Jofra Archer: ಆರ್ಚರ್​ಗೆ ಮತ್ತೆ ಗಾಯ; ಆ್ಯಶಸ್​ ಸರಣಿಯಿಂದ ಔಟ್​ - Vistara News

ಕ್ರಿಕೆಟ್

Jofra Archer: ಆರ್ಚರ್​ಗೆ ಮತ್ತೆ ಗಾಯ; ಆ್ಯಶಸ್​ ಸರಣಿಯಿಂದ ಔಟ್​

ಮೊಣಕೈ ಗಾಯದಿಂದಾಗಿ ದೀರ್ಘಕಾಲದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿದ್ದ ಜೋಫ್ರಾ ಆರ್ಚರ್(Jofra Archer) ಇದೀಗ ಮತ್ತೆ ಗಾಯಕ್ಕೀಡಾಗಿದ್ದು ಆ್ಯಶಸ್​ ಟೆಸ್ಟ್​ ಸರಣಿ ಸೇರಿದಂತೆ ಬೇಸಗೆ ಋತುವಿನ ಕ್ರಿಕೆಟ್​ನಿಂದ ಹೊರಬಿದ್ದಿದ್ದಾರೆ.

VISTARANEWS.COM


on

Jofra Archer Ruled Out Of Ashes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್​: ಇಂಗ್ಲೆಂಡ್​ ತಂಡದ ಜೋಫ್ರಾ ಆರ್ಚರ್(Jofra Archer)​ ಅವರಿಗೆ ಗಾಯದ ಸಮಸ್ಯೆ ಬೆನ್ನುಬಿಡುವಂತೆ ಕಾಣುತ್ತಿಲ್ಲ. ಮೊಣಕೈ ಗಾಯದಿಂದಾಗಿ ದೀರ್ಘಕಾಲದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿದ್ದ ಅವರು ರಾಷ್ಟ್ರೀಯ ತಂಡದ ಪರ ಆಡಬೇಕು ಎಂಬಷ್ಟರಲ್ಲಿ ಮತ್ತೆ ಗಾಯಕ್ಕೀಡಾಗಿದ್ದಾರೆ. ಆರ್ಚರ್​ ಅವರಿಗೆ ದ್ವಿತೀಯ ಬಾರಿ ಮೊಣಕೈ ಗಾಯ ಕಾಣಿಸಿಕೊಂಡ ಕಾರಣ ಅವರನ್ನಿ ಆ್ಯಶಸ್​ ಟೆಸ್ಟ್​ ಸರಣಿ ಸೇರಿದಂತೆ ಬೇಸಗೆ ಋತುವಿನ ಕ್ರಿಕೆಟ್​ನಿಂದ ಹೊರಬಿದ್ದಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಅಧಿಕೃತ ಹೇಳಿಕೆ ನೀಡಿದೆ.

ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್​ ತಂಡದ ಪರ ಆಡದಿದ್ದ ಆರ್ಚರ್​ ಅವರು ಈ ಬಾರಿ ಆಸೀಸ್​ ವಿರುದ್ಧದ ತವರಿನಲ್ಲಿ ನಡೆಯವುವ ಪ್ರತಿಷ್ಠಿತ ಆ್ಯಶಸ್​ ಸರಣಿಯಲ್ಲಿ ಆಡಿಸಲು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ರ್ನಿಧರಿಸಿತ್ತು. ಇದೇ ಕಾರಣಕ್ಕೆ ಐಪಿಎಲ್ ಆಡುತ್ತಿದ್ದ ಅವರನ್ನು ತವರಿಗೆ ಕರೆಸಿಕೊಳ್ಳಲಾಗಿತ್ತು. ಆದರೆ ಆರ್ಚರ್​ಗೆ ಮತ್ತೆ ಮೊಣಕೈ ನೋವು ಕಾಣಿಸಿಕೊಂಡಿರುವ ಕಾರಣದಿಂದ ಇಂಗ್ಲೆಂಡ್ ತಂಡದ ಈ ಯೋಜನೆಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ IPL 2023 : ಕ್ರಿಕೆಟ್ ಕಲಿಯಲು ಪ್ರಾರಂಭಿಸಿದಾಗಿನಿಂದ ವಿರಾಟ್ ಕೊಹ್ಲಿ ನನ್ನ ಆರಾಧ್ಯ ದೈವ: ಶುಭ್​ಮನ್​ ಗಿಲ್

