ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ ಕ್ರಿಕೆಟ್ ಆಟಗಾರ (Team India)ರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಎಪ್ಲಸ್ ಗ್ರೇಡ್ನಲ್ಲಿದ್ದ ಕನ್ನಡಿಗ ಕೆ. ಎಲ್ ರಾಹುಲ್ಗೆ ಹಿಂಬಡ್ತಿ ಪಡೆದುಕೊಂಡು ಬಿ ಗ್ರೇಡ್ ಪಡೆದುಕೊಂಡಿದ್ದಾರೆ. ಇದೇ ವೇಳೆ ಆಲ್ರೌಂಡರ್ ರವೀಂದ್ರ ಜಡೇಜಾ ಎ ಪ್ಲಸ್ ಗ್ರೇಡ್ಗೆ ಬಡ್ತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ವೇಗದ ಬೌಲರ್ ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಹನುಮ ವಿಹಾರಿ ಹಾಗೂ ಅಜಿಂಕ್ಯ ರಹಾನೆ ಅವರನ್ನು ಗುತ್ತಿಗೆ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ.
ಬಿಸಿಸಿಐ ನಾಲ್ಕು ವಿಭಾಗದಲ್ಲಿ ಆಟಗಾರರನ್ನು ಗುತ್ತಿಗೆ ಪಟ್ಟಿಗೆ ಸೇರಿಸುತ್ತದೆ. ಎ ಪ್ಲಸ್, ಎ, ಬಿ ಹಾಗೂ ಸಿ ಕೆಟಗರಿ ಪ್ರಕಾರ ಅವರಿಗೆ ವಾರ್ಷಿಕವಾಗಿ ನೀಡುವ ಗುತ್ತಿಗೆ ಮೊತ್ತವನ್ನು ನಿಗದಿ ಮಾಡುತ್ತದೆ. ಎ ಪ್ಲಸ್ ಕೆಟಗರಿಗೆ ಏಳು ಕೋಟಿ ರೂಪಾಯಿ, ಎ ಪ್ಲಸ್ ಕೆಟಗರಿಗೆ ವಾರ್ಷಿಕ 5 ಕೋಟಿ ರೂಪಾಯಿ ಹಾಗೂ ಬಿ ಕೆಟಗರಿಗೆ ಮೂರು ಕೋಟಿ ರೂಪಾಯಿ ಹಾಗೂ ಸಿ ಕೆಟಗರಿಗೆ 1 ಕೋಟಿ ರೂಪಾಯಿ ನೀಡುತ್ತದೆ. ಎಲೈಟ್ ಎ ಗುಂಪಿನ ಆಟಗಾರರು ಮೂರು ಮಾದರಿಯಲ್ಲಿ ಆಡುವ ಆಟಗಾರರೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : Cricket League : ಮೇಜರ್ ಲೀಗ್ ಕ್ರಿಕೆಟ್ನಲ್ಲಿ ನ್ಯೂಯಾರ್ಕ್ ಫ್ರಾಂಚೈಸಿ ತನ್ನದಾಗಿಸಿಕೊಂಡ ಮುಂಬಯಿ ಇಂಡಿಯನ್ಸ್
ಆಟಗಾರರ ವಿಂಗಡಣೆ ಇಂತಿದೆ
ಎ ಪ್ಲಸ್ ಕೆಟಗರಿ: ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ. ರವೀಂದ್ರ ಜಡೇಜಾ
ಎ ಕೆಟಗರಿ: ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್, ಅಕ್ಷರ್ ಪಟೇಲ್.
ಬಿ ಕೆಟಗರಿ: ಚೇತೇಶ್ವರ್ ಪೂಜಾರ, ಕೆ. ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್.
ಸಿ ಕೆಟಗರಿ: ಉಮೇಶ್ ಯಾದವ್, ಶಿಖರ್ ಧವನ್, ಶಾರ್ದುಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ. ಯಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಶ್ದೀಪ್ ಸಿಂಗ್, ಕೆ. ಎಸ್ ಭರತ್.