Site icon Vistara News

WTC Final 2023 : ವಿರಾಟ್ ಔಟಾಗುತ್ತಿದ್ದಂತೆ ಆಘಾತಕ್ಕೆ ಒಳಗಾದ ಪತ್ನಿ ಅನುಷ್ಕಾ! ವಿಡಿಯೊ ವೈರಲ್​

Virat Kohli At WTC Final

#image_title

ಲಂಡನ್​: ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್ ನಾಲ್ಕನೇ ಇನ್ನಿಂಗ್ಸ್​ನಲ್ಲಿ ವಿರಾಟ್ ಕೊಹ್ಲಿ ಸ್ಕಾಟ್ ಬೋಲ್ಯಾಂಡ್ ಅವರ ಚೆಂಡನ್ನು ಎದುರಿಸಲು ಹೋಗಿ ಸ್ಮಿತ್​ ಕ್ಯಾಚ್​ ನೀಡಿ ಔಟಾದರು. ಈ ಮೂಲಕ ಭಾರತ ತಂಡದ ಗೆಲುವಿನ ಭರವಸೆಗೆ ಹೊಡೆತ ಬಿತ್ತು ಓವಲ್​​ನಲ್ಲಿ ನಡೆದ ಫೈನಲ್​ನಲ್ಲಿ 444 ರನ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ ವಿರಾಟ್​ ಔಟಾಗುವುದರೊಂದಿಗೆ ಆಘಾತಕ್ಕೆ ಬಿತ್ತು. ಅದಕ್ಕಿಂತಲೂ ಹೆಚ್ಚಾಗಿ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಪಂದ್ಯ ವೀಕ್ಷಿಸುತ್ತಿದ್ದ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಆಘಾತಕ್ಕೆ ಒಳಗಾದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಐದನೇ ದಿನದಾಟದ ಆರಂಭಿಕ 30 ನಿಮಿಷಗಳ ಕಾಲ ರಕ್ಷಣಾತ್ಮಕ ಆಟಕ್ಕೆ ಸೀಮಿತವಾಗಿದ್ದ ಕೊಹ್ಲಿ ಬೋಲ್ಯಾಂಡ್​ ಆಫ್​ಸ್ಟಂಪ್​ನಿಂದ ಹೊರಕ್ಕೆಸೆದ ಚೆಂಡನ್ನು ಬಾರಿಸಲು ಮುಂದಾದರು. ಆದರೆ ಚೆಂಡು ಸರಿಯಾಗಿ ಕನೆಕ್ಟ್​ ಆಗದೇ ಬ್ಯಾಟ್​ ಸವರಿಕೊಂಡು ಹೋಗಿ ಸ್ಲಿಪ್​ನಲ್ಲಿದ್ದ ವಿರಾಟ್ ಕೊಹ್ಲಿಯ ಕೈ ಸೇರಿತು. ಸ್ಮಿತ್​ ಪಾಲಿಗೂ ಇದು ಅಭೂತಪೂರ್ವ ಕ್ಯಾಚ್​. ಅಲ್ಲಿಗೆ ಕೊಹ್ಲಿಯ ಎರಡನೇ ಇನಿಂಗ್ಸ್​ ಬ್ಯಾಟಿಂಗ್​ 49 ರನ್​ಗಳಿಗೆ ಕೊನೆಗೊಂಡಿತು. 4ನೇ ದಿನದ ಮೂರನೇ ಸೆಷನ್​ನಲ್ಲಿ ಉತ್ತಮವಾಗಿ ಆಡಿದ್ದ ಕೊಹ್ಲಿ ಐದನೇ ದಿನ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಕೊಹ್ಲಿ ಔಟಾದ ತಕ್ಷಣ , ಕ್ಯಾಮೆರಾಗಳು ಪ್ರೇಕ್ಷಕರಲ್ಲಿ ಕುಳಿತಿದ್ದ ಅವರ ಪತ್ನಿ ಅನುಷ್ಕಾ ಶರ್ಮಾ ಅವರತ್ತ ತಿರುಗಿದ್ದವು. ವಿರಾಟ್​ ವಿಕೆಟ್ ಬೀಳುವುದನ್ನು ನೋಡಿದಅ ವರು ಆಘಾತಕ್ಕೆ ಒಳಗಾದಂತೆ ಕುಳಿತಿದ್ದರು. ಅನುಷ್ಕಾ ಅವರಂತೆಯೇ ವಿರಾಟ್​ ಕೊಹ್ಲಿಯ ಅಭಿಮಾನಿಗಳು ಕೂಡ ಆಘಾತಕ್ಕೆ ಓಳಗಾದರು.

ಇದನ್ನೂ ಓದಿ : World Cup 2023 : ಮೋದಿ ಸ್ಟೇಡಿಯಂ ಅಂದ್ರೆನೆ ಪಾಕ್​ ತಂಡಕ್ಕೆ ಭಯ! ಅಲ್ಲಿ ಆಡುವುದಿಲ್ಲ ಎಂದು ರಚ್ಚೆ ಹಿಡಿದ ಪಿಸಿಬಿ

ಡಬ್ಲ್ಯುಟಿಸಿ ಫೈನಲ್​​ನಲ್ಲಿ ದಾಖಲೆಯ ಚೇಸಿಂಗ್ ಪೂರ್ಣಗೊಳಿಸಲು ಕೊಹ್ಲಿ ನೆರವು ನೀಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆಸ್ಟ್ರೇಲಿಯಾ ಬೌಲರ್​ಗಳ ಮುಂದೆ ಭಾರತ ತಂಡದ ಆಟ ನಡೆಯಲಿಲ್ಲ.

ಇದಕ್ಕೂ ಮುನ್ನ ಭಾರತ 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ಕೊಹ್ಲಿ ತಮ್ಮ ಇನಿಂಗ್ಸ್​​ ಆರಂಭದಲ್ಲಿ ಆಸೀಸ್ ವೇಗಿಗಳನ್ನು ಎದುರಿಸಿದರೆ, ರಹಾನೆ ಕೂಡ ಸಾಥ್​ ಕೊಟ್ಟರು.

Exit mobile version