​ಗಾಯದಿಂದ ಬಳಲುತ್ತಿದ್ದ ಆರ್ಚರ್ ಶಸ್ತ್ರಚಿಕಿತ್ಸೆ ಬಳಿಕ​, ಈ ಹಿಂದೊಮ್ಮೆ ತಾನು ಮತ್ತೆ ಗಾಯಕ್ಕೀಡಾದರೆ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು. ಆದರೆ ಗುಣಮುಖರಾಗಿ 2 ವರ್ಷಗಳ ಬಳಿಕ ಕ್ರಿಕೆಟ್​ಗೆ ಮರಳಿದ್ದರು. ಇದೀಗ ಅವರಿಗೆ ಮತ್ತೆ ಗಾಯ ಕಾಣಿಸಿಕೊಂಡಿದೆ. ಸದ್ಯ ಅವರು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಿದ್ದಾರೆ ಎಂದು ಕಾದು ನೋಡಬೇಕಿದೆ. 2019ರ ಏಕದಿನ ವಿಶ್ವ ಕಪ್​ನಲ್ಲಿ ಇಂಗ್ಲೆಂಡ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ಆರ್ಚರ್​ ಪಾತ್ರ ಬಹುಮುಖ್ಯವಾಗಿತ್ತು.

“ಜೋಫ್ರಾ ಆರ್ಚರ್ ಅವರಿಗೆ ತೀವ್ರ ಬೇಸರ ಮೂಡಿಸುವಂತಾ ಅವಧಿ. ಅವರು ಮೊಣಕೈ ಗಾಯದಿಂದ ಚೇತರಿಕೆ ಕಂಡಿದ್ದರು. ಇದೀಗ ಮತ್ತೆ ಅವರು ಅದೇ ಸಮಸ್ಯೆಗೆ ಒಳಗಾಗಿದ್ದಾರೆ. ಅವರ ಚೇತರಿಕೆಗಾಗಿ ನಾವು ಹಾರೈಸುತ್ತೇವೆ. ಅವರು ಶೀಘ್ರದಲ್ಲೇ ಮತ್ತಷ್ಟು ಬಲಶಾಲಿಯಾಗಿ ತಂಡಕ್ಕೆ ವಾಪಾಸಾಗಲಿ” ಎಂದು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

SHAFALI VERMA: 40 ವರ್ಷದ ಟೆಸ್ಟ್​ ದಾಖಲೆ ಮುರಿದ ಭಾರತದ ಶಫಾಲಿ ವರ್ಮ

SHAFALI VERMA: 197 ಎಸೆತ ಎದುರಿಸಿದ ಶಫಾಲಿ 23 ಆಕರ್ಷಕ ಬೌಂಡರಿ ಮತ್ತು 8 ಬಿಗ್​ ಹಿಟ್​ ಸಿಕ್ಸರ್​ ನೆರವಿನಿಂದ 205 ರನ್​ ಬಾರಿಸಿ ರನೌಟ್​ ಸಂಕಟಕ್ಕೆ ಸಿಲುಕಿದರು.

VISTARANEWS.COM


on

SHAFALI VERMA
Koo

ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈಯಲ್ಲಿ ಸಾಗುತ್ತಿರುವ ಏಕೈಕ ಟೆಸ್ಟ್​ ಪಂದ್ಯದ ಮೊದಲ ದಿನವೇ ಭಾರತ ಮೇಲುಗೈ ಸಾಧಿಸಿದೆ. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ(SHAFALI VERMA) ಮತ್ತು ಸ್ಮೃತಿ ಮಂಧಾನ(Smriti Mandhana) ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. ಈ ಪಂದ್ಯದಲ್ಲಿ ಶಫಾಲಿ ಬಿರುಸಿನ ಶತಕ ಬಾರಿಸುವ ಮೂಲಕ 40 ವರ್ಷಗಳ ಹಿಂದಿನ ಟೆಸ್ಟ್​ ದಾಖಲೆಯೊಂದನ್ನು ಮುರಿದಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತಕ್ಕೆ ಶಫಾಲಿ ವರ್ಮ ಮತ್ತು ಮಂಧಾನ ಶತಕದ ಆಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. ಶಫಾಲಿ 113 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 137 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ ಈ 40 ವರ್ಷಗಳ ಹಳೆಯ ದಾಖಲೆಯನ್ನು ಶಫಾಲಿ ವರ್ಮಾ ಮುರಿದಿದ್ದಾರೆ.

