Site icon Vistara News

Arjun Tendulkar: ಕೊಹ್ಲಿಯಂತೆ ‘ಫಿಟ್​ ಆ್ಯಂಡ್​ ಫೈನ್’ ಆದ ಸಚಿನ್​ ಪುತ್ರ ಅರ್ಜುನ್​ ತೆಂಡೂಲ್ಕರ್​

Arjun Tendulkar flaunts his six-pack abs in his latest pic

ಮುಂಬಯಿ: ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುತ್ತಿರುವ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್(Arjun Tendulkar)​ ಅವರು ವಿರಾಟ್​ ಕೊಹ್ಲಿಯಂತೆ(Virat Kohli) ಫಿಟ್​ನೆಸ್(fitness)​ ಮೊರೆಹೋಗಿದ್ದಾರೆ. ಜಿಮ್​ನಲ್ಲಿ ಕಠಿಣ​ ವರ್ಕೌಟ್‌ ಮಾಡಿ​ ಸಿಕ್ಸ್​ ಪ್ಯಾಕ್(six-pack) ಬರಿಸಿಕೊಂಡು ‘ಫಿಟ್​ ಆ್ಯಂಡ್​ ಫೈನ್​’ ಆದ ಫೋಟೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಕೂಡ ಫಿಟ್​ನೆಸ್​ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದನ್ನು ತಿಳಿಸಿದ್ದಾರೆ.

16ನೇ ಆವೃತ್ತಿಯ ಐಪಿಎಲ್​ನಲ್ಲಿ ಪದಾರ್ಪಣೆ ಮಾಡಿರುವ ಅರ್ಜುನ್​ ತೆಂಡೂಲ್ಕರ್​ ಹಕವು ಬಾರಿ ಗಾಯದ ಸಮಸ್ಯೆಗೆ ಸಿಲುಕಿದ್ದರು. ಇದೇ ಕಾರಣಕ್ಕೆ ಅವರು ಫಿಟ್​ನೆಸ್​ ಮೊರೆ ಹೋಗಿದ್ದು ವಿರಾಟ್​ ಕೊಹ್ಲಿಯಂತೆ ಸಿಕ್ಸ್​ ಪ್ಯಾಕ್​ ಬರಿಸಿಕೊಂಡಿದ್ದಾರೆ. ಈ ಫೋಟೊ ವೈರಲ್​ ಆಗಿದೆ. ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರು ವಿಶ್ವ ಕ್ರಿಕೆಟ್​ನ ಅತ್ಯಂತ ಫಿಟ್​ ಆಗಿರುವ ಕ್ರಿಕೆಟಿಗ ಅವರ ಫಿಟ್​ನೆಸ್​ ಬಗ್ಗೆ ಬದ್ಧ ವೈರಿ ಪಾಕ್​ ತಂಡದ ಆಟಗಾರರು ಸೇರಿ ವಿಶ್ವದ ಅನೇಕರು ಸಲಾಂ ಹೊಡೆದಿದ್ದಾರೆ.

ಇತರ ಆಟಗಾರರಂತೆ ವಿರಾಟ್ ಕೊಹ್ಲಿ ಗಾಯಗೊಂಡು ತಂಡದಿಂದ ಹೊರಗುಳಿದ ನಿದರ್ಶನ ಇದುವರೆಗೂ ಕಂಡುಬಂದಿಲ್ಲ. ಕ್ರಿಕೆಟ್​ ಆಡಲು ಆರಂಭಿಸಿದ ದಿನದಿಂದಲೂ ಕೊಹ್ಲಿ ತಮ್ಮ ಫಿಟ್​ನೆಸ್​ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಕ್ರಿಕೆಟ್​ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಫಿಟ್​ನೆಸ್​ ವಿಚಾರದಲ್ಲಿ ಅದೆಷ್ಟೋ ಕ್ರಿಕೆಟ್​ ಆಟಗಾರರಿಗೆ ಸ್ಫೂರ್ತಿಯಾಗಿರುವ ಕೊಹ್ಲಿಯ ಹಾದಿಯನ್ನೇ ಇದೀಗ ಅರ್ಜುನ್​ ತೆಂಡೂಲ್ಕರ್​ ಅನುಸರಿಸಿದಂತಿದೆ.

ಪ್ರಸಕ್ತ ಸಾಲಿನ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಪದಾರ್ಪಣೆ ಮಾಡಿದ್ದ ಅರ್ಜುನ್‌ ತೆಂಡೂಲ್ಕರ್‌ (Arjun Tendulkar), ಇದೀಗ ತಮ್ಮ ಫೀಟ್‌ನೆಸ್‌ ಕಡೆಗೆ ಗಮನ ಕೊಡುತ್ತಿದ್ದಾರೆ. ಟೀಮ್ ಇಂಡಿಯಾದಲ್ಲಿ ಫಿಟ್‌ನೆಸ್ ವಿಷಯದಲ್ಲಿ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ.

ಮೈದಾನದಲ್ಲಿ ಪಂದ್ಯದ ವೇಳೆಗೆ ಚುರುಕಾಗಿ ಓಡಾಡುವ ವಿರಾಟ್‌ರಂತಹ ಫೀಟ್‌ನೆಸ್‌ ಪಡೆಯಲು ಯುವ ಕ್ರಿಕೆಟಿಗರು ಬಯಸುತ್ತಾರೆ. ಇದೀಗ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ಕೂಡಾ ಅದೆ ದಾರಿಯಲ್ಲಿ ನಡೆಯುತ್ತಿದ್ದಾರೆ.

ಇದನ್ನೂ ಓದಿ BCCI Summons: ಅರ್ಜುನ್​ ತೆಂಡೂಲ್ಕರ್​ ಸೇರಿ 20 ಮಂದಿ ಯುವ ಆಟಗಾರರಿಗೆ ಸಮನ್ಸ್​ ನೀಡಿದ ಬಿಸಿಸಿಐ

ಅರ್ಜುನ್​ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶರ್ಟ್ ಲೆಸ್ ಮಿರರ್ ಸೆಲ್ಫಿಯನ್ನು ಹಂಚಿಕೊಂಡು, ತಮ್ಮ ಸಿಕ್ಸ್‌ಪ್ಯಾಕ್‌ ದೇಹ ತೋರಿಸಿದ್ದಾರೆ. ಅವರ ಈ ಫೋಟೊ ಕಂಡು ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 23 ವರ್ಷದ ಆಲ್​ರೌಂಡರ್​ ಅರ್ಜುನ್​ ಪ್ರಸ್ತುತ ದೇವಧರ್ ಟ್ರೋಫಿಯಲ್ಲಿ ದಕ್ಷಿಣ ವಲಯ ತಂಡದಲ್ಲಿ ಸ್ಥಾನಪಡೆದಿದ್ದಾರೆ. ಆದರೆ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಗೋವಾ ಪರ ಪದಾರ್ಪಣೆ ಮಾಡಿದ ಅವರು ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ತಂದೆಯ ದಾಖಲೆಯನ್ನು ಸರಿಗಟ್ಟಿದ್ದರು.

Exit mobile version