅಹೋರಾತ್ರಿ ಧರಣಿ: ಅಲ್ಲೇ ಭಜನೆ, ಊಟ, ನಿದ್ದೆ; ಫೋಟೊ, ವಿಡಿಯೊ ಇಲ್ಲಿವೆ

Nitish Kumar
ದೇಶ5 hours ago

Nitish Kumar: ನೀನೂ ಹೆಣ್ಣು; ವಿಧಾನಸಭೆಯಲ್ಲೇ ಆರ್‌ಜೆಡಿ ಶಾಸಕಿಗೆ ನಿತೀಶ್‌ ಕುಮಾರ್‌ ಗದರಿದ್ದೇಕೆ?

Paris Olympics
ಕ್ರೀಡೆ5 hours ago

Paris Olympics: ಕೊಕೊ ಗಾಫ್ ಅಮೆರಿಕದ ಧ್ವಜಧಾರಿ; ಈ ಗೌರವ ಪಡೆದ ಅತಿ ಕಿರಿಯ ಕ್ರೀಡಾಪಟು

Anekal
ಕ್ರೈಂ6 hours ago

ಆನೇಕಲ್‌ನಲ್ಲಿ ಪುರಸಭೆ ಸದಸ್ಯನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ

Hardik Pandya
ಕ್ರೀಡೆ6 hours ago

Hardik Pandya: ವಿಚ್ಛೇದನ ನೀಡಿ ಒಂದು ವಾರ ಕಳೆಯುವ ಮುನ್ನವೇ ಮಾಜಿ ಪತ್ನಿಯ ಪೋಸ್ಟ್​ಗೆ ಲೈಕ್ಸ್​, ಕಮೆಂಟ್​ ಮಾಡಿದ ಹಾರ್ದಿಕ್​ ಪಾಂಡ್ಯ

King Chopper
ದೇಶ6 hours ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

ahoratri dharani until the guilts are punished says Opposition party Leader R Ashok
ಕರ್ನಾಟಕ6 hours ago

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

Traffic Restrictions
ಬೆಂಗಳೂರು7 hours ago

Traffic Restrictions: ವೈಟ್ ಟಾಪಿಂಗ್ ಕಾಮಗಾರಿ; ನಾಳೆಯಿಂದ ರಾಜಾಜಿನಗರದ ಈ ಮಾರ್ಗದಲ್ಲಿ ಸಂಚಾರ ನಿಷೇಧ

Mohammed Shami
ಕ್ರೀಡೆ7 hours ago

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

KP Poorchandra Tejaswi samagra kruthi Jagattu 14 samputagalu Lokarpane On July 29 in Bengaluru
ಬೆಂಗಳೂರು7 hours ago

Book Release: ಜು.29ರಂದು ಬೆಂಗಳೂರಿನಲ್ಲಿ 14 ಸಂಪುಟಗಳ ಪೂರ್ಣಚಂದ್ರ ತೇಜಸ್ವಿ ಕೃತಿ ಲೋಕಾರ್ಪಣೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ21 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ2 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ6 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ6 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ7 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