ಇದನ್ನೂ ಓದಿ T20 World Cup Final: ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳುವುದೇ ದಕ್ಷಿಣ ಆಫ್ರಿಕಾ?; ನಾಳೆ ಫೈನಲ್​

ಸ್ಮೃತಿ ಮಂಧಾನ 122 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಏಕದಿನ ಬಳಿಕ ಟೆಸ್ಟ್​ನಲ್ಲಿಯೂ ಶತಕ ಬಾರಿಸಿದ ಸಾಧನೆ ಮಾಡಿದರು. ಒಟ್ಟು 161 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 27 ಫೋರ್​ಗಳೊಂದಿಗೆ 149 ರನ್ ಬಾರಿಸಿ ವಿಕೆಟ್​ ಕಳೆದುಕೊಂಡರು.

ದ್ವಿಶತಕ ಬಾರಿಸಿದ ಶಫಾಲಿ


ಶಫಾಲಿ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಮೂಲಕ ಭಾರತ ಪರ ದ್ವಿಶತಕ ಬಾರಿಸಿದ 2ನೇ ಆಟಗಾರ್ತಿ ಎನಿಸಿಕೊಂಡರು. ಮಿಥಾಲಿ ರಾಜ್​ ಅವರು ಭಾರತ ಪರ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ್ತಿ. 2002ರಲ್ಲಿ ಇಂಗ್ಲೆಂಡ್​ ವಿರುದ್ಧ 214 ರನ್​ ಬಾರಿಸಿದ್ದರು.

ಸದ್ಯ ಭಾರತ 3 ವಿಕೆಟ್​ ಕಳೆದುಕೊಂಡು 400 ರನ್​ಗಳ ಗಡಿ ದಾಟಿದೆ. ಮೊದಲ ದಿನವೇ ಈ ಬೃಹತ್​ ಮೊತ್ತ ಪೇರಿಸಿದ್ದನ್ನು ನೋಡುವಾಗ ದಾಖಲೆಯ ಮೊತ್ತವನ್ನು ಗಳಿಸುವ ಸಾಧ್ಯತೆ ಇದೆ. ನಾಯಕಿ ಹರ್ಮನ್​ಪ್ರೀತ್​ ಮತ್ತು ಜೇಮಿಮಾ ರೋಡ್ರಿಗಸ್​ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. 197 ಎಸೆತ ಎದುರಿಸಿದ ಶಫಾಲಿ 23 ಆಕರ್ಷಕ ಬೌಂಡರಿ ಮತ್ತು 8 ಬಿಗ್​ ಹಿಟ್​ ಸಿಕ್ಸರ್​ ನೆರವಿನಿಂದ 205 ರನ್​ ಬಾರಿಸಿ ರನೌಟ್​ ಸಂಕಟಕ್ಕೆ ಸಿಲುಕಿದರು.

Continue Reading

ಕ್ರೀಡೆ

T20 World Cup Final: ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳುವುದೇ ದಕ್ಷಿಣ ಆಫ್ರಿಕಾ?; ನಾಳೆ ಫೈನಲ್​

T20 World Cup Final: ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಪ್ರದರ್ಶನ ಮತ್ತು ಅದೃಷ್ಟ ನೋಡುವಾಗ ಪ್ರಶಸ್ತಿ ಗೆದ್ದು ಚೋಕರ್ಸ್ ಹಣೆಪಟ್ಟಿಯನ್ನು ಕಳಚುವ ಸಾಧ್ಯತೆಯೊಂದು ಕಂಡುಬಂದಿದೆ. ಸೋಲುವ ಪಂದ್ಯವನ್ನು ಕೂಡ ಅಚ್ಚರಿ ಎಂಬಂತೆ 1 ರನ್​ನಿಂದ ಗೆದ್ದ ನಿದರ್ಶನ ಕೂಡ ಇದೆ.

VISTARANEWS.COM


on

T20 World Cup Final
Koo

ಬಾರ್ಬಡೋಸ್​: ದಕ್ಷಿಣ ಆಫ್ರಿಕಾ ತಂಡ ತನ್ನ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಇನ್ನೊಂದೆ ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ನಾಳೆ ನಡೆಯುವ ಟಿ20 ವಿಶ್ವಕಪ್​ ಟೂರ್ನಿಯ ಫೈನಲ್(T20 World Cup Final)​ ಪಂದ್ಯದಲ್ಲಿ ಭಾರತದ(South Africa vs India Final) ಸವಾಲು ಎದುರಿಸಲಿದೆ. 32 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಮೊದಲ ಬಾರಿಗೆ ಅಜೇಯವಾಗಿ ಫೈನಲ್ ಪ್ರವೇಶಿಸಿರುವವ ಹರಿಣ ಪಡೆಗೆ ಈ ಬಾರಿಯಾದರೂ ಕಪ್​ ಗೆಲ್ಲುವ ಭಾಗ್ಯ ಇದೆಯಾ ಎಂದು ಕಾದು ನೋಡಬೇಕಿದೆ. ಈ ಹಿಂದೆ ಆಡಿದ ಎಲ್ಲ 7(ಏಕದಿನ, ಟಿ20) ಸೆಮಿಫೈನಲ್​ ಪಂದ್ಯದಲ್ಲಿಯೂ ಸೋಲು ಕಂಡಿತ್ತು.

