Site icon Vistara News

AR Rahman: ಹಾಡಿನ ಮೂಲಕ ಟೀಮ್​ ಇಂಡಿಯಾಕ್ಕೆ ‘ಜೈ ಹೋ’ ಎಂದ ಎಆರ್ ರೆಹಮಾನ್

AR Rahman

AR Rahman: AR Rahman celebrates India's T20 World Cup win with 'Team India Hai' song

ಮುಂಬಯಿ: ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29, ಶನಿವಾರ ರಾತ್ರಿ ನಡೆದಿದ್ದ ಟಿ20 ವಿಶ್ವಕಪ್​ ಫೈನಲ್(​T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು. ಈ ಐತಿಹಾಸಿಕ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್(AR Rahman) ವಿಶೇಷ ಹಾಡೊಂದರ ಮೂಲಕ ಅಭಿನಂಧಿಸಿದ್ದಾರೆ.

‘ಟೀಮ್ ಇಂಡಿಯಾ ಹೈ ಹಮ್’ ಎಂಬ ಶೀರ್ಷಿಕೆಯ ಹಾಡೊಂದನ್ನು ಹಾಡುವ ಮೂಲಕ ವಿಶ್ವಕಪ್​ ಗೆದ್ದ ತಂಡಕ್ಕೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಡಿಯೊ ಸಾಂಗ್​ ಸದ್ಯ ಸಾಮಾಜಿಕ ಕಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಈ ಹಾಡಿನ ಲಿಂಕ್​ ಅನ್ನು ಎಆರ್ ರೆಹಮಾನ್ ಅವರು ತಮ್ಮ ಅಧಿಕೃತ ಟ್ವೀಟರ್​ ಎಕ್ಸ್​ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ರೆಹಮಾನ್ ಅವರು ತಮ್ಮ ಮಹಾಕಾವ್ಯವನ್ನು ವಿಶ್ವಕಪ್ ವಿಜಯದ ಸಲುವಾಗಿ ಮೆನ್ ಇನ್ ಬ್ಲೂಗೆ ಅರ್ಪಿಸಿದರು. ವೀಡಿಯೊದಲ್ಲಿ, ಭಾರತೀಯ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಆಧರಿಸಿದ ಅಜಯ್ ದೇವಗನ್ ಅವರ ‘ಮೈದಾನ್’ ಸಿನೆಮಾದ ‘ಟೀಮ್ ಇಂಡಿಯಾ ಹೈ ಹಮ್’ ಹಾಡು ಹಾಡುತ್ತಿರುವುದನ್ನು ಕಾಣಬಹುದು. ಮೂಲ ಹಾಡನ್ನು ಎಆರ್ ರೆಹಮಾನ್ ಮತ್ತು ನಕುಲ್ ಅಭ್ಯಂಕರ್ ಹಾಡಿದ್ದಾರೆ.


ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತ್ತು.

ಇದನ್ನೂ ಓದಿ Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

ಒಂದು ಪಂದ್ಯ – ಹಲವು ಪಾಠ!

ಭಾರತ ಟಿ 20 ವಿಶ್ವಕಪ್ಪನ್ನು ಅರ್ಹವಾಗಿ ಗೆದ್ದು ಬೀಗಿತು, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಗೆಲುವಿನ ವಿದಾಯ ನೀಡಿತು, ರೋಹಿತ್ ಶರ್ಮಾ ತನ್ನ ಮೊದಲ ಐಸಿಸಿ ಟ್ರೋಫಿ ಲಿಫ್ಟ್ ಮಾಡಿದರು ಅನ್ನುವುದು ಮುಂದಿನ ಇತಿಹಾಸದ ಭಾಗ. ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ. ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

ಐಪಿಎಲ್ ಪಂದ್ಯಗಳ ಉದ್ದಕ್ಕೂ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದ ಭಾರತದ ಬೌಲರಗಳಿಗೆ ಈ ವಿಶ್ವಕಪ್ ಸ್ಟಾರ್ ವ್ಯಾಲ್ಯೂ ಕೊಟ್ಟಿತು ಅನ್ನುವುದು ಭರತವಾಕ್ಯ.

Exit mobile version