Site icon Vistara News

Angkrish Raghuvanshi: ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಡೆಲ್ಲಿಗೆ ಚಳಿ ಬಿಡಿಸಿದ 18ರ ಪೋರ ರಘುವಂಶಿ ಯಾರು?

Angkrish Raghuvanshi

ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಲಟ್ಸ್​(Delhi Capitals) ಪರ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ 54 ರನ್​ ಚಚ್ಚಿದ ಕೆಕೆಆರ್(Kolkata Knight Riders)​ ತಂಡದ 18 ವರ್ಷದ ಆಂಗ್‌ಕ್ರಿಶ್ ರಘುವಂಶಿ(Angkrish Raghuvanshi) ಯಾರು? ಈತನ ಕ್ರಿಕೆಟ್ ಸಾಧನೆ ಏನು? ಈ ಕುರಿತ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಈಗಾಗಲೇ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡಿದೆ. ಇವರ ಕ್ರಿಕೆಟ್​ ಸಾಧನೆಯ ಮಾಹಿತಿ ಇಂತಿದೆ.

ಆಂಗ್‌ಕ್ರಿಶ್ ರಘುವಂಶಿ ಅವರು 5 ಜೂನ್ 2005 ರಂದು ದೆಹಲಿಯಲ್ಲಿ ಜನಿಸಿದರು. ಬಳಿಕ ಇವರ ಕುಟುಂಬ ಮುಂಬೈಗೆ ಶಿಫ್ಟ್​ ಆಯಿತು. ಮುಂಬೈಯಲ್ಲಿಯೇ ಬೆಳೆದ ರಘುವಂಶಿ ದೇಶೀಯ ಕ್ರಿಕೆಟ್​ನಲ್ಲಿ ಮುಂಬೈ ತಂಡವನ್ನೇ ಪ್ರತಿನಿಧಿಸುತ್ತಿದ್ದಾರೆ. 2024ರ ಐಪಿಎಲ್​ ಟೂರ್ನಿಯಲ್ಲಿ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆ ಕೂಡ ಇವರದ್ದಾಗಿದೆ. ಕಳೆದ ಡಿಸೆಂಬರ್​ನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 20 ಲಕ್ಷ ನೀಡಿ ಖರೀದಿಸಿತು.

ಅಂಡರ್​-19 ವಿಶ್ವಕಪ್​ನಲ್ಲಿ ಅಮೊಘ ಬ್ಯಾಟಿಂಗ್​​


2022 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಂಗ್‌ಕ್ರಿಶ್ ರಘುವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಗಮನ ಸೆಳೆದಿದ್ದರು. ಆಡಿದ 6 ಪಂದ್ಯಗಳಿಂದ 278 ರನ್​ ಬಾರಿಸಿದ್ದರು. ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ 6ನೇ ಮತ್ತು ಭಾರತ ಪರ ಮೊದಲನೇ ಆಟಗಾರನಾಗಿ ಮೂಡಿ ಬಂದಿದ್ದರು. ತಲಾ ಒಂದು ಶತಕ ಮತ್ತು ಅರ್ಧ ಶತಕವೂ ಸೇರಿತ್ತು. ಈ ಪ್ರದರ್ಶನ ಕಂಡು ಕೆಕೆಆರ್​ ಮಣೆ ಹಾಕಿತ್ತು. ದೇಶೀಯ ಕ್ರಿಕೆಟ್​ನಲ್ಲಿ ರಘುವಂಶಿ 5 ಲಿಸ್ಟ್​ ಎ ಪಂದ್ಯಗಳಿಂದ 133 ರನ್​, 8 ಟಿ20 ಯಿಂದ 138 ರನ್​ ಬಾರಿಸಿದ್ದಾರೆ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಐಪಿಎಲ್​ ಪದಾರ್ಪಣೆ ಮಾಡಿದ್ದರು.

ಇದನ್ನೂ ಓದಿ IPL 2024: ಚೆನ್ನೈಗೆ ಆಘಾತ; ತಂಡ ತೊರೆದು ತವರಿಗೆ ಪ್ರಯಾಣಿಸಿದ ಸ್ಟಾರ್​ ವೇಗಿ

ಇದೀಗ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೇವಲ 27 ಎಸೆತಗಳಿಂದ 5 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 54 ರನ್​ ಬಾರಿಸಿದರು. ಸುನೀಲ್​ ನರೈನ್​ ಜತೆ 2 ವಿಕೆಟ್​ಗೆ ಜತೆಗೂಡಿ 104 ರನ್​ಗಳ ಜತೆಯಾಟ ಕೂಡ ನಿಭಾಯಿಸಿದರು. ನರೈನ್ ತಲಾ 7 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ 85 ರನ್​ ಚಚ್ಚಿದರು.

Exit mobile version