Site icon Vistara News

ಫಿಫಾ ಅರ್ಹತಾ ಸುತ್ತಿನ ಪಂದ್ಯ; ಉರುಗ್ವೆ ವಿರುದ್ಧ ಆಘಾತಕಾರಿ ಸೋಲು ಕಂಡ ಮೆಸ್ಸಿ ಪಡೆ

Uruguay hands Argentina

ಕತಾರ್​: ಫಿಫಾ ವಿಶ್ವಕಪ್‌ ಚಾಂಪಿಯನ್​ ಲಿಯೋನೆಲ್‌ ಮೆಸ್ಸಿ(Lionel Messi) ಸಾರಥ್ಯದ ಅರ್ಜೆಂಟೀನಾ(Argentina) ತಂಡ ಫಿಫಾ ​ವಿಶ್ವಕಪ್ ಅರ್ಹತಾ ಸುತ್ತಿನ(FIFA World Cup qualifiers) ಪಂದ್ಯದಲ್ಲಿ ಉರುಗ್ವೆ(ARG vs URU) ವಿರುದ್ಧ ಆಘಾತಕಾರಿ ಸೋಲು ಕಂಡಿದೆ. ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಅಜೇಯವಾಗಿ ಮುನ್ನಡೆಯುತ್ತಿದ್ದ ಮೆಸ್ಸಿ ಪಡೆಗೆಯ ಓಟಕ್ಕೆ ಉರುಗ್ವೆ ಬ್ರೇಕ್​ ಹಾಕಿದೆ.

ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಉರುಗ್ವೆ ವಿರುದ್ಧ 2-0 ಗೋಲುಗಳ ಅಂತರದಿಂದ ಹೀನಾಯವಾಗಿ ಸೋಲು ಕಂಡಿದೆ. ಗುರುವಾರ ನಡೆದಿದ್ದ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಆಟವಾಡಿದ ಉರುಗ್ವೆ ಮೇಲುಗೈ ಸಾಧಿಸಿತು. ಪಂದ್ಯದ 10ನೇ ನಿಮಿಷದಲ್ಲಿ ಉರುಗ್ವೆ ಗೋಲಿನ ಖಾತೆಯನ್ನು ತೆರೆಯಿತು. ಬಳಿಕ 42ನೇ ನಿಮಿಷದಲ್ಲಿ ಮಟಿಯಾಸ್ ವಿನಾ ಮತ್ತೊಂದು ಗೋಲು ಬಾರಿಸಿ ಮುನ್ನಡೆ ತಂದು ಕೊಟ್ಟರು. ಬಳಿಕ ರಕ್ಷಣಾತ್ಮಕ ಆಟವಾಡಿದ ಉರುಗ್ವೆ ಯಾವುದೇ ಹಂತದಲ್ಲಿಯೂ ಅರ್ಜೆಂಟೀನಾಗೆ ಗೋಲಿನ ಅವಕಾಶವನ್ನೇ ನೀಡಲಿಲ್ಲ.

ಸೌದಿ ವಿರುದ್ಧ ಸೋಲು ಕಂಡಿದ್ದ ಅರ್ಜೆಂಟೀನಾ

ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ಆಡಿದ ಲೀಗ್​ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಅಚ್ಚರಿಯ ಸೋಲು ಕಂಡಿತ್ತು. ಬಲಿಷ್ಠ ಅರ್ಜೆಂಟೀನಾಗೆ ಸೋಲುಣಿಸಿದ ಸೌದಿ ತಂಡಕ್ಕೆ ಭಾರಿ ಉಡುಗೊರೆ ನೀಡಿ ಗೌರವಿಸಲಾಗಿತ್ತು. ಆದರೆ ಈ ಪಂದ್ಯದ ಸೋಲಿನ ಬಳಿಕ ಮೆಸ್ಸಿ ಪಡೆ ಆಡಿದ ಎಲ್ಲ ಪಂದ್ಯವನ್ನು ಗೆದ್ದು ಕಪ್​ ಎತ್ತಿ ಸಂಭ್ರಮಿಸಿತ್ತು.

ಉರುಗ್ವೆ ವಿರುದ್ಧ ಸೋಲು ಕಂಡರೂ, ಮೆಸ್ಸಿ ಬಳಗ ಅಗ್ರಸ್ಥಾನದಲ್ಲೇ ಮುಂದುವರಿದಿದೆ. 10 ತಂಡಗಳ ದಕ್ಷಿಣ ಅಮೆರಿಕದ ಅರ್ಹತಾ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ಐದು ಪಂದ್ಯಗಳಿಂದ 12 ಅಂಕಗಳನ್ನು ಪಡೆದಿದೆ. ಉರುಗ್ವೆ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

2026ರ ಫಿಫಾ ವಿಶ್ವಕಪ್ ಪಂದ್ಯಾವಳಿ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಮೂರು ದೇಶಗಳು ಜಂಟಿ ಆತಿಥ್ಯ ವಹಿಸಿದೆ. ಟೂರ್ನಿ ಅರ್ಹಾತಾ ಸುತ್ತು ನಡೆಯುತ್ತಿದೆ. ವಿಶ್ವಕಪ್‌ನಲ್ಲಿ ಒಟ್ಟು 48 ತಂಡಗಳು ಭಾಗವಹಿಸಲಿವೆ. ಹೀಗಾಗಿ ದಕ್ಷಿಣ ಅಮೆರಿಕ ಅರ್ಹತಾ ಪಂದ್ಯಾವಳಿಯಲ್ಲಿ ಅಗ್ರ ಆರು ತಂಡಗಳು ನೇರವಾಗಿ ಟೂರ್ನಿಗೆ ಪ್ರವೇಶ ಪಡೆಯುತ್ತವೆ.

ಪಂದ್ಯ ಗೆದ್ದ ಭಾರತ

ಭಾರತ ತಂಡವೂ ಕೂಡ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡುತ್ತಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತ ಕುವೈತ್​ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದೆ. ಪಂದ್ಯದ ಕೊನೆಯ 75ನೇ ನಿಮಿಷದಲ್ಲಿ ಭಾರತದ ಪರ ಮನ್ವಿರ್​ ಸಿಂಗ್ ಗೋಲು ದಾಖಲಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

Exit mobile version