ನವ ದೆಹಲಿ: ಜಸ್ಪ್ರಿತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದಾಗಿ ಮುಂದಿನ ಆವೃತ್ತಿಯ ಐಪಿಎಲ್ಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ಐಪಿಎಲ್ನ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಹಿನ್ನಡೆ ಉಂಟಾಗಿದೆ. ಏನನ್ಮಧ್ಯೆ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಮತ್ತೊಬ್ಬ ವೇಗದ ಬೌಲರ್ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದಾರೆ. ಅವರೇ ಆಸ್ಟ್ರೇಲಿಯಾ ತಂಡದ ಯುವ ವೇಗಿ ಜೇ ರಿಚರ್ಡ್ಸನ್. ಇತ್ತೀಚೆಗೆ ಅವರು ತೊಡೆಯ ಸ್ನಾಯಗಳ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯ ಐಪಿಎಲ್ಗೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಜೇ ರಿಚರ್ಡ್ಸನ್ ಮಾಡಿದ ಟ್ವೀಟ್ ಇಲ್ಲಿದೆ
ಜೇ ರಿಚರ್ಡ್ಸನ್ ಅವರು ಕಳೆದ ಹರಾಜಿನಲ್ಲಿ ಮುಂಬಯಿ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಮುಂಬಯಿ ಇಂಡಿಯನ್ಸ್ ತಂಡಕ್ಕೆ ಅವರನ್ನು ಸೇರಿಸಿಕೊಂಡರೂ ಯಾವುದೇ ಉಪಯೋಗ ಆಗಿಲ್ಲ.
ಇದನ್ನೂ ಓದಿ : Jasprit Bumrah : ಜಸ್ಪ್ರಿತ್ ಬುಮ್ರಾಗೆ ನ್ಯೂಜಿಲ್ಯಾಂಡ್ನಲ್ಲಿ ಸರ್ಜರಿ, ಸೆಪ್ಟೆಂಬರ್ನಲ್ಲಿ ತಂಡಕ್ಕೆ ವಾಪಸ್
26 ವರ್ಷದ ಯುವ ಬೌಲರ್ ಆಸ್ಟ್ರೇಲಿಯಾ ತಂಡದ ಪರವಾಗಿ 15 ಏಕದಿನ ಪಂದ್ಯಗಳು 18 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.