ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರು ಕೋಲ್ಕೊತಾದಲ್ಲಿ ನಡೆಯುತ್ತಿರುವ ವಿಶ್ವ ಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವಿರುದ್ಧ ಆಡುತ್ತಿದ್ದಾರೆ. ಅವರ ಪಾಲಿಗೆ ಅದು ವಿಶೇಷ ದಿನ ಎನಿಸಿಕೊಳ್ಳಲಿದೆ. ಏತನ್ಮಧ್ಯೆ, ಕೊಹ್ಲಿಯ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಕೊಹ್ಲಿಗೆ ವಿಶೇಷ ರೀತಿಯಲ್ಲಿ ಬರ್ತ್ಡೇ ವಿಶಸ್ ಸಲ್ಲಿಸಿದ್ದಾರೆ.
ವಿರಾಟ್ ತಮ್ಮ ಜೀವನದ ಪ್ರತಿಯೊಂದು ಪಾತ್ರದಲ್ಲೂ ಅಕ್ಷರಶಃ ಅಸಾಧಾರಣ ಎನಿಸಿಕೊಂಡಿದ್ದಾ! ಅವರ ಸಾಧನೆಯ ಕಿರೀಟಕ್ಕೆ ಹೊಸ ಹೊಸ ಗರಿಗಳನ್ನು ಸೇರಿಸುತ್ತಲೇ ಇದ್ದಾರೆ. ಈ ಜೀವನ ಮತ್ತು ಅದರಾಚೆಗೆ ನಾನು ನಿಮ್ಮನ್ನು ಅಸಾಧಾರಣವಾಗಿ ಪ್ರೀತಿಸುತ್ತಿದ್ದೇನೆ. ಆಕಾರದಲ್ಲಿ, ರೂಪದಲ್ಲಿ ಎಲ್ಲದರ ಮೂಲಕ ಪ್ರೀತಿಯನ್ನು ಸಲ್ಲಿಸುತ್ತಿದ್ದೇನೆ ಎಂದು ಅನುಷ್ಕಾ ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮುಂಚಿತವಾಗಿ ವಿರಾಟ್ಗೆ ಶುಭ ಹಾರೈಸಿದ್ದಾರೆ.
ಸುಂದರ ದಂಪತಿ
ಸ್ಪಾರ್ ದಂಪತಿ 2013 ರಲ್ಲಿ ಮೊದಲ ಬಾರಿ ಪರಸ್ಪರ ಭೇಟಿಯಾಗಿದ್ದರು. ನಾಲ್ಕು ವರ್ಷಗಳ ನಂತರ 2017ರಲ್ಲಿ ವಿವಾಹವಾದರು. ಇಟಲಿಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆತ್ಮೀಯ ಸಮಾರಂಭದಲ್ಲಿ ದಂಪತಿಗಳು ವಿವಾಹವಾದರು. ದಂಪತಿ ತಮ್ಮ ಮೊದಲ ಮಗು ವಮಿಕಾವನ್ನು ಜನವರಿ 2021 ರಲ್ಲಿ ಮನೆಗೆ ಸ್ವಾಗತಿಸಿದ್ದರು. ಅವರು ಈಗ ತಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಊಹಾಪೋಹಗಳಿವೆ.
ಮೂಲಗಳ ಪ್ರಕಾರ, ಅನುಷ್ಕಾ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯಂತೆ ಅವರು ಮುಂದಿನ ಹಂತದಲ್ಲಿ ಔಪಚಾರಿಕವಾಗಿ ಸುದ್ದಿಯನ್ನು ಜನಪ್ರಿಯವಾಗಿ ಹಂಚಿಕೊಳ್ಳುತ್ತಾರೆ.
ಅನುಷ್ಕಾ ಇತ್ತೀಚೆಗೆ ಅನೇಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತು ಮುಂಬೈನ ಹೆರಿಗೆ ಚಿಕಿತ್ಸಾಲಯದ ಹೊರಗೆ ಏಕೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನೂತನ ಸಾಧನೆ ಮಾಡಿದ ಬರ್ತ್ ಡೇ ಬಾಯ್ ವಿರಾಟ್ ಕೊಹ್ಲಿ
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ನೂತನ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 1500* ರನ್ ಪೂರ್ತಿಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 2ನೇ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಅವರು ಅರ್ಧಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರು ಶತಕ ಬಾರಿಸಿದರೆ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್ನ 49 ಶತಕದ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಸಚಿನ್ ತೆಂಡೂಲ್ಕರ್ ಮೊದಲಿಗ
ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಮಾಜಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಸಚಿನ್ 45 ಪಂದ್ಯಗಳನ್ನು ಆಡಿ 2278 ರನ್ ಬಾರಿಸಿದ್ದಾರೆ. ಒಟ್ಟು 6 ವಿಶ್ವಕಪ್ ಶತಕ ಬಾರಿಸಿದ್ದಾರೆ. ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಅವರಿಗೆ 6ನೇ ಸ್ಥಾನ. 1996ರ ವಿಶ್ವಕಪ್ನಲ್ಲಿ 2 ಶತಕ ಬಾರಿಸಿದ್ದರು. ಇದಾದ ಬಳಿಕ 2011ರ ವಿಶ್ವಕಪ್ನಲ್ಲಿಯೂ 2 ಶತಕ ಗಳಿಸಿದ್ದರು. ಅತಿ ಹೆಚ್ಚು ವಿಶ್ವಕಪ್ ಆಡಿದ ದಾಖಲೆಯೂ ಸಚಿನ್ ಹೆಸೆರಿನಲ್ಲಿದೆ. 1992-2011ರ ವರೆಗೆ ವಿಶ್ವಕಪ್ ಆಡಿದ್ದಾರೆ.
ಪಾಂಟಿಂಗ್ಗೆ 2ನೇ ಸ್ಥಾನ
ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅವರು ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 46 ಪಂದ್ಯಗಳನ್ನು ಆಡಿ 1743 ರನ್ ಬಾರಿಸಿದ್ದಾರೆ. 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್ ಗೆದ್ದ ಸಾಧನೆಯೂ ಇವರದ್ದಾಗಿದೆ. 1996-2011ರ ತನಕದ ವಿಶ್ವಕಪ್ ಪಂದ್ಯ ಆಡಿದ್ದಾರೆ.