ದಕ್ಷಿಣ ಆಫ್ರಿಕಾ ತಂಡ(South Africa) 1992ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ​ ಸೆಮಿಫೈನಲ್​ ಪ್ರವೇಶಿಸಿತ್ತು. ಇನ್ನೇನು ಪಂದ್ಯ ಗೆಲ್ಲುತ್ತದೆ ಎನ್ನುವಷ್ಟರಲ್ಲಿ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. 13 ಎಸೆತಗಳಲ್ಲಿ ಗೆಲುವಿಗೆ 22 ರನ್ ಬೇಕಿತ್ತು.​ ಮತ್ತೆ ಆಟ ಮುಂದುವರಿದಾಗ ಮೊಟ್ಟ ಮೊದಲ ಬಾರಿಗೆ ಪರಿಚವಾಗಿದ್ದ ಡಕ್​ವರ್ತ್​ ಲೂಯಿಸ್​ ನಿಯದ ಪ್ರಕಾರ ಹರಿಣ ಪಡೆಗೆ 1 ಎಸೆತದಲ್ಲಿ 22 ರನ್​ ಗಳಿಸುವ ಗುರಿ ನೀಡಲಾಯಿತು. ಈ ಪಂದ್ಯ ಸೋತ ಬಳಿಕ 1999ರಲ್ಲಿ ಬರ್ಮಿಂಗ್‌ಹ್ಯಾಮ್​ನಲ್ಲಿ ಆಸ್ಟ್ರೇಲಿಯ ವಿರುದ್ದದ ಪಂದ್ಯ ಟೈ ಆಗಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯ ಲೆಕ್ಕಾಚಾರದ ಮೂಲಕ ಫೈನಲ್ ಪ್ರವೇಶಿಸಿ ಕಪ್ ಗೆದ್ದಿತ್ತು. 2007 ರಲ್ಲಿ ಆಸ್ಟ್ರೇಲಿಯ ವಿರುದ್ಧ ಗ್ರಾಸ್‌ ಐಲೆಟ್‌ ನಲ್ಲಿ 7 ವಿಕೆಟ್‌ ಸೋಲು ಅನುಭವಿಸಿ ಆಘಾತಕ್ಕೆ ಗುರಿಯಾಗಿತ್ತು. 2015 ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಆಕ್ಲೆಂಡ್‌ ನಲ್ಲಿ 4 ವಿಕೆಟ್‌ ಸೋಲು ಅನುಭವಿಸಿ ಚೋಕರ್ಸ್ ಎಂದು ಮತ್ತೆ ಕರೆಸಿಕೊಳ್ಳುವ ಸ್ಥಿತಿ ಹರಿಣಗಳ ಪಾಲಿಗೆ ಬಂದೊದಗಿತ್ತು.

ಆದರೆ, ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಪ್ರದರ್ಶನ ಮತ್ತು ಅದೃಷ್ಟ ನೋಡುವಾಗ ಪ್ರಶಸ್ತಿ ಗೆದ್ದು ಚೋಕರ್ಸ್ ಹಣೆಪಟ್ಟಿಯನ್ನು ಕಳಚುವ ಸಾಧ್ಯತೆಯೊಂದು ಕಂಡುಬಂದಿದೆ. ಏಕೆಂದರೆ ಪ್ರತಿ ಬಾರಿ ಮಳೆಯಿಂದ ಹಿನ್ನಡೆ ಅನುಭವಿಸುವ ದಕ್ಷಿಣ ಆಫ್ರಿಕಾ ಈ ಬಾರಿ ವರದಾನವಾಗಿಯೇ ಪರಿಣಮಿಸಿದೆ. ಜತೆಗೆ ಸೋಲುವ ಪಂದ್ಯವನ್ನು ಕೂಡ ಅಚ್ಚರಿ ಎಂಬಂತೆ 1 ರನ್​ನಿಂದ ಗೆದ್ದ ನಿದರ್ಶನ ಕೂಡ ಇದೆ. ಇದನೆಲ್ಲ ನೋಡುವಾಗ ಐಡೆನ್​ ಮಾರ್ಕ್ರಮ್​ ಐತಿಹಾಸಿಕ ಕಪ್​ ಎತ್ತಿ ಹಿಡಿಯುವ ಸಾಧ್ಯತೆಯೊಂದು ಕಂಡುಬಂದಿದೆ.

