Site icon Vistara News

FIFA World Cup | ಕೆನಡಾ ತಂಡವನ್ನು ಮಣಿಸಿದ ಮೊರಾಕ್ಕೊ; ಪೋಲೆಂಡ್‌ ವಿರುದ್ಧ ಅರ್ಜೆಂಟೀನಾಗೆ ಜಯ

ದೋಹಾ : ಫಿಫಾ ವಿಶ್ವ ಕಪ್‌ನಲ್ಲಿ ಗುರುವಾರ ನಡೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಫಲಿತಾಂಶ ಮೂಡಿ ಬಂದಿದ್ದು ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಕೆನಡಾ ವಿರುದ್ಧ ಮೊರಾಕ್ಕೊ ತಂಡ ಜಯ ಕಂಡರೆ, ಸೌದಿ ಅರೇಬಿಯಾ ವಿರುದ್ಧ ಮೆಕ್ಸಿಕೊ ಜಯ ಸಾಧಿಸಿತು. ಅರ್ಜೆಂಟೀನಾ ತಂಡ ಪೋಲೆಂಡ್‌ ಬಳಗವನ್ನು ಮಣಿಸಿದರೆ ಕ್ರೊಯೇಷಿಯಾ ಮತ್ತು ಬೆಲ್ಜಿಯಮ್‌ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಗುಂಪು ಎಫ್‌ನಲ್ಲಿ ಕೆನಡಾ ವಿರುದ್ಧ ಮೊರಾಕ್ಕೊ ೨-೧ ಗೋಲ್‌ಗಳಿಂದ ಜಯ ಗಳಿಸಿತು. ಮೊರಾಕ್ಕೊ ಪರ ಹಕೀಮ್‌ ಜಿಯೆಚ್‌ (೪ನೇ ನಿಮಿಷ), ಯೂಸುಫ್‌ (೨೩ನೇ ನಿಮಿಷ) ತಲಾ ಒಂದು ಗೋಲ್‌ ಬಾರಿಸಿದರೆ, ಕೆನಡಾ ಪರ ನಾಯೆಫ್‌ ಅಗೆರ್ಡ್‌ (೪೦ನೇ ನಿಮಿಷ) ಏಕೈಕ ಗೋಲ್‌ ಬಾರಿಸಿದರು.

ಸಿ ಗುಂಪಿನ ಹಣಾಹಣಿಯಲ್ಲಿ ಸೌದಿ ಅರೇಬಿಯಾ ವಿರುದ್ಧ ಮೆಕ್ಸಿಕೊ ೨-೧ ಗೋಲ್‌ಗಳಿಂದ ಜಯ ಸಾಧಿಸಿತು. ಮೆಕ್ಸಿಕೊ ಪರ ಹೆನ್ರಿ ಮಾರ್ಟಿನ್‌ (೪೭ ನಿಮಿಷ), ಲೂಯಿಸ್‌ ಚಾವೆಜ್‌ (೫೨ನೇ ನಿಮಿಷ) ಗೋಲ್‌ ಬಾರಿಸಿದರೆ, ಸೌದಿ ಅರೇಬಿಯಾ ಪರ ಸಲೀಮ್‌ ಅಲ್ದಾವಾಸರಿ (೯೦+೫) ನಿಮಿಷದಲ್ಲಿ ಒಂದು ಗೋಲ್‌ ಬಾರಿಸಿದರು.

ಸಿ ಗುಂಪಿನ ಇನ್ನೊಂದು ಹಣಾಹಣಿಯಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡ ಪೋಲೆಂಡ್‌ ವಿರುದ್ಧ ೨-೦ ಗೋಲ್‌ಗಳ ಅಂತರದಿಂದ ವಿಜಯ ಸಾಧಿಸಿತು. ಅಲೆಕ್ಸಿಸ್‌ ಮ್ಯಾಕ್‌ ಅಲ್ಲಿಸ್ಟರ್ (೪೬ನೇ ನಿಮಿಷ), ಜೂಲಾನ್‌ ಅಲ್ವಾರೆಜ್‌ (೬೭ನೇ ನಿಮಿಷ) ಗೋಲ್‌ ಬಾರಿಸಿದರು.

ಎಫ್‌ ಗುಂಪಿನಲ್ಲಿರುವ ಕ್ರೊಯೇಷಿಯಾ ಮತ್ತು ಬೆಲ್ಜಿಯಮ್‌ ನಡುವಿನ ಹಣಾಹಣಿ ಗೋಲ್‌ ರಹಿತವಾಗಿ ಡ್ರಾದಲ್ಲಿ ಮುಕ್ತಾಯಕಂಡಿತು.

ಇದನ್ನೂ ಓದಿ | FIFA World Cup | ಕತಾರ್‌ನ ಫ್ಯಾನ್‌ ಫೆಸ್ಟಿವಲ್‌ನಲ್ಲಿ ತ್ರಿವರ್ಣ ಧ್ವಜ ಬೀಸಿದ ಬಾಲಿವುಡ್‌ ನಟಿ ನೋರಾ ಫತೇಹಿ

Exit mobile version