Site icon Vistara News

FIFA World Cup | ತವರಿಗೆ ತಲುಪಿದ ಅರ್ಜೆಂಟೀನಾ, ಅಭಿಮಾನಿಗಳಿಂದ ಭರ್ಜರಿ ಸ್ವಾಗತ

FIFA World Cup

ಬ್ಯೂನೋಸ್​ ಐರಿಸ್​ : ಫಿಫಾ ವಿಶ್ವ ಕಪ್​ ವಿಜೇತ ಅರ್ಜೆಂಟೀನಾ ತಂಡದ ಸದಸ್ಯರು ಮಂಗಳವಾರ (ಡಿಸೆಂಬರ್​20) ತವರೂರು ಅರ್ಜೆಂಟೀನಾ ತಲುಪಿದರು. ವಿಶೇಷ ವಿಮಾನದ ವಿಮಾನದ ಮೂಲಕ ಬ್ಯೂನಸ್​ ಐರಿಸ್​ನಲ್ಲಿ ಇಳಿದ ಅವರಿಗೆ ಸ್ಥಳೀಯ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆಯಿತು.

ನಾಯಕ ಲಿಯೋನೆಲ್​ ಮೆಸ್ಸಿ ಟ್ರೋಫಿಯನ್ನು ಹಿಡಿದುಕೊಂಡು ವಿಮಾನ ಇಳಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ತವರಿಗೆ ಬಂದಿಳಿದ ವಿಶ್ವ ವಿಜೇತ ಆಟಗಾರರಿಗೆ ಅಭಿಮಾನಿಗಳು ಕೆಂಪು ಹಾಸಿನ ಸ್ವಾಗತವನ್ನೂ ನೀಡಿದ್ದಾರೆ. ಅದೇ ರೀತಿ ಆಟಗಾರರು ತೆರೆದ ಬಸ್​ ಮೂಲಕ ಪ್ರಮುಖ ಬೀದಿಯಲ್ಲಿ ಸಾಗಿ ಅಭಿಮಾನಿಗಳ ಶುಭ ಹಾರೈಸಿದರು.

ರಾತ್ರಿಯ ಬಳಿಕ ಒಬೆಲಿಸ್ಕ್​ನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆಗೊಂಡಿದೆ. ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಮಾನಿಗಳಿಗೆ ಶುಭ ಹಾರೈಸಲಿದ್ದಾರೆ.

ಇದನ್ನೂ ಓದಿ | FIFA World Cup | ಅರ್ಜೆಂಟೀನಾ ಗೋಲ್​ ಕೀಪರ್​ ವರ್ತನೆಗೆ ಅಭಿಮಾನಿಗಳ ಬೇಸರ

Exit mobile version