ಮುಂಬಯಿ: ಹಾಲಿ ಆವೃತ್ತಿಯ ಐಪಿಎಲ್ಗೂ (IPL 2023) ಗಾಯದ ಸಮಸ್ಯೆಗೂ ಬಿಡದ ನಂಟು. ಟೂರ್ನಿ ಆರಂಭಕ್ಕೆ ಮೊದಲೇ ಹಲವು ಆಟಗಾರರು ಗಾಯದ ಕಾರಣಕ್ಕೆ ಆಡಲು ಬಂದಿರಲಿಲ್ಲ. ಟೂರ್ನಿ ಶುರುವಾದ ಬಳಿಕವೂ ಹಲವು ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರು ಮಂಡಿಯ ಮೂಳೆ ಮುರಿತ ಕಾರಣಕ್ಕೆ ತವರಿಗೆ ವಾಪಸಾಗಿದ್ದಾರೆ. ಆರ್ಸಿಬಿಯ ರೀಸ್ ಟೋಪ್ಲೆ ಭುಜದ ಮೂಳೆ ಮುರಿತ ಕಾರಣಕ್ಕೆ ತವರಿಗೆ ವಾಪಸಾಗಿದ್ದಾರೆ. ಏತನ್ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಬೆನ್ಸ್ಟೋಕ್ಸ್ ಪಾದದ ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಶನಿವಾರದ ಡಬಲ್ ಹೆಡರ್ನ ಪಂದ್ಯದಲ್ಲಿ ಆಡುವು ಸಾಧ್ಯತೆಗಳು ಇಲ್ಲ.
ಬೆನ್ ಸ್ಟೋಕ್ಸ್ ಅಭ್ಯಾಸ ಮಾಡುವ ವೇಳೆ ಅವರ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಅವರು 10 ದಿನಗಳ ವಿಶ್ರಾಂತಿ ಪಡೆಯಬೇಕಾಗಿದೆ. ಹೀಗಾಗಿ ಅವರಿಗೆ ಏಪ್ರಿಲ್ 8ರಂದು ನಡೆಯಲಿರುವ ಪಂದ್ಯದಲ್ಲಿ ಆಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ವರದಿಗಳು ಹೇಳಿವೆ.
ಇದನ್ನೂ ಓದಿ : IPL 2023: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೆ ಚಿಂತೆಯಾದ ಬೆನ್ ಸ್ಟೋಕ್ಸ್ ಫಿಟ್ನೆಸ್
ಬೆನ್ ಸ್ಟೋಕ್ಸ್ ಅವರನ್ನು ಕಳೆದ ಡಿಸೆಂಬರ್ನಲ್ಲಿ ನಡೆಯದ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 16.25 ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿತ್ತು. ಈ ವೇಳೆ ಸ್ಟೋಕ್ಸ್ ಅವರನ್ನು ಮುಂದಿನ ನಾಯಕರನ್ನಾಗಿ ಮಾಡುವ ಉದ್ದೇಶ ಚೆನ್ನೈ ತಂಡಕ್ಕೆ ಇದೆ ಎಂದು ಹೇಳಲಾಗಿತ್ತು.
ಸ್ಟೋಕ್ಸ್ ನಾಯಕರಾಗವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಇಂಗ್ಲೆಂಡ್ ತಂಡದ ಅಟಗಾರರೇ ಆಗಿರುವ ಮೊಯೀನ್ ಅಲಿ ಅವರು ಸ್ಟೋಕ್ಸ್ ಸಿಎಸ್ಕೆ ತಂಡಕ್ಕೆ ಹೊಂದಿಕೊಂಡಿದ್ದಾರೆ ಎಂದ ಹೇಳಿದ್ದಾರೆ ಅವರು ತಂಡಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಚೆನ್ನೈ ಫ್ರಾಂಚೈಸಿ ಯಾರು ಬೇಕಾದರೂ ಹೊಂದಿಕೊಳ್ಳಬಹುದಾದ ಫ್ರಾಂಚೈಸಿ ಆಗಿದೆ. ಇಲ್ಲಿ ಬಂದು ಕ್ರಿಕೆಟ್ ಆಟವನ್ನು ಅನುಭವಿಸಲು ಸಾಕಷ್ಟು ಅವಕಾಶಗಳಿವೆ ಎಂದು ಅವರು ಹೇಳಿದ್ದಾರೆ.
ಮುಂಬಯಿ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯವನ್ನು ಐಪಿಎಲ್ನ ಜಿದ್ದಾಜಿದ್ದಿನ ಹೋರಾಟ ಎಂದು ಹೇಳಲಾಗುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಐಪಿಎಲ್ನ ಅತ್ಯಂತ ಉತ್ತಮ ಫ್ರಾಂಚೈಸಿ. ಅತ್ಯಂತ ಹೆಚ್ಚು ಯಶಸ್ಸು ಪಡೆದುಕೊಂಡ ತಂಡವೂ ಆಗಿದೆ. ಅದೇ ರೀತಿ ದೊಡ್ಡ ಅಭಿಮಾನಿಗಳ ಬಳಗವನ್ನೂ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಬಿಟ್ಟರೆ ಅತ್ಯಂತ ರೋಚಕ ಕ್ರಿಕೆಟ್ ಆಡಲು ಸಾಧ್ಯವಾಗುವುದು ಇಲ್ಲೇ. ಫುಟ್ಬಾಲ್ ತಂಡಗಳಿಗೆ ಹೋಲಿಸಿದರೆ ಮ್ಯಾಂಚೆಸ್ಟರ್ ಕ್ಲಬ್ಗೆ ಸರಿಸಮಾನವಾಗಿರುವ ತಂಡ ಇದಾಗಿದೆ ಎಂದು ಅವರು ಹೇಳಿದ್ದಾರೆ.