ಕೇಪ್ಟೌನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಕೆ. ಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ವೀಕ್ಷಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೊಸ ವರ್ಷಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಕಾಮನಬಿಲ್ಲು ರಾಷ್ಟ್ರದಲ್ಲಿ ಅವರು ಊಟ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಕೂಡ ತಮ್ಮ ಪತಿಯೊಂದಿಗೆ ಹೊಸ ವರ್ಷವನ್ನು ಆಚರಿಸಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದರು.
ಸೆಂಚೂರಿಯನ್ನಲ್ಲಿ ನ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತವು ಇನ್ನಿಂಗ್ಸ್ ಮತ್ತು 32 ರನ್ಗಳ ಅವಮಾನಕರ ಸೋಲನ್ನು ಅನುಭವಿಸಿತು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ನಷ್ಟ ಮಾಡಿಕೊಂಡಿತು. ಸರಣಿಯ ಆರಂಭಿಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಸಂಪೂರ್ಣ ಕುಸಿದಿತ್ತು, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಮಾತ್ರ ಮಿಂಚಿದರು. ರಾಹುಲ್ ಅವರ ಅದ್ಭುತ ಶತಕ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಕೊಹ್ಲಿಯ ಅಸಾಧಾರಣ ಅರ್ಧಶತಕವು ಪ್ರವಾಸಿ ತಂಡಕ್ಕೆ ಖುಷಿಯ ವಿಚಾರ.
Athiya Shetty is there in Cape Town, South Africa to support husband KL Rahul & team India. pic.twitter.com/2cBvPGmrlE
— Juman Sarma (@cool_rahulfan) January 3, 2024
ಎರಡನೇ ಪಂದ್ಯದಲ್ಲಿ ಏನಾಯಿತು?
ದಕ್ಷಿಣ ಆಫ್ರಿಕಾ ಪ್ರವಾಸದ (Ind vs SA) ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದ ಮುಕ್ತಾಯಕ್ಕೆ ಭಾರತ ತಂಡ ಮುನ್ನಡೆ ಪಡೆದುಕೊಂಡಿದೆ. ಏತನ್ಮಧ್ಯೆ, ದಿನಾಟದಲ್ಲಿ ಒಟ್ಟು 23 ವಿಕೆಟ್ಗಳು ಉರುಳಿರುವುದು ಬೌನ್ಸಿ ಪಿಚ್ನ ಕರಾಮತ್ತಿಗೆ ಸಾಕ್ಷಿ ಎನಿಸಿತು. ಉಭಯ ತಂಡಗಳ ವೇಗದ ಬೌಲರ್ಗಳು ಮಿಂಚಿದರೆ ಬ್ಯಾಟರ್ಗಳು ಬೌಲರ್ಗಳ ವೇಗ ಮತ್ತು ಆವೇಗಕ್ಕೆ ಬೆಚ್ಚಿ ಬಿದ್ದರು. ಇಲ್ಲಿನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 55 ರನ್ಗಳಿಗೆ ಆಲ್ಔಟ್ ಅಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 153 ರನ್ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡ 62 ರನ್ಗಳಿಗೆ 3 ವಿಕೆಟ್ ನಷ್ಟ ಮಾಡಿಕೊಂಡಿದ್ದು ಇನ್ನೂ 36 ರನ್ಗಳ ಹಿನ್ನಡೆಯನ್ನು ಹೊಂದಿದೆ.
ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್
ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ಹಾಗೂ ಮೊಹಮ್ಮದ್ ಸಿರಾಜ್ ನೆರವಿನಿಂದ ದಿನದ ಆರಂಭಿಕ ಸೆಷನ್ನಲ್ಲಿ ಕ್ಷಿಣ ಆಫ್ರಿಕಾವನ್ನು ಕೇವಲ 55 ರನ್ಗಳಿಗೆ ಆಲೌಟ್ ಮಾಡಿತು ಭಾರತ. ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದ ಸ್ವಲ್ಪ ಸಮಯದ ನಂತರ, ಸಿರಾಜ್ ಆತಿಥೇಯರ ಅಗ್ರ ಕ್ರಮಾಂಕ ಬ್ಯಾಟರ್ಗಳನ್ನು ಔಟ್ ಮಾಡಿದರು. ಸಿರಾಜ್ 15 ರನ್ಗಳಿಗೆ 6 ವಿಕೆಟ್ ಪಡೆದರು. ಬುಮ್ರಾ ಮತ್ತು ಕುಮಾರ್ ದಕ್ಷಿಣ ಆಫ್ರಿಕಾದ ಉಳಿದ ನಾಲ್ಕು ವಿಕೆಟ್ಗಳನ್ನು ಕಬಳಿಸಿದರು.
<blockquote class=”twitter-tweet”><p lang=”en” dir=”ltr”>Athiya Shetty is there in Cape Town, South Africa to support husband KL Rahul & team India. <a href=”https://t.co/2cBvPGmrlE”>pic.twitter.com/2cBvPGmrlE</a></p>— Juman Sarma (@cool_rahulfan) <a href=”https://twitter.com/cool_rahulfan/status/1742531566101037408?ref_src=twsrc%5Etfw”>January 3, 2024</a></blockquote> <script async src=”https://platform.twitter.com/widgets.js” charset=”utf-8″></script>
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಡಕ್ ಔಟ್ ಆದ ನಂತರ ಭಾರತದ ನಾಯಕ ರೋಹಿತ್ ಶರ್ಮಾ ಮೊದಲ 10 ಓವರ್ಗಳಲ್ಲಿ ತಮ್ಮ ಆಕ್ರಮಣಕಾರಿ ಆಟವಾಡಿದರು. ಅವರು 39 ರನ್ ಬಾರಿಸಿದರು. ಅದರಲ್ಲಿ ಏಳು ಬೌಂಡರಿಗಳಿದ್ದವು. ಶುಬ್ಮನ್ ಗಿಲ್ (36) ಮತ್ತು ಬ್ಯಾಟಿಂಗ್ ಅನುಭವಿ ವಿರಾಟ್ ಕೊಹ್ಲಿ (46) ಕೂಡ ಪ್ರವಾಸಿ ತಂಡದ ಪರ ಎಚ್ಚರಿಕೆಯ ರನ್ ಗಳಿಸಿದರು.
ಭಾರತದ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕೂಡ ಡಕ್ ಔಟಾದರೆ, ಕೆಎಲ್ ರಾಹುಲ್ 33 ಎಸೆತಗಳಲ್ಲಿ ಕೇವಲ ಎಂಟು ರನ್ ಗಳಿಸಿದರು. ಆದಕ್ಕೆ ಮೊದಲು 4 ವಿಕೆಟ್ಗೆ 154 ರನ್ ಬಾರಿಸಿದ್ದ ಭಾರತ ಭರ್ಜರಿ ಮುನ್ನಡೆ ಸಾಧಿಸುವ ಸುಳಿವು ನೀಡಿತು. ಆದರೆ, ನಂತರ 11 ಎಸೆತಗಳ ಅಂತರದಲ್ಲಿ ತಮ್ಮ ಕೊನೆಯ ಆರು ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಅದೇ ರನ್ಗೆ ಸೀಮಿತಗೊಂಡಿತು.