Site icon Vistara News

Andres Balanta | ಹೃದಯಾಘಾತದಿಂದ ಕೊನೆಯುಸಿರೆಳೆದ ಯುವ ಫುಟ್ಬಾಲ್​ ತಾರೆ ಆಂಡ್ರೆಸ್ ಬಲಾಂಟ; ಕಂಬನಿ ಮಿಡಿದ ಫುಟ್ಬಾಲ್ ಜಗತ್ತು

andres balanta

ನವದೆಹಲಿ: ಕೊಲಂಬಿಯಾದ 22 ವರ್ಷದ ಪ್ರತಿಭಾನ್ವಿತ ಫುಟ್ಬಾಲಿಗ ಆಂಡ್ರೆಸ್ ಬಲಾಂಟ(Andres Balanta) ಅಭ್ಯಾಸ ನಡೆಸುತ್ತಿರುವಾಗಲೇ ಕುಸಿದುಬಿದ್ದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದೀಗ ಆಂಡ್ರೆಸ್ ಬಲಾಂಟ ಅವರ ನಿಧನಕ್ಕೆ ಫುಟ್ಬಾಲ್ ಜಗತ್ತು ಕಂಬನಿ ಮಿಡಿದಿದೆ.

ಆಂಡ್ರೆಸ್ ಬಲಾಂಟ ಅವರ ನಿಧನದ ಸುದ್ದಿಯನ್ನು ಅಥ್ಲೆಟಿಕೊ ಟುಕುಮನ್‌ ಖಚಿತಪಡಿಸಿದೆ. ‘ಕೊಲಂಬಿಯಾದ ಫುಟ್ಬಾಲಿಗ ಆಂಡ್ರೆಸ್ ಬಲಾಂಟ ಅವರು ನಿಧನರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ. ಈ ಸಂಕಷ್ಟದ ಸಮಯದಲ್ಲಿ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅಥ್ಲೆಟಿಕೊ ಟುಕುಮನ್‌ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

ಸ್ಪೇನ್​ ಪತ್ರಿಕೆಯ ವರದಿಯ ಪ್ರಕಾರ ಆಂಡ್ರೆಸ್ ಬಲಾಂಟ, ಕಳೆದ ಕೆಲ ತಿಂಗಳುಗಳಿಂದ ಅರ್ಜೆಂಟೀನಾ ಪರ್ಸ್ಟ್ ಡಿವಿಷನ್‌, ಅಥ್ಲೆಟಿಕೊ ಟುಕುಮನ್‌ ಪರ ಆಡುತ್ತಿದ್ದರು ಎಂದು ತಿಳಿಸಿದೆ. ಕೊಲಂಬಿಯಾದ ಭವಿಷ್ಯದ ತಾರೆ ಎಂದೇ ಬಿಂಬಿಸಲ್ಪಟ್ಟಿದ ಆಂಡ್ರೆಸ್ ಬಲಾಂಟ ಅವರ ಅಕಾಲಿಕ ಮರಣಕ್ಕೆ ಫಿಫಾ ಮತ್ತು ಫುಟ್ಬಾಲ್ ಜಗತ್ತು ಕಂಬನಿ ಮಿಡಿದಿದೆ.

ಕೆಲವು ಆಪ್ತ ಮೂಲಗಳ ಪ್ರಕಾರ, ಆಂಡ್ರೆಸ್ ಬಲಾಂಟ ಮೈದಾನದಲ್ಲಿ ಫುಟ್ಬಾಲ್​ ಅಭ್ಯಾಸ ನಡೆಸುತ್ತಿರುವಾಗಲೇ ದಿಢೀರ್ ಕುಸಿದು ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆಸ್ಪತ್ರೆಯಲ್ಲೂ 40 ನಿಮಿಷ ಚಿಕಿತ್ಸೆ ನೀಡಲಾಯಿತಾದರೂ, ಅವರ ಹೃದಯ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಆಂಡ್ರೆಸ್ ಬಲಾಂಟ ಈ ಮೊದಲು 2019ರಲ್ಲಿಯೂ ಒಮ್ಮೆ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಆಗಲು ಸಹಾ ಅವರು ವೈದ್ಯಕೀಯ ತಪಾಸಣೆಗೊಳಗಾಗಿದ್ದರು. ಬಳಿಕ ತೇತರಿಕೆ ಕಂಡು ಮತ್ತೆ ಫುಟ್ಬಾಲ್​ ಅಂಗಳಕ್ಕೆ ಮರಳಿದ್ದರು. ಆದರೆ ಈ ಬಾರಿ ವಿಧಿಯಾಟದ ಮುಂದೆ ಸೋತು ಹೋದರು.

ಇದನ್ನೂ ಓದಿ | Fifa World Cup | ಕೋಸ್ಟರಿಕಾ ವಿರುದ್ಧ ಗೆದ್ದರೂ ಫಿಫಾ ವಿಶ್ವಕಪ್​ ಟೂರ್ನಿಯಿಂದ ಜಾರಿ ಬಿದ್ದ ಜರ್ಮನಿ!

Exit mobile version