ಇದನ್ನೂ ಓದಿ IND Vs SA T20 WC Final: ಫೈನಲ್​ ಪಂದ್ಯಕ್ಕೂ ಮಳೆ ಭೀತಿ; ಪಂದ್ಯ ರದ್ದಾದರೆ ವಿಜೇತರ ನಿರ್ಧಾರ ಹೇಗೆ?

ಡಿ ಕಾಕ್​ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್​ಗಳು​ ಇದುವರೆಗೂ ನಿರೀಕ್ಷತ ಬ್ಯಾಟಿಂಗ್​ ಪ್ರದರ್ಶನ ತೋರದಿದ್ದರು. ಕೂಡ ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆದ್ದಿದ್ದಾರೆ. ಆದರೆ ಫೈನಲ್​ ಪಂದ್ಯದಲ್ಲಿ ಎಲ್ಲರು ಬ್ಯಾಟಿಂಗ್​ ನಡೆಸುವ ಅಗತ್ಯವಿದೆ. ಏಕೆಂದರೆ ಇಲ್ಲಿ ಸೋತರೆ ಮತ್ತೊಂದು ಪಂದ್ಯವಿಲ್ಲ.

Continue Reading

ಕ್ರೀಡೆ

Ajinkya Rahane: ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ ಅಜಿಂಕ್ಯ ರಹಾನೆ

Ajinkya Rahane: ರಹಾನೆ ಭಾರತ ಪರ 85 ಟೆಸ್ಟ್​ ಪಂದ್ಯಗಳನ್ನಾಡಿ 5077 ರನ್​ ಬಾರಿಸಿದ್ದಾರೆ. 12 ಶತಕ ಬಾರಿಸಿದ್ದಾರೆ. 2016ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 188 ರನ್‌ ಪೇರಿಸಿರುವುದು ಅವರ ವೈಯಕ್ತಿಕ ಶ್ರೇಷ್ಠ ಇನಿಂಗ್ಸ್‌ ಆಗಿದೆ.

VISTARANEWS.COM


on

Ajinkya Rahane
Koo

ಮುಂಬಯಿ: ಟೀಮ್​ ಇಂಡಿಯಾದ ಟೆಸ್ಟ್​ ಸ್ಪೆಷಲಿಸ್ಟ್‌ ಅಜಿಂಕ್ಯ ರಹಾನೆ(Ajinkya Rahane) ಅವರು ಕೌಂಟಿ ಕ್ರಿಕೆಟ್​ನತ್ತ ಮಖಮಾಡಿದ್ದಾರೆ. ಭಾರತ ತಂಡದಲ್ಲಿ ಅವಕಾಶ ಸಿಗದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇಂಗ್ಲಿಷ್‌ ಕೌಂಟಿ ಲೀಸೆಸ್ಟರ್‌ಶೈರ್‌(Leicestershire) ತಂಡದ ಪರ ಆಡಲು ಸಿದ್ಧವಾಗಿದ್ದಾರೆ. ಈ ವಿಚಾರವನ್ನು ಕ್ಲಬ್‌ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಸದ್ಯ ಸಾಗುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನ(County Championship) ಕೊನೆಯ ಐದು ಪಂದ್ಯಗಳಲ್ಲಿ ರಹಾನೆ ಬ್ಯಾಟ್​ ಬೀಸಲಿದ್ದಾರೆ.

36ರ ಹರೆಯದ ರಹಾನೆ ಅವರು ವಿಯಾನ್‌ ಮುಲ್ಡರ್‌ ಅವರ ಸ್ಥಾನಕ್ಕೆ ಲೀಸೆಸ್ಟರ್‌ಶೈರ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಲ್ಡರ್‌ ಅವರು ಮುಂದಿನ ಆಗಸ್ಟ್‌ ವೇಳೆ ದಕ್ಷಿಣ ಆಫ್ರಿಕಾ ತಂಡದ ಪರ ವೆಸ್ಟ್‌ಇಂಡೀಸ್‌ಗೆ ಪ್ರಯಾಣಿಸಲಿದ್ದಾರೆ. ಹೀಗಾಗಿ ಈ ಸ್ಥಾನದಲ್ಲಿ ರಹಾನೆ ಆಡಲಿದ್ದಾರೆ. ವಿಶ್ವದ ಹಲವು ಕ್ರಿಕೆಟ್​ ಆಟಗಾರರು ಕೂಡ ತಮ್ಮ ಕ್ರಿಕೆಟ್​ ಪ್ರದರ್ಶನ ಕುಂಠಿತಗೊಂಡಾಗ ಕೌಂಟಿ ಆಡಿ ಮತ್ತೆ ಫಾರ್ಮ್​ ಕಂಡುಕೊಂಡಿದ್ದಾರೆ.

