Site icon Vistara News

ಬರ್ತ್‌ಡೇ, ಸೆಂಚುರಿ ಬೆನ್ನಲ್ಲೇ ವಿರಾಟ್‌ ಕೊಹ್ಲಿಗೆ ಮತ್ತೊಂದು ಖುಷಿ, ಅನುಷ್ಕಾ ಶರ್ಮಾ ಪ್ರೆಗ್ನೆಂಟ್

Virat Kohli And Anushka Sharma

Anushka Sharma's 2nd Pregnancy Confirmed? Actress Flaunts Baby Bump In New Viral Video

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ (Virat Kohli) ಅವರಿಗೆ ತ್ರಿಬಲ್‌ ಖುಷಿ. ಕೆಲ ದಿನಗಳ ಹಿಂದಷ್ಟೇ 35ನೇ ಬರ್ತ್‌ಡೇ ಆಚರಿಸಿಕೊಂಡಿರುವ, ಬರ್ತ್‌ಡೇ ದಿನವೇ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ದಾಖಲೆ ಸರಿಗಟ್ಟಿರುವ ವಿರಾಟ್‌ ಕೊಹ್ಲಿ ಅವರು ಈಗ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ಹೌದು, ಅನುಷ್ಕಾ ಶರ್ಮಾ (Anushka Sharma) ಅವರು ಗರ್ಭಿಣಿಯಾಗಿದ್ದು, ‘ವಿರುಷ್ಕಾ’ ಜೋಡಿಯು ಒಟ್ಟಿಗೆ ತಿರುಗಾಡಿರುವ ವಿಡಿಯೊ ಈಗ ವೈರಲ್‌ ಆಗಿದೆ. ಅನುಷ್ಕಾ ಶರ್ಮಾ ಬೇಬಿ ಬಂಪ್‌ ವಿಡಿಯೊದಲ್ಲಿ ಸೆರೆಯಾಗಿದೆ.

ಹೌದು, ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಬೆಂಗಳೂರಿನಲ್ಲಿ ಒಟ್ಟಿಗೆ ತಿರುಗಾಡುವುದನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಅನುಷ್ಕಾ ಶರ್ಮಾ ಅವರ ಬೆಬಿ ಬಂಪ್‌ ದೃಶ್ಯವು ವಿಡಿಯೊದಲ್ಲಿ ಸೆರೆಯಾಗಿದೆ. ಹಾಗಾಗಿ, ವಿರಾಟ್‌ ಕೊಹ್ಲಿ ಪತ್ನಿಯು ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಭಾರತ ಹಾಗೂ ನೆದರ್ಲೆಂಡ್ಸ್‌ ವಿರುದ್ಧ ವಿಶ್ವಕಪ್‌ ಲೀಗ್‌ ಹಂತದ ಕೊನೆಯ ಪಂದ್ಯ ನವೆಂಬರ್‌ 12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಗಾಗಿ, ಜೋಡಿಯು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ.

ವೈರಲ್‌ ಆಗಿರುವ ವಿಡಿಯೊ

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ವಿಡಿಯೊ ವೈರಲ್‌ ಆಗುತ್ತಲೇ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. “ಶೀಘ್ರವೇ ಮರಿ ವಿರಾಟ್‌ ಬರಲಿದ್ದಾನೆ” ಎಂದು ಒಬ್ಬ ಪ್ರತಿಕ್ರಿಯಿಸಿದರೆ, “ಅಭಿನಂದನೆಗಳು ವಿರಾಟ್‌ ಭಾಯ್.‌ ಶುಭವಾಗಲಿ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ನೂರಾರು ಅಭಿಮಾನಿಗಳು ವಿರುಷ್ಕಾ ಜೋಡಿಗೆ ಶುಭ ಹಾರೈಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರ ಡಿ11ರಂದು ವಿವಾಹವಾಗಿದ್ದರು. 2021ರ ಜನವರಿಯಲ್ಲಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ವಾಮಿಕಾ ಎಂದು ಹೆಸರಿಡಲಾಗಿದೆ. 

ಇದನ್ನೂ ಓದಿ: Virat Kohli : ಕೊಹ್ಲಿಗೆ ಕ್ಯೂಟ್​ ಬರ್ತ್​ಡೇ ವಿಶಷ್​ ಕಳುಹಿಸಿದ ಪತ್ನಿ ಅನುಷ್ಕಾ ಶರ್ಮಾ

ಕೊಹ್ಲಿ ಮತ್ತು ಅನುಷ್ಕಾ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್​ಜಿಒ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯ ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version