ಲಂಡನ್: ಇಂಗ್ಲೆಂಡ್ ತಂಡದ ಜೋಫ್ರಾ ಆರ್ಚರ್(Jofra Archer) ಅವರಿಗೆ ಗಾಯದ ಸಮಸ್ಯೆ ಬೆನ್ನುಬಿಡುವಂತೆ ಕಾಣುತ್ತಿಲ್ಲ. ಮೊಣಕೈ ಗಾಯದಿಂದಾಗಿ ದೀರ್ಘಕಾಲದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದ ಅವರು ರಾಷ್ಟ್ರೀಯ ತಂಡದ ಪರ ಆಡಬೇಕು ಎಂಬಷ್ಟರಲ್ಲಿ ಮತ್ತೆ ಗಾಯಕ್ಕೀಡಾಗಿದ್ದಾರೆ. ಆರ್ಚರ್ ಅವರಿಗೆ ದ್ವಿತೀಯ ಬಾರಿ ಮೊಣಕೈ ಗಾಯ ಕಾಣಿಸಿಕೊಂಡ ಕಾರಣ ಅವರನ್ನಿ ಆ್ಯಶಸ್ ಟೆಸ್ಟ್ ಸರಣಿ ಸೇರಿದಂತೆ ಬೇಸಗೆ ಋತುವಿನ ಕ್ರಿಕೆಟ್ನಿಂದ ಹೊರಬಿದ್ದಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಅಧಿಕೃತ ಹೇಳಿಕೆ ನೀಡಿದೆ.
ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್ ತಂಡದ ಪರ ಆಡದಿದ್ದ ಆರ್ಚರ್ ಅವರು ಈ ಬಾರಿ ಆಸೀಸ್ ವಿರುದ್ಧದ ತವರಿನಲ್ಲಿ ನಡೆಯವುವ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಆಡಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರ್ನಿಧರಿಸಿತ್ತು. ಇದೇ ಕಾರಣಕ್ಕೆ ಐಪಿಎಲ್ ಆಡುತ್ತಿದ್ದ ಅವರನ್ನು ತವರಿಗೆ ಕರೆಸಿಕೊಳ್ಳಲಾಗಿತ್ತು. ಆದರೆ ಆರ್ಚರ್ಗೆ ಮತ್ತೆ ಮೊಣಕೈ ನೋವು ಕಾಣಿಸಿಕೊಂಡಿರುವ ಕಾರಣದಿಂದ ಇಂಗ್ಲೆಂಡ್ ತಂಡದ ಈ ಯೋಜನೆಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ IPL 2023 : ಕ್ರಿಕೆಟ್ ಕಲಿಯಲು ಪ್ರಾರಂಭಿಸಿದಾಗಿನಿಂದ ವಿರಾಟ್ ಕೊಹ್ಲಿ ನನ್ನ ಆರಾಧ್ಯ ದೈವ: ಶುಭ್ಮನ್ ಗಿಲ್
ಗಾಯದಿಂದ ಬಳಲುತ್ತಿದ್ದ ಆರ್ಚರ್ ಶಸ್ತ್ರಚಿಕಿತ್ಸೆ ಬಳಿಕ, ಈ ಹಿಂದೊಮ್ಮೆ ತಾನು ಮತ್ತೆ ಗಾಯಕ್ಕೀಡಾದರೆ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು. ಆದರೆ ಗುಣಮುಖರಾಗಿ 2 ವರ್ಷಗಳ ಬಳಿಕ ಕ್ರಿಕೆಟ್ಗೆ ಮರಳಿದ್ದರು. ಇದೀಗ ಅವರಿಗೆ ಮತ್ತೆ ಗಾಯ ಕಾಣಿಸಿಕೊಂಡಿದೆ. ಸದ್ಯ ಅವರು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಿದ್ದಾರೆ ಎಂದು ಕಾದು ನೋಡಬೇಕಿದೆ. 2019ರ ಏಕದಿನ ವಿಶ್ವ ಕಪ್ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಆರ್ಚರ್ ಪಾತ್ರ ಬಹುಮುಖ್ಯವಾಗಿತ್ತು.
“ಜೋಫ್ರಾ ಆರ್ಚರ್ ಅವರಿಗೆ ತೀವ್ರ ಬೇಸರ ಮೂಡಿಸುವಂತಾ ಅವಧಿ. ಅವರು ಮೊಣಕೈ ಗಾಯದಿಂದ ಚೇತರಿಕೆ ಕಂಡಿದ್ದರು. ಇದೀಗ ಮತ್ತೆ ಅವರು ಅದೇ ಸಮಸ್ಯೆಗೆ ಒಳಗಾಗಿದ್ದಾರೆ. ಅವರ ಚೇತರಿಕೆಗಾಗಿ ನಾವು ಹಾರೈಸುತ್ತೇವೆ. ಅವರು ಶೀಘ್ರದಲ್ಲೇ ಮತ್ತಷ್ಟು ಬಲಶಾಲಿಯಾಗಿ ತಂಡಕ್ಕೆ ವಾಪಾಸಾಗಲಿ” ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.