ರಹಾನೆ ಭಾರತ ಪರ 85 ಟೆಸ್ಟ್​ ಪಂದ್ಯಗಳನ್ನಾಡಿ 5077 ರನ್​ ಬಾರಿಸಿದ್ದಾರೆ. 12 ಶತಕ ಬಾರಿಸಿದ್ದಾರೆ. 2016ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 188 ರನ್‌ ಪೇರಿಸಿರುವುದು ಅವರ ವೈಯಕ್ತಿಕ ಶ್ರೇಷ್ಠ ಇನಿಂಗ್ಸ್‌ ಆಗಿದೆ. ಈ ಹಿಂದೆ ಆಸ್ಟ್ರೇಲಿಯ ನೆಲದಲ್ಲಿ ಭಾರತ 36 ರನ್​ಗೆ ಕುಸಿದು ಮುಖಭಂಗ ಅನುಭವಿಸಿದ್ದ ಸಂದರ್ಭದಲ್ಲಿ ಹಂಗಾಮಿಯಾಗಿ ತಂಡದ ನಾಯಕತ್ವ ವಹಿಸಿದ ರಹಾನೆ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ತಂದು ಬಳಿಕ ಐತಿಹಾಸಿಕ ಸರಣಿ ಗೆಲುವು ತಂದಿತ್ತ ಖ್ಯಾತಿಯನ್ನು ಹೊಂದಿದ್ದಾರೆ. ರಹಾನೆ ಭಾರತ ಪರ ಕೊನೆಯ ಟೆಸ್ಟ್​ ಪಂದ್ಯ ಆಡಿದ್ದು 2023ರ ವಿಂಡೀಸ್​ ಪ್ರವಾಸದಲ್ಲಿ ಇದಾದ ಬಳಿಕ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ.

ಇದನ್ನೂ ಓದಿ IND vs WI: ಜಿಂಕೆಯಂತೆ ಜಿಗಿದು ಕ್ಯಾಚ್​ ಪಡೆದ ಅಜಿಂಕ್ಯ; ವಿಡಿಯೊ ವೈರಲ್​

ಕೌಂಟಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಮುಂಬರುವ ಬಾಂಗ್ಲಾದೇಶ ವಿರುದ್ಧದ ತವರಿನ ಟೆಸ್ಟ್​ ಸರಣಿಯಲ್ಲಿ ರಹಾನೆ ತಂಡಕ್ಕೆ ಆಯ್ಕೆಯಾಗಬಹುದು. ಭಾರತ ಮತ್ತು ಬಾಂಗ್ಲಾ ನಡುವಣ ಟೆಸ್ಟ್​ ಸರಣಿ ಸೆಪ್ಟೆಂಬರ್​ನಲ್ಲಿ ನಡೆಯಲಿದೆ. 2 ಪಂದ್ಯಗಳ ಟೆಸ್ಟ್​ ಸರಣಿ ಇದಾಗಿದೆ.

