Site icon Vistara News

ಕೊಹ್ಲಿಯ ಫೀಲ್ಡಿಂಗ್​ ಕಂಡು ಐಸಾಕ್ ನ್ಯೂಟನ್​ಗೆ ಸವಾಲೆಸೆದ ಆನಂದ್ ಮಹೀಂದ್ರಾ

virat kohli fielding

ಮುಂಬಯಿ: ಭಾರತದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ(Anand Mahindra) ಅವರು ಕ್ರೀಡಾ ಕ್ಷೇತ್ರದಲ್ಲಿ ಯಾರಾದರು ಸಾಧನೆ ಮಾಡಿದ ತಕ್ಷಣ ಅವರಿಗೆ ಉಡುಗೊರೆ ಮತ್ತು ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಇದೀಗ ಅಫಘಾನಿಸ್ತಾನ ವಿರುದ್ಧ ಬುಧವಾರ ನಡೆದಿದ್ದ ಟಿ20 ಪಂದ್ಯದಲ್ಲಿ ವಿರಾಟ್​ ಕೊಹ್ಲಿ(virat kohli fielding) ಮಾಡಿದ ಕ್ಷೇತ್ರ ರಕ್ಷಣೆಯನ್ನು ಕೊಂಡಾಡಿದ್ದಾರೆ.

‘ಹಲೋ ಐಸಾಕ್ ನ್ಯೂಟನ್‌? ಗುರುತ್ವಾಕರ್ಷಣೆ-ವಿರೋಧಿ ವಿದ್ಯಮಾನವನ್ನು ಪರಿಗಣಿಸಲು ಭೌತಶಾಸ್ತ್ರದ ಹೊಸ ನಿಯಮವನ್ನು ವ್ಯಾಖ್ಯಾನಿಸಲು ನೀವು ನಮಗೆ ಸಹಾಯ ಮಾಡಬಹುದೇ? ಎಂದು ಟ್ವಿಟರ್​ ಎಕ್ಸ್​ನಲ್ಲಿ ಬರೆದುಕೊಂಡು ಕೊಹ್ಲಿಯ ಸಾಹಸಮಯ ಫೀಲ್ಡಿಂಗ್​ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಭಾರತ ಗೆಲುವಿಗೆ ವಿರಾಟ್​ ಕೊಹ್ಲಿ ಮಾಡಿದ ಫೀಲ್ಡಿಂಗ್(virat kohli fielding)​ ಕೂಡ ಒಂದು ಪ್ರಮುಖ ಕಾರಣ. 17ನೇ ಓವರ್‌ನ ಅಂತಿಮ ಎಸೆತದಲ್ಲಿ ಕರೀಮ್ ಜನ್ನತ್ ಬಾರಿಸಿದ ಚೆಂಡನ್ನು ಬೌಂಡರಿ ಲೈನ್​ನಲ್ಲಿ ಕೊಹ್ಲಿ ಯಾರು ಊಹಿಸದ ರೀತಿಯಲ್ಲಿ ಮೇಲೆಕ್ಕೆ ಜಿಗಿದು ಸಿಕ್ಸರ್​ ತಡೆದರು. ಅವರು ಈ ಸಿಕ್ಸರ್​ ತಡೆಯದೇ ಹೋಗಿದ್ದರೆ ಭಾರತ ಸೋಲು ಕಾಣುತ್ತಿತ್ತು.

ಇದನ್ನೂ ಓದಿ ಟಿ20 ವಿಶ್ವಕಪ್​ ತಂಡ ಪ್ರಕಟಕ್ಕೆ ಐಪಿಎಲ್ ಪ್ರದರ್ಶನವೇ ಮಾನದಂಡ ಎಂದ ಕೋಚ್​ ದ್ರಾವಿಡ್​

ಪಂದ್ಯದಲ್ಲಿ ಅಮೋಘ ಫೀಲ್ಡಿಂಗ್​ ನಡೆಸಿ ಹಲವು ರನ್​ ಸೇವ್​ ಮಾಡಿದ ವಿರಾಟ್​ ಕೊಹ್ಲಿ ಅವರು ‘ಫೀಲ್ಡರ್​ ಆಫ್​ದಿ ಸೀರಿಸ್’​(ಸರಣಿಯ ಅತ್ಯುತ್ತಮ ಕ್ಷೇತ್ರರಕ್ಷಕ) ಪ್ರಶಸ್ತಿ ಪಡೆದಿದ್ದಾರೆ. ಟೀಮ್​ ಇಂಡಿಯಾ ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್ ಚಿನ್ನದ ಪದಕ ನೀಡುವ ಮೂಲಕ ಕೊಹ್ಲಿಯನ್ನು ಗೌರವಿಸಿದರು. ಕೊಹ್ಲಿ ಸಿಕ್ಸರ್​ ತಡೆದ ಕಾರಣ 5 ರನ್​ಗಳು ಸೇವ್​ ಆಗಿತ್ತು. ಒಂದೊಮ್ಮೆ ಇದು ಸಿಕ್ಸರ್​ ದಾಖಲಾಗುತ್ತಿದ್ದರೆ ಪಂದ್ಯ ಸೂಪರ್​ ಓವರ್​ ಕಾಣದೆ ಭಾರತ ಸೋಲಿಗೆ ತುತ್ತಾಗುತ್ತಿತ್ತು. 

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್​ ಟಕ್​ ಆಗುವ ಮೂಲಕ ಅನಗತ್ಯ ದಾಖೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಭಾರತದ ಪರ ಅತ್ಯಧಿಕ ಶೂನ್ಯ ಸಂಪಾದಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿತ್ತು. ಸಚಿನ್​ 34 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಈಗ ಕೊಹ್ಲಿ 35 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಸಚಿನ್​ ಹಿಂದಿಕ್ಕಿ ಈ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

Exit mobile version