Site icon Vistara News

Asian Games : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಅನ್ನುರಾಣಿ

Annu Rani

ಹ್ಯಾಂಗ್ಜೌ: ಭಾರತದ ಜಾವೆಲಿನ್​ ಎಸೆತಗಾರ್ತಿ ಅನ್ನುರಾಣಿ ಏಷ್ಯನ್​ ಗೇಮ್ಸ್​ನಲ್ಲಿ (Asian Games) ಹೊಸ ದಾಖಲೆ ಬರೆದ್ದಾರೆ. ಅವರು ಖಂಡಾಂತರ ಕ್ರೀಡಾಕೂಟದ ಮಹಿಳೆಯರ ಜಾವೆಲಿನ್​ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಮೊಟ್ಟ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮಂಗಳವಾರ ಸಂಜೆ ನಡೆಸ ಸ್ಪರ್ಧೆಯಲ್ಲಿ ಅತ್ಯುತ್ತಮ 62.92 ಮೀಟರ್ ದೂರಕ್ಕೆ ಜಾವೆಲಿನ್​ ಎಸೆತ ಅನ್ನು ರಾಣಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಅಂದ ಹಾಗೆ ಅನ್ನು ರಾಣಿ 2014ರಲ್ಲಿ ನಡೆದಿದ್ದ ಏಷ್ಯನ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು ಇದೀಗ ಅವರು ಪ್ರದರ್ಶನದಲ್ಲಿ ಸುಧಾರಣೆ ಮಾಡಿಕೊಂಡು ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದರು.

ಅನ್ನು ರಾಣಿ ಅವರ ಚಿನ್ನದ ಪದಕದ ಸಾಧನೆಯೊಂದಿಗೆ ಭಾರತದ ಬಂಗಾರದ ಗಳಿಕೆ 15ಕ್ಕೆ ಏರಿಕೆಯಾಗಿದೆ. 26 ಬೆಳ್ಳಿ ಹಾಗೂ 28 ಕಂಚಿನ ಪದಕದ ಸಾಧನೆಯೊಂದಿಗೆ ಒಟ್ಟಾರೆ 69 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿಸಿದೆ.

ಮಂಗಳವಾರ ಸಂಜೆ ಪಾರುಲ್ ಚೌಧರಿ, ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಓಟದ ಅಂತಿಮ ಕ್ಷಣದಲ್ಲಿ ವೇಗ ಹೆಚ್ಚಿಸಿದ ಅವರು ಅವರು 15:14.75 ಸೆಕೆಂಡುಗಳಲ್ಲಿ ಗುರಿ ತಲುಪಿ ಜಪಾನ್ ನ ರಿರಿಕಾ ಹಿರೊನಾಕಾ ಅವರನ್ನು ಹಿಂದಿಕ್ಕಿದರು.

ಮಹಿಳೆಯರ 400 ಮೀಟರ್ ಓಟದ ಫೈನಲ್​ನಲ್ಲಿ ವಿಥ್ಯಾ ರಾಮರಾಜ್ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಶತಕ (100), ರಿಂಕು ಸಿಂಗ್ ಅವರ ಅದ್ಭುತ ಶತಕ (37*) ಮತ್ತು ಬೌಲರ್​ಗಳ ಅಬ್ಬರದಿಂದಾಗಿ ಭಾರತ ಕ್ರಿಕೆಟ್​ ತಂಡವು ತಂಡವು ನೇಪಾಳ ವಿರುದ್ಧ 23 ರನ್​ಗಳ ವಿಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಭಾರತ ಪುರುಷರ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.

ಭಾರತ ಪುರುಷರ ಕಬಡ್ಡಿ ತಂಡವು ಪಂದ್ಯಾವಳಿಯಲ್ಲಿ 55-18 ಅಂಕಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದರೆ, ಮಹಿಳಾ ಹಾಕಿ ತಂಡವು ಹಾಂಗ್ ಕಾಂಗ್ ವಿರುದ್ಧ 13-0 ಅಂತರದಿಂದ ಗೆಲುವು ಸಾಧಿಸಿತು. ಅರ್ಚರಿಯಲ್ಲಿ ಭಾರತೀಯರು ಪ್ರಾಬಲ್ಯ ಮೆರೆದಿದ್ದು, ಪುರುಷರ ವಿಭಾಗದಲ್ಲಿ ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಶರ್ಮಾ ಅಖಿಲ ಭಾರತ ಫೈನಲ್ ತಲುಪಿದರೆ, ಜ್ಯೋತಿ ಸುರೇಖಾ ವೆನ್ನಮ್ ಕೂಡ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಇದನ್ನೂ ಓದಿ : Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್​ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್​

ಬ್ಯಾಡ್ಮಿಂಟರ್​ನಲ್ಲಿ ಭಾರತದ ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ 16ನೇ ಸುತ್ತಿಗೆ ತಲುಪಿದ್ದಾರೆ. ಮಹಿಳೆಯರ 800 ಮೀಟರ್ ಓಟದಲ್ಲಿ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್ ಅಂತಿಮ ಸ್ಥಾನಗಳನ್ನು ಗಳಿಸಿದರೆ. ಭಾರತವು 4×400 ಮೀಟರ್ ತಂಡ ಪುರುಷರ ಸ್ಪರ್ಧೆಯಲ್ಲಿ ಫೈನಲ್​ಗೆ ಅರ್ಹತೆ ಪಡೆಯಿತು.

ಪುರುಷರ ಡೆಕಾಥ್ಲಾನ್​ನಲ್ಲಿ ಅಗ್ರ ಸ್ಥಾನವನ್ನು ಗಳಿಸುವ ಗುರಿಯನ್ನು ತೇಜಸ್ವಿನ್ ಶಂಕರ್ ಹೊಂದಿದ್ದಾರೆ. 2014ರ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದ ಮಹಿಳಾ ಜಾವೆಲಿನ್ ಸ್ಪರ್ಧಿ ಅನ್ನು ರಾಣಿ ಇನ್ನೊಂದು ಪದಕದ ಮೇಲೆ ಗುರಿಯಿಟ್ಟಿದ್ದಾರೆ.

Exit mobile version