ಕೊಹ್ಲಿ ಕ್ಲಾಸ್ ಪ್ಲೇಯರ್ ಎಂದ ನಾಯಕ ರೋಹಿತ್​

ಪ್ರೊವಿಡೆನ್ಸ್‌: ಈ ಬಾರಿಯ ಐಪಿಎಲ್‌ನಲ್ಲಿ ರನ್‌ ಪ್ರವಾಹ ಹರಿಸಿದ ವಿರಾಟ್‌ ಕೊಹ್ಲಿ(Virat Kohli) ಅವರು ಹಾಲಿ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿನ್ನೂ(T20 World Cup 2024) ಗುಣಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಸಹಜವಾಗಿಯೇ ಇದು ಅಗ್ರ ಕ್ರಮಾಂಕದ ಮೇಲೆ ಒತ್ತಡ ತರುತ್ತಿದೆ. ಇಂಗ್ಲೆಂಡ್​ ವಿರುದ್ಧದ ಸೆಮಿ ಫೈನಲ್​ ಪಂದ್ಯದಲ್ಲಿಯೂ ಕೊಹ್ಲಿ ಒಂದಂಕಿಗೆ ಸೀಮಿತರಾಗಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಪಂದ್ಯದ ಬಳಿಕ ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ವೈಫಲ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೋಹಿತ್​, ಖಂಡಿತವಾಗಿಯೂ ವಿರಾಟ್ ಓರ್ವ ಕ್ಲಾಸ್ ಪ್ಲೇಯರ್, ಅವರೊಬ್ಬ ಬಿಗ್ ಮ್ಯಾಚ್ ಪ್ಲೇಯರ್. ಪ್ರತಿಯೊಬ್ಬ ಆಟಗಾರನು ತನ್ನ ವೃತ್ತಿಜೀವನದಲ್ಲಿ ಏರಿಳಿತ ಕಾಣುವುದು ಸಹಜ. ಆದರೆ, ಕೊಹ್ಲಿ ವಿಷಯದಲ್ಲಿ ಫಾರ್ಮ್ ದೊಡ್ಡ ವಿಷಯವಲ್ಲ. ಅವರು ಫೈನಲ್‌ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ನನಗೆ ನಂಬಿಕೆ ಇದೆ ಫೈನಲ್​ನಲ್ಲಿ ಅವರು ಶ್ರೇಷ್ಠ ಬ್ಯಾಟಿಂಗ್​ ತೋರುವ ಮೂಲಕ ಎಲ್ಲ ಟೀಕೆಗಳಿಗೂ ಬ್ಯಾಟ್​ನಿಂದಲೇ ಉತ್ತರಿಸಲಿದ್ದಾರೆ ಎಂದು ಹೇಳುವ ಮೂಲಕ ಕೊಹ್ಲಿಗೆ ಬೆಂಬಲ ಸೂಚಿಸಿದರು.

Continue Reading

ಕ್ರೀಡೆ

IND Vs SA T20 WC Final: ಫೈನಲ್​ ಪಂದ್ಯಕ್ಕೂ ಮಳೆ ಭೀತಿ; ಪಂದ್ಯ ರದ್ದಾದರೆ ವಿಜೇತರ ನಿರ್ಧಾರ ಹೇಗೆ?

IND Vs SA T20 WC Final: ಇಂಗ್ಲೆಂಡ್​ ಮತ್ತು ಭಾರತ ನಡುವಣ ಸೆಮಿ ಫೈನಲ್​ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಇದೀಗ ಫೈನಲ್​ ಪಂದ್ಯಕ್ಕೂ ಹವಾಮಾನ ಇಲಾಖೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಶೇ.70ರಷ್ಟು ಮಳೆಯಾಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

VISTARANEWS.COM


on

IND Vs SA T20 WC Final
Koo

ಬಾರ್ಬಡೋಸ್: ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಫೈನಲ್(IND Vs SA T20 WC Final)​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ(ಶನಿವಾರ) ಬಾರ್ಬಡೋಸ್​ನಲ್ಲಿ(Barbados Weather Forecast) ಕೂಟದ ಅಜೇಯ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಭಾರತ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಆದರೆ, ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.

ಶೇ.70ರಷ್ಟು ಮಳೆ ಸಾಧ್ಯತೆ


ಇಂಗ್ಲೆಂಡ್​ ಮತ್ತು ಭಾರತ ನಡುವಣ ಸೆಮಿ ಫೈನಲ್​ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಇದೀಗ ಫೈನಲ್​ ಪಂದ್ಯಕ್ಕೂ ಹವಾಮಾನ ಇಲಾಖೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಶೇ.70ರಷ್ಟು ಮಳೆಯಾಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಒಂದೊಮ್ಮೆ ನಿಗದಿತ ದಿನ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನಕ್ಕೆ ಮುಂದುವರಿಯಲಿದೆ. ಸೂಪರ್​ 8 ಹಂತದಲ್ಲಿ ಮತ್ತು ಸೆಮಿಫೈನಲ್​ ಪಂದ್ಯ ಮಳೆಯಿಂದ ಮೀಸಲು ದಿನವೂ ಫಲಿತಾಂಶ ಕಾಣದಿದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸ್ಥಾನ ಮುಂದಿನ ಹಂತಕ್ಕೇರುತ್ತದೆ. ಆದರೆ ಫೈನಲ್​ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ.

ಜಂಟಿ ವಿಜೇತರ ಘೋಷಣೆ


ಒಂದು ವೇಳೆ ಫೈನಲ್‌(T20 World Cup 2024) ಪಂದ್ಯ ಮೀಸಲು ದಿನದಲ್ಲಿಯೂ ನಡೆಯದೇ ಹೋದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಳೆಯಿಂದ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಭಾರತ ಮತ್ತು ಆತಿಥೇಯ ಶ್ರೀಲಂಕಾ ಎರಡು ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಲಾಗಿತ್ತು.

