Site icon Vistara News

IND vs ZIM ODI | ಟಾಸ್‌ ಗೆದ್ದ ಭಾರತ ತಂಡದಿಂದ ಬೌಲಿಂಗ್ ಆಯ್ಕೆ

IND vs ZIM ODI

ಹರಾರೆ : ಭಾರತ ತಂಡ ಮತ್ತು ಜಿಂಬಾಬ್ವೆ ತಂಡದ ನಡುವಿನ ಏಕ ದಿನ ಸರಣಿಯ (IND vs ZIM ODI) ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಭಾರತದ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಹಿಂದಿನ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದು ಭಾರತ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ದೀಪಕ್ ಚಾಹರ್‌ ಅವರ ಬದಲಿಗೆ ಶಾರ್ದುಲ್‌ ಠಾಕೂರ್‌ ಅವಕಾಶ ಪಡೆದುಕೊಂಡಿದ್ದಾರೆ.

ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಭಾರತ ತಂಡ ೧-೦ ಮುನ್ನಡೆ ಪಡೆದುಕೊಂಡಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳುವುದು ಭಾರತದ ಗುರಿಯಾಗಿದೆ. ಅಂತೆಯೇ ಟಾಸ್‌ ಗೆದ್ದ ಬಳಿಕ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ. ಆರಂಭದಲ್ಲಿ ಬೌಲಿಂಗ್‌ಗೆ ನೆರವಾಗುವ ಪಿಚ್‌ನಲ್ಲಿ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಮೂಲಕ ಸುಲಭ ಗೆಲವು ಸಾಧಿಸುವುದು ಭಾರತದ ಯೋಜನೆಯಾಗಿದೆ.

ಕೈಗೆ ಚೆಂಡು ಬಡಿದು ಗಾಯಗೊಂಡಿದ್ದ ಆರಂಭಿಕ ಬ್ಯಾಟರ್‌ ಶಿಖರ್‌ ಧವನ್‌ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಮೂಲಕ ಹಿಂದಿನ ಪಂದ್ಯದ ಪ್ರದರ್ಶನ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರೆ, ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಪ್ರಮುಖ ಪಂದ್ಯದಲ್ಲಿ ದೀಪಕ್‌ ಚಾಹರ್‌ ವಿಶ್ರಾಂತಿ ಪಡೆದಿರುವ ಹಿನ್ನೆಲೆ ಬಹಿರಂಗವಾಗಿಲ್ಲ. ಗಾಯದ ಸಮಸ್ಯೆಯಿಂದ ಮುಕ್ತಗೊಂಡು ಆರು ತಿಂಗಳ ಬಳಿಕ ಮೈದಾನಕ್ಕೆ ಇಳಿದಿದ್ದ ಅವರು ಮತ್ತೆ ಗಾಯಗೊಂಡರೇ ಎಂಬ ಅನುಮಾನ ಮೂಡಿದೆ.

ಇದೇ ವೇಳೆ ಆತಿಥೇಯ ಜಿಂಬಾಬ್ವೆ ತಂಡ ಎರಡು ಬದಲಾವಣೆ ಮಾಡಿದ್ದು, ತಕುದ್ಜ್ವಾನಾಶೆ ಕೈತಾನೋ ಹಾಗೂ ಟನಕ ಚಿವಾಂಗ ತಂಡ ಸೇರಿಕೊಂಡಿದ್ದಾರೆ.

ಭಾರತ ತಂಡ

ಕೆ. ಎಲ್ ರಾಹುಲ್ (ನಾಯಕ), ಶಿಖರ್‌ ಧವನ್‌, ಶುಬ್ಮನ್‌ ಗಿಲ್‌, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ದೀಪಕ್‌ ಹೂಡ ಶಾರ್ದುಲ್‌ ಠಾಕೂರ್‌, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

Exit mobile version