ಇದನ್ನೂ ಓದಿ IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

ಕೊಲಂಬೊದಲ್ಲಿ ನಡೆದಿದ್ದ ಆ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ 5 ವಿಕೆಟ್​ಗೆ 244 ರನ್ ಗಳಿಸಿತು. ಭಾರತ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿದ ವೇಳೆ ಜೋರಾಗಿ ಮಳೆ ಸುರಿಯಿತು. ಮಳೆ ಬಿಡುವು ನೀಡದೆ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಕೂಡ ಪೂರ್ಣ ಫಲಿತಾಂಶ ಕಾಣದಿದ್ದರೆ ಇತ್ತಂಡಗಳು ಕೂಡ ಜಂಟಿ ಚಾಂಪಿಯನ್​ ಎನಿಸಿಕೊಳ್ಳಲಿದೆ. ಭಾರತ 2ನೇ ಕಪ್​ ಗೆದ್ದರೆ, ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದಂತಾಗುತ್ತದೆ.

ಮುಖಾಮುಖಿ


ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ 26 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 14 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳಲ್ಲಿ ಆಡಿದ್ದು, ಭಾರತ 4 ಪಂದ್ಯ ಗೆದ್ದಿದೆ. 2 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಕಂಡಿದೆ. 2022ರಲ್ಲಿ ನಡೆದಿದ್ದ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಅಂತರದ ಸೋಲು ಕಂಡಿತ್ತು.

Continue Reading
Advertisement
petrol Price
ಅವಿಭಾಗೀಕೃತ3 mins ago

Petrol Price : ಮುಂಬೈನಲ್ಲಿ ಪೆಟ್ರೋಲ್​ ಬೆಲೆ ಇಳಿಸಿದ ಮಹಾರಾಷ್ಟ್ರ ಸರ್ಕಾರ

Rahul Gandhi
ದೇಶ10 mins ago

Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

POCSO Case
ಕರ್ನಾಟಕ29 mins ago

POCSO Case: ಪೋಕ್ಸೊ ಪ್ರಕರಣ; ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಚಾರ್ಜ್‌ಶೀಟ್‌; ಮುಂದೇನು?

SHAFALI VERMA
ಕ್ರಿಕೆಟ್38 mins ago

SHAFALI VERMA: 40 ವರ್ಷದ ಟೆಸ್ಟ್​ ದಾಖಲೆ ಮುರಿದ ಭಾರತದ ಶಫಾಲಿ ವರ್ಮ

Rich Wedding
ಪ್ರಮುಖ ಸುದ್ದಿ44 mins ago

ಮದುವೆಗೆ ಹೋದವರಿಗೆ 66 ಸಾವಿರ ರೂ. ನಗದು, ಭರ್ಜರಿ ಗಿಫ್ಟ್‌ ಕೊಟ್ಟ ದಂಪತಿ; ಎಲ್ಲಿ ಅಂತೀರಾ…?‌

Actor Darshan A young woman came to Parappa Agrahara to see Darshan
ಕ್ರೈಂ47 mins ago

Actor Darshan: ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ನೋಡಲು ಆಗಮಿಸಿದ ಯುವತಿ; ಯಾರಾಕೆ?

Valmiki Corporation Scam Zameer Ahmed appointed as Ballari district in-charge minister
ಬಳ್ಳಾರಿ51 mins ago

Valmiki Corporation Scam: ಬಿ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್‌ ಅಹ್ಮದ್ ನೇಮಕ

T20 World Cup Final
ಕ್ರೀಡೆ1 hour ago

T20 World Cup Final: ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳುವುದೇ ದಕ್ಷಿಣ ಆಫ್ರಿಕಾ?; ನಾಳೆ ಫೈನಲ್​

Kannada Serials TRP Lakshmi Baramma in Top 5 new serials not in demand
ಕಿರುತೆರೆ1 hour ago

Kannada Serials TRP: ಟಾಪ್‌ 5ನಲ್ಲಿ ʻಲಕ್ಷ್ಮೀ ಬಾರಮ್ಮʼ; ಹೊಸ ಧಾರಾವಾಹಿಗಿಲ್ಲ ಬೇಡಿಕೆ!

ಕರ್ನಾಟಕ1 hour ago

CM Siddaramaiah: ಮೇಕೆದಾಟು ಯೋಜನೆಗೆ ತಮಿಳುನಾಡಿನ ತಕರಾರಿಲ್ಲ, ಕೇಂದ್ರ ಅನುಮತಿ ನೀಡಬೇಕು: ಸಿಎಂ ಸಿದ್ದರಾಮಯ್ಯ ಆಗ್ರಹ